ಪುಟ:ನಿರ್ಮಲೆ.djvu/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೧೦೧ ಮನೆಯ ಸುತ್ತಲೂ ಗಿರಿಗಿರಿತಿರುಗಿದರೂ ಮನೆಯನ್ನು ಸೇರದಿರುವುದಾವುದು? ಪ್ರಿಯ:-ಅದೇನು ? ನನಗೆ ತಿಳಿಯದು, ದುರ್ಮ : ಹಾಗಾದರೆ ಹೇಳುವೆನು, ಕೇಳು, ಇಲ್ಲಿಂದ ಐದ ಮೈಲಿ ಸುತ್ತಳತೆಯಲ್ಲಿರುವ ಕೊಳ, ಬೊರಜು, ಕುಂಟೆ, ಬೇಲಿ, ತೋಟಗ ಳೆಲ್ಲವನ್ನೂ ಅವರಿಗೆ ಚೆನ್ನಾಗಿ ತೋರಿಸಿ ಮಂದಟ್ಟು ಮಾಡಿಕೊಟ್ಟೆನು. ಪ್ರಿಯ;-ಓಹೋ, ತಿಳಿಯಿತು, ತೋಟದ ಸುತ್ತಲೂ ತಿರುಗಿಸಿ ಕೊಂಡು ಬಂದೆಯೊ? ಅವರು ಊರುಬಿಟ್ಟು ಮುಂದಕ್ಕೆ ಹೋಗುತಲಿರುವಂತೆ ತಿಳಿದುಕೊಂಡಿದ್ದರೇನೋ ? ನೀನು ಊರು ಸುತ್ತಲೂ, ತಿರುಗಿಸಿ, ತಿರುಗಿಸಿ, ಪ್ರದಕ್ಷಿಣೆ ಮಾಡಿಸಿ, ಮರಳಿ ಮನೆಗೆ ಕರೆತ೦ದೆಯೋ? ದುರ್ಮ: - ಪ್ರಯಾಣದ ಸೊಗಸನ್ನು ಹೇಳುವೆನು, ಕೇಳ, ಮೊದ ಲು ಅವರನ್ನು ಹೂವಿನ ಓಣಿಗೆ ಕರೆದುಕೊಂಡು ಹೋದೆನು. ಅಲ್ಲಿ ಗಾಡಿ ಯ ಚಕ್ರವು ಕೆಸರಿನಲ್ಲಿ ಸಿಕ್ಕಿಕೊಂಡಿತು, ಆಮೇಲೆ ಆ ತಲೆಕಮನಗುಡ್ಡದ ಮೇಲೆ ಗಾಡಿಯನ್ನು ಓಡಿಸಿ, ಅವರ ಮೈಯನ್ನೆಲ್ಲಾ ಹುಣ್ಣು ಹುಣ್ಣು ಮಾಡಿ ಸಿದನು, ಅನಂತರ ಮೇಲಿನಿಂದ ಕೆಳಕ್ಕೆ ಕರೆತರುವಾಗ ಗಿಡಕ್ಕೆ ಗಾಡಿ ಯನ್ನು ಬಡಿಸಿ, ಕೊನೆಗೆ ತೋಟದ ಒಳಿಯಲ್ಲಿರುವ ಕೊಳದಬಳಿಯಲ್ಲಿ ಅವ ರನ್ನು ಸೌಖ್ಯವಾಗಿ ಕುಳ್ಳಿರಿಸಿ ಇಲ್ಲಿಗೆ ಬಂದೆನು. ಪ್ರಿಯ:- ಏನೂ ಅನಾಹುತಗಳು ಸಂಭವಿಸಿಲ್ಲವಷ್ಟೆ ? - ದುರ್ಮ:- ಇಲ್ಲ, ಇಲ್ಲ, ನಮ್ಮತ್ತೆಯು ಭಯದಿಂದ ಹುಚ್ಚು ಹಿಡಿದ ವಳಂತೆ ಇರುವಳು, ನಲ್ವತ್ತು ಮೈಲಿ ದೂರಪ್ರಯಾಣಮಾಡಿರುವುದಾಗಿ ತಿಳಿದಿ ರುವುದರಿಂದ ಅವಳು ಮುಂದಕ್ಕೆ ಹೆಜ್ಜೆ ಇಡಲಾರಳು. ನಿನಗಾಗಿ ಸಿದ್ದ ಪಡಿ ಸಿದ್ದ ಕುದುರೆಯು ಈಗಲೂ ಸಿದ್ಧವಾಗಿದೆ. ಕಮಲೆಯನ್ನು ಎತ್ತಿಕೊಂಡು ಓಡು, ಓದು, ನಿನ್ನ ನ್ನು ಅಟ್ಟಿ ಕೊಂಡು ಯಾವ ಪ್ರಾಣಿಯೂ ಈಗ ಬರುವಂತಿಲ್ಲ. - ಪ್ರಿಯ:- ಪ್ರಿಯ ಮಿತ್ರನೆ, ನಿನ್ನ ಉಪಕಾರಕ್ಕಾಗಿ ನಾನೆಷ್ಟು ಕೃತ ಜ್ಞನಾಗಿದ್ದರೂ ತೀರದು.