ಪುಟ:ನಿರ್ಮಲೆ.djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ತಿಗೆ ಇನ್ನೂ ವಿವೇಚನಾಶಕ್ತಿಯೇ ಬಂದಿಲ್ಲ, ನನಗೆ ಐವತ್ತೇಳು ವರ್ಷಗಳು ಹೇಗಾದುವು ? ಸುಳ್ಳು, ಸುಳ್ಳು, ! ನಿಮ್ಮ ಮಾತು ಶುದ್ಧ ಸುಳ್ಳು. ದೇವ:-ದುರ್ಮತಿಗೆ ವಿವೇಕ ನಾಶಕ್ತಿಯು ಬರುವುದೇ ಇಲ್ಲವೆಂದು ನನಗೆ ಪೂರ್ಣ ಭರವಸೆಯುಂಟು, ಅವನನ್ನು ಬಹಳ ಚೆನ್ನಾಗಿ ಬಳಸಿರುವೆ. ಚಂಡಿ:-ಪ್ರಮಾದವೇನು ? ಪಾಪ, ಗು ಬಳೆಯಲಿ ! ನಮ್ಮ ಣ್ಣನ ಆಸ್ತಿಯು ಬೇಕಾದಷ್ಟಿರುವುದು, ದುರ್ಮತಿಯು ವಿದ್ಯೆಯನ್ನು ಕಲಿತು ತನ್ನ ಅನ್ನ ವನ್ನು ತಾನು ಸಂಪಾದಿಸಿಕೊಳ್ಳಬೇಕಾಗಿಲ್ಲ. ವರುಷ ಒಂದಕ್ಕೆ ಒಂದು ಸಾರದ ಐನೂರು ರೂಪಾಯಿಗಳನ್ನು ವ್ಯಯಮಾಡಲು, ವಿಶೇಷ ವಿವೇಚನಾಶಕ್ತಿಯಾಗಲಿ 3»ಣೆಯಾಗ ಬೇಕಾಗಿಲ್ಲ ವಲ್ಲ ! ದೇವ:-ವಿದ್ಯೆಯೆ ? ಅವನ ಎದೆಯನ್ನು ಎರಡಾಗಿ ಸೀಳಿ ಪಂಜನ್ನು ಹಿಡಿದುಕೊಂಡು ಹುಡುಕಿದರೂ, ಎರಡಕ್ಷರವು ಸಿಲುಕುವುದಿಲ್ಲ, ಕುಚೋದ್ಯ, ತುಂಟಾಟಗಳೇ ತುಂಟಾಟಗಳೇ ಅವನ ವಿದ್ಯೆ, ಅನ: ಆಸ್ತಿ, ಚಂಡಿ:-ಅದನ್ನೆಲ್ಲ ವಿನೋದಕ್ಕಾಗಿ ಅವರು ಮಾಡುವನು. ಪ್ರಿಯ ! ಆ ತಬ್ಬಲಿಗೆ ಆಡಲಿಕ್ಕೆ ಸ್ವಲ್ಪ ಅವಕಾಶವನ್ನು ಕೊಡಬೇಡವೆ ? ವಿನೋದ ಕ್ಯಾಗಿ ಅವನು ಚೇಷ್ಟೆ ಗಳನ್ನು ಮಾಡುವನು. ದೇವ:- ಅದೇ ಚೇಷ್ಟೆಗಳು ? ಅದಕ್ಕೆ ಸ್ವಲ್ಪವೂ ಅವಕಾಶವನ್ನು ಕೊಡಕೂಡದು, ಅವನನ್ನು ಕೊಳದಲ್ಲಿ ಮುಳುಗಿಸಿಬಿಡಬೇಕು ಪರಿಚಾರ ಕರ ಪಾದರಕ್ಷೆಗಳನ್ನು ಸುಡುವುದು, ಸೇವಕರನ್ನೆ ಯರನ್ನು ಹೆದರಿಸುವುದು, ಬೆಕ್ಕಿನಮರಿಗಳನ್ನು ಪೀಡಿಸುವುದು, ಇವುಗಳೆಲ್ಲ ವಿನೋದವೊ ? ನಿನ್ನ ಆ ಮುದ್ದು ದುರ್ಮತಿಗೆ ಬರುವುದೆಲ್ಲ ಇಂತಹ ವಿನೋದಗಳಲ್ಲವೆ ? ನಿನ್ನ ಆ ಅರಗಿಣಿಯು ನಿನ್ನೆಯದಿನ ನಾನು ಕುರ್ಚಿಯಮೇಲೆ ಮಾತನಾಡುತ್ತ ಕುಳಿ ತಿದ್ದಾಗ, ನನ್ನ ಕೂದಲನ್ನು ಕುರ್ಚಿಗೆ ಬಲವಾಗಿ ಬಿಗಿದುಬಿಟ್ಟಿದ್ದನು. ಚಂಚಲೆಯು ಇಲ್ಲಿಗೆ ಬಂದಾಗ ನಾನು ಮೇಲಕ್ಕೆದ್ದರೆ, ಕುರ್ಚಿಯ ನನ್ನ ಸಂಗಡ ಎದ್ದಿತು, ವಿನೋದವಂತೆ ವಿನೋದ !