ಪುಟ:ನಿರ್ಮಲೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ದೇವ: ಬಹು ಧೈರ್ಯವಾಗಿ ನಿಶ್ಚಸಿರುವಿಯಲ್ಲವೆ ? ಈಗಲೇ ಅವನನ್ನು ಎದುರುಗೊಳ್ಳಲು ಸೇವಕರನ್ನು ಸಿದ್ದ ಪಡಿಸಬೇಕು, ನಮ್ಮ ಮನೆಗೆ | ಅತಿಥಿಗಳು ಬರುವುದೇ ಇಲ್ಲವಾದುದರಿಂದ, ನೂತನ ಸೈನಿಕರನ್ನು ಪ್ರಧನ ಸಮಾರಂಭಕ್ಕೆ ತರಬೇತು ಮಾಡುವಂತೆ, ನಾನು ಸೇವಕರನ್ನು ತಯಾರು ಮಾಡಬೇಕಾಗಿದೆ. '(ಹೊರಡುವನು.) ನಿರ್ಮಲೆ-(ಸ್ವಗತ॰) ನನ್ನ ತಂದೆಯು ಹೇಳಿದ ಎಲ್ಲಾ ವೃತ್ತಾಂತ ಗಳಿ೦ದ ನನಗೇನೋ ಒಂದು ಬಗೆಯ ವಿಚಿತ್ರವಾದ ಚಿತ್ತವೃತ್ತಿಯುಂಟಾಗಿ ರುವುದು, ಪ್ರಾಯಸ್ಥ, ಸುಂದರ,' ಎಂದು ಕಡೆಯಲ್ಲಿ ಹೇಳಿದ ಗುಣಗ ಇನ್ನು ಮೊದಲು ನಾನು ಆರೋಪಿಸುವೆನು. ವಿವೇಕ, ಸಾಧುಗಳು, ಸದ್ದು ಣಗಳೇ ! ಅವು ನನಗೂ ಒಪ್ಪಿತವೇ ಅಹುದು, ಆದರೆ, ಗುಂಪಿಗೆ ಸೇರ ದಿರುವುದು, ನಾಡುಕೆ, ಇವೇ ಅವನಲ್ಲಿರುವ ದುರ್ಗುಣಗಳು, ತನ್ನ ಹೆಂಡತಿ ಯನ್ನು ನೋಡಿ ನೋಡಿ ಹಿಗ್ಗುವ ಗುಣವನ್ನು ಕಲಿಸಿಬಿಟ್ಟರೆ, ಅವನ ಗಾಬರಿ ಸ್ವಭಾವವು ತಾನಾಗಿಯೇ ಹೋಗುವುದಲ್ಲವೆ ? ಅಹುದು ! ಅಹುದು! ನನ್ನ ಕಯ್ದೆ ಸಿಕ್ಕಿ, (ಪ್ರಕಾಶಂ) ಅಯ್ಯೋ ! ಕೂಸುಹುಟ್ಟುವುದಕ್ಕೆ ಮುಂಚೆ ಕುಲಾಬಿಯನ್ನು ಹೊಲಿಸಿದಂತೆ' ಇನ್ನೂ ಪತಿಯೇ ದೊರಕಿಲ್ಲ, ಆಗಲೇ ಪತಿಯನ್ನು ಈರೀತಿ, ಆರೀತಿ, ಮಾಡಬೇಕೆಂದು ಆಲೋಚಿಸುತ್ತಿರುವೆನಲ್ಲಾ? - [ಕಮಲಾವತಿಯು ಬರುವಳು] ನಿರ್ಮ:_ಕಮಲಾ ! ನೀನು ಬಂದುದು ಬಹಳ ಆನಂದವಾಯಿತು. ಈದಿನ ನಾನು ಹೇಗಿರುವೆನು ಹೇಳು? ನನ್ನ ನ್ನು ನೋಡಿದರೆ, ಏನಾದರೂ ವಿಶೇಷವು ಕಾಣುವುದೆ ? ಇಂದು ನಾನು ಬಹಳ ಚೆನ್ನಾಗಿ ಕಾಣುವೆನಲ್ಲವೆ? ನನ್ನ ಮುಖವು ಹೇಗಿದೆ ? ಕಮ:..ನನಗ ಒಹಳ ಆನಂದವೇ ! ಎಲ್ಲಿ ? ನೋಡುವ ! ಇದೇನು ನಿನ್ನ ಮುಖಕಾಂತಿಯು ಹೀಗೆ ಪರಿವರ್ತನವನ್ನು ಹೊಂದಿದೆ? ಯಾರು ನಿನ್ನನ್ನು ಪೀಡಿಸುತ್ತಿರುವರು ? ದುರ್ಮತಿಯೋ ? ಬೆಕ್ಕೊ ? ಯಾರು? ಆಥವಾ ನೀನು