ಪುಟ:ನಿರ್ಮಲೆ.djvu/೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೧೩ ನನ್ನ ಸಿದ್ದಾಂತವು!! ಅದಕ್ಕಾಗಿ ಏನನ್ನಾ ದರೂ ಸಂತವಿಡುವೆನು. ಇಂತಹ ರಿಂದ ಮತಬೋಧನೆಯ ಕಾರವೆ? ಅವರ ಸಂಬಂಧವು ನಮಗೆಬೇಡ. ಅವರು ಹಾಳಾಗಲಿ ! ಆನಂದಮಂದಿರಕ್ಕೆ ಮಿಗಿಲಾದುದುಂಟೆ? ಎಲ್ಲಿ? ಭರ್ಜರಿ, ಬಲು ಸೊಗಸಾದ, ಸೊಗಸಿನಮೇಲೆ ಸೊಗಸಾದ, ಹಳೆದ್ರಾಕ್ಷಾರಸವನ್ನು ತೆಗೆದು ಕೊಂಡುಬನ್ನಿ ! ಕುಡಿದು ಕುಣಿದಾಡುವ! ಆನಂದಮಂದಿರಕ್ಕೆ ಎಂದೆಂದೂ ಆನಂದವಿರಲಿ! ಕೋಳಿಯಜೂಜು, ಮೊಲದಬೇಟೆ, ಪಾರಿವಾಳದಆಟ, ಇವ ಕ್ಕೆಲ್ಲಾ, ಬನ್ನಿ ರಣ್ಣಾ, ಬನ್ನಿ ರೊ!! ಎಲ್ಲಿ? ಆನಂದಮಂದಿರದ ಶ್ರೇಯೋಭಿವೃ ದಿಗಾಗಿ ಎಲ್ಲರೂ ಒಮ್ಮೆ ಪಾನಮಾಡಿರಿ! ಬನ್ನಿ ರೋ!! ಬನ್ನಿ ರೊ!! ಹೇಗಿದೆ? ಹೇಗಿದೆ ? (ಎಲ್ಲರೂ ಸುರೆಯನ್ನು ನಾನಮಾಡುವರು.) ಎಲ್ಲ ರೂ:-ಬಲುಸೊಗಸಣ್ಣ! ಬಲುಸೊಗಸು. ಒಬ್ಬನು:ನಮ್ಮ ದೊರೆಗೆ ಸರಸ್ವತಿಯು ಒಲಿದಿರುವಳು, ಎರಡನೆಯವನು:-ನಮ್ಮ ದೊರೆಯ ಮಾತೇ ನನಗೆ ಅಮೃತವು. ಎಂದೂ ಕೀಳುವಿಚಾರವೇ ಇಲ್ಲವೊ? ಮೂರನೆಯವನು:-ಕೀಳುವಿಚಾರವೆ? ಅದಹಾಳಾಗಲಿ! ಅದನ್ನು ನಾನು ಸಹಿಸಲಾರೆನು. - ನಾಲ್ಕನೆಯವನು:-ಒಳ್ಳೆಯದು ಎಂದಿದ್ದರೂ ಒಳ್ಳೆಯದೇ! ದೊಡ್ಡ ಮನುಷ್ಯನು ಎಂದೂ ದೊಡ್ಡ ಮನುಷ್ಯನೇ? ಮೂರನೆಯವನು:-ಅದೇ ನನಗೂ ಸಮ್ಮತವಾದ ಮಾತು. ಎರಡನೆಯವನು:-ಏನು, ಅನ್ಯಾಯ ? ನಮ್ಮದೊರೆಯ ಆಸ್ತಿಯು ಇನ್ನೂ ಅವನ ವಶವಾಗಿಲ್ಲ, ಅವನ ವಶವಾದದಿನವೇ ನಮ್ಮಗಳ ಭಾಗ್ಯೂ ದಯವೂ ಆದಂತೆ ಭಾವಿಸಬಹುದು, ಹತ್ತು ಮೈಲಿ ಸುತ್ತಿನಲ್ಲಿರುವ ಮಿತ್ರರಿ ಗೆಲ್ಲಾ ಅ೦ದೇಹಬ್ಬ, ದುರ್ಮ:- ಪ್ರಿಯಮಿತ್ರರೊಡನೆ ಆನಂದವಾಗಿರುವುದೆಂತೆಂದು ಅಂದು ನಾನು ಎಲ್ಲರಿಗೂ ತೋರಿಸುವೆನು.