ಪುಟ:ನಿರ್ಮಲೆ.djvu/೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬ ನಿರ್ಮಲೆ ಅವಳು ನನ್ನ ಭಾವನೆಗೆ ಅತ್ಯದ್ಭುತವಸ್ತುವು, ಜಗತ್ತಷ್ಟಿಯಲ್ಲಿ ಅಂತಹ ವಸ್ತುವು ಮತ್ತೊಂದಿಲ್ಲ. ಪ್ರಿಯ:ಹಾಗಾದರೆ, ನಿನಗೆ ಅಂತ ಸ್ತ್ರೀಯೊಡನೆ ವಿವಾಹವಾ ಗುವ ಸಂಭವವೆಲ್ಲಿ ? - ರಾಮ: ಇಲ್ಲ ವೇ ಇಲ್ಲ. ಮಹಾರಾಜರುಗಳು ಅಥವ ಚಕ್ರ ವರ್ತಿಗಳಿಗಾಗಿ ರಾಯಭಾರಿಗಳು ಕೆಲಸಮಾಡುವಂತೆ, ನನಗೋಸುಗ ಯಾರಾದರೂ ಸಹಾಯಮಾಡಿ ವಿವಾಹವನ್ನು ಮಾಡಿಸಬೇಕು. • ಇಲ್ಲ ವಾದರೆ ನಮ್ಮ ಪೂರ್ವಿಕರಲ್ಲಿದ್ದ ಪದ್ಧತಿಯಂತೆ ವಿವಾಹಾನಂತರವೇ ದಂಪತಿ ಗಳಿಗೆ ಪರಿಚಯವಾಗಬೇಕು. ಒಬ್ಬ ಸ್ತ್ರೀಯನ್ನು ತಿಂಗಳುಗಟ್ಟೆ ಆಶ್ರಯಿಸಿ, ಸವಿನುಡಿಗಳನ್ನಾಡಿ, ಮೆಚ್ಚಿಸಿ ನನ್ನ ನ್ನು ಮದುವೆಯಾಗುವೆಯಾ ? ?” ಎಂದು ಕೇಳುವುದೆ ? ಚಿ8 1 ನ ಂದ ಈ ಕೆಲಸಗಳು ಎಂದಿಗೂ ಆಗವು. ಪ್ರಿಯ:- ಅಯ್ಯೋ, ಪಾಪ ! ನೀನು ಈಗ ನಿಮ್ಮಪ್ಪನ ಮಾತನ್ನು ವಿಾರಲಾರದೆ ಒ೦ದಿರುವೆ, ನಿರ್ಮಲೆಯೊಡನೆ ಹೇಗೆ ಮಾತುಕಥೆಗಳನ್ನು ಆಡಬೇಕೆಂದು ನಿಶ್ಯಸಿರುವೆ ? ರಾಮ-ನಿಶ್ಚಯವೇನು? ಎಲ್ಲರೊಡನೆ ಇರುವಂತೆಯೇ ಇರುವೆನು. ಏನನ್ನಾ ದರೂ ಪ್ರಶ್ನೆ ಮಾಡಿದರೆ, ಉಂಟು ಅಥವಾ ಇಲ್ಲ, ಎರಡರೊಳ ಗೊಂದು ಉತ್ತರವನ್ನು ಕೊಡುವೆನು, ಉಳಿದ ವಿಷಯಗಳಲ್ಲಿ, ಅವಳ ಮುಖವನ್ನು ಸಹ ನೋಡುವುದಿಲ್ಲ. ನನಗೆ ಅಷ್ಟು ಧೈರ್ಯವೇ ಇಲ್ಲ. ಪ್ರಿಯ:ಏನಾಶ್ಚರ್ಯ ! ಮಿತ್ರರಲ್ಲಿ ಅಸಾಧಾರಣಪ್ರೀತಿವಿಶ್ವಾ ಸಗಳನ್ನು ಆ ನಿನಗೆ ಪ್ರಣಯದಲ್ಲೇಕೆ ಅನಾದರಣೆ ? - ರಾಮ:-ಮುಚ್ಚು ಮರೆಯೇಕೆ ? ನಿನ್ನ ಸುಖವನ್ನು ಪೂರ್ತಿಮಾಡ ಲೋಸುಗವೇ, ನಿನ್ನೊಡನೆ ಈರಾತ್ರಿ ಹೊರಟುಬಂದೆನು, ಸ್ವಾರ್ಥದಿಂ ದೆಂದಿಗೂ ಅಲ್ಲ, ಕಮಲಾವತಿಯು ನಿನ್ನನ್ನು ನೋಡಿದಾಗಲಿಂದಲೂ ಪ್ರೀತಿ ಸುತ್ತಿರುವಳು, ನಿಮ್ಮ ಮನೆಯವರಿಗೆ ಆ ಸಂಗತಿಯು ತಿಳಿಯದು.