ಪುಟ:ನಿರ್ಮಲೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ೨೭ ಪ್ರಿಯ:ರಾಮನೆ ! ನನ್ನ ವ್ಯಾಮೋಹವನ್ನು ಅಡಗಿಸಿಕೊಳ್ಳು ವೆನು, ನಾನು ಧನಾಕಾ೦ಕ್ಷಿಯಾದ ಚೆ೦ಡಾಲಪಾಪಿಯಾಗಿದ್ದರೆ, ನಿನ್ನ ಸಾಹಾಯವನ್ನು ಖಂಡಿತವಾಗಿಯೂ ಬೇಡುತ್ತಿರಲಿಲ್ಲ. ಕಮಲಾವತಿಯೊ ಬೃಳೇ ನನಗೆ ಬೇಕಾಗಿರುವುದು, ಅವಳ ಆಸ್ತಿಯಲ್ಲ, ಅವಳ ತಂದೆಯ ಅನುಮತಿಯಿಂದಲೂ ಅವಳ ಒಪ್ಪಿ ತದಿ೦ದಲೂ, ಕಮಲಾವತಿಯು ನನ್ನ ವಳೇ ಅಲ್ಲವೆ ? ೩ ರಾಮ:-ಭಾಗ್ಯಶಾಲಿಯೆ ! ನಿನ್ನ ನ್ನು ನೋಡಿ ಮೋಹಪರವಶಳಾ ಗದ ಸ್ತ್ರೀಯು ಇರುವಳೆ? ಸ್ತ್ರೀಜಾತಿಯನ್ನು ನಾನು ಪೂಜಿಸದಿದ್ದರೇನಾದುದು? ನಾನು ಯಾರನ್ನು ಹೆಚ್ಚಾಗಿ ಪ್ರೀತಿಸುತ್ತೇನೆ, ಅವರೊಡನೆಯೇ ಮಾತ ಸ್ನಾ ಡಲು ಹೆದರುವುದು ನನ್ನ ಹಣೆಯಬರಹವಲ್ಲವೆ? ಮಾತನಾಡಲುಪಕ್ರಮಿಸಿ ದರೆ, ಬಿಕ್ಕಲುಬಂದು, ಪ್ರಾಣವೇ ಹೋಗುವಂತಾಗುವುದು, ಮುಖವು ಜೋಲುಬೀಳುವುದು. ಆಗ ಯಾವಳು ನನ್ನನ್ನು ನೋಡಿದರೂ ಪ್ರೀತಿ ಗಳು. ನಾನು ಘನತೆಯುಳ್ಳ ಸ್ತ್ರೀಯರನ್ನು ಪ್ರೀತಿಸಲು ಎಷ್ಟು ಪ್ರಯತ್ನಿ ಸುವೆನೋ ? (ದೇವದತ್ತನು ಬರುತ್ತಿರುವನು) ಛಿ ! ನಮ್ಮನ್ನು ಹಿಂಸಿಸಲು ಇವನೆ ಬೃನು ಬರುವನು. (ದೇವದತ್ತನು ಬರುವನು) ದೇವ:- ಸ್ವಾಮಿ, ಸ್ವಾಗತ, ಸುಸ್ವಾಗತ, ರಾಮವರ್ಮರಾರು ? (ಪ್ರಿಯನನ್ನು ಕುರಿತು ) ತಾವೊ ? ಅವರೆ : ನನ್ನ ಪದ್ಧತಿಗಳನ್ನು ನೋಡಿ ದಿರಷ್ಟೆ ? ಆಸ್ತರನ್ನೂ ಇಷ್ಟರನ್ನೂ ಬಾಗಿಲಿನಲ್ಲೇ ಇದಿರೊ ಂಡು ಒಳಕ್ಕೆ ಕರೆತರುತ್ತೇನೆ. ಅವರ ಕುದುರೆ, ಪೆಟ್ಟಿಗೆ, ಸಾಮಾನುಗಳನ್ನು ಬಹಳ ಜೋಪಾ ನವಾಗಿಡಲು ತಕ್ಕ ಏರ್ಪಾಡನ್ನು ಮಾಡಿರುತ್ತೇನೆ, ಎಲ್ಲವೂ ಸರಿಯಷ್ಟೆ? ರಾಮ:-(ಸ್ವಗತ)- ಪ್ರಾಯಶಃ ಸೇವಕರಿಂದ ನನ್ನ ಹೆಸರನ್ನು ಇವನು ತಿಳಿದುಕೊಂಡಿರಬಹುದು (ಪ್ರಕಾಶಂ)-ನಿನ್ನ ಎಚ್ಚರಿಕೆಯನ್ನೂ , ಸತ್ಕಾರವನ್ನೂ ನಾನು ಮೆಚ್ಚಿದೆನು, (ಪ್ರಿಯಸೇನನನ್ನು ನೋಡಿ) ಪ್ರಿಯನೆ !