ಪುಟ:ನಿರ್ಮಲೆ.djvu/೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೦ ನಿರ್ಮಲೆ ರಾಮ:-(ಸ್ವಗತ) ಇದು ಹೆಸರಿಗೆಮಾತ್ರ ಸ್ವಚ್ಯಾ ವಿಹಾರ ಸುಖ ನಿವಾಸವು, ಇವನು ನಾನು ಕೇಳಿದ್ದನ್ನಲ್ಲದೆ ಮತ್ತೇನನ್ನೂ ಕೊಡುವಂತೆ ತೋರುವುದಿಲ್ಲ. ದೇವ:-(ತಾನೊ೦ದು ಒಟ್ಟಲನ್ನು ಹಿಡಿದು) ಷರಬತ್ತು ರುಚಿ ಯಾಗಿದೆಯಷ್ಟೆ ? ಇದನ್ನು ನಾನೇ, ಸ್ವತಃ, ತಯಾರ್ಮಾ ಡಿದ್ದೇನೆ ಅದಕ್ಕೆ ಹಾಕಿರುವ ಸಾಮಗ್ರಿಗಳೆಲ್ಲವೂ ಸರಿಯಾಗಿವೆಯಷ್ಟೆ ? ನಾನು ಷರಬತ್ತನ್ನು ಚೆನ್ನಾಗಿ ತಯಾರ್ಮಾಡುವೆನಲ್ಲವೆ ? ನಿಮಗೆ ಸುಖವಾಗಲೆಂದು ನಾನು ಕುಡಿಯುತ್ತೇನೆ. ನನಗೆ ಸುಖವುಂಟಾಗಲೆಂದು ನೀವು ಕುಡಿಯಿರಿ, (ಕುಡಿ ಯುವನು) ರಾವ.:-(ಸ್ವಗತ) ಇದೇನು ನಾಚುಕೆಗೇಡು ? ಇದೆಲ್ಲೊ ವಿಚಿತ್ರ ವಸ್ತು ! ಆದರೂ ಬಲು ಹಾಸ್ಯಗಾರನೆಂದು ತೋರುವುದು, ಸ್ವಲ್ಪ ವಿನೋದವನ್ನು ಮಾಡುವ, (ಪ್ರಕಾಶ೦) ಆಗಲಪ್ಪಾ ಕುಡಿಯುತ್ತೇನೆ. (ಕುಡಿಯುವನು) ಪ್ರಿಯ:-(ಸ್ವಗತ) ಇದೇನು ? ಇದೇನು ? ಈ ಅಧ್ಯಕ್ಷನು ನಮಗೆ ಸರಿಸಮಾನನಂತೆ ಇರಲು ಪ್ರಯತ್ನ ಪಡುತ್ತಿರುವನು. ನಮಗೆ ಆ ಮನೆ ಯಲ್ಲಿ ದಾರಿಯನ್ನು ತೋರಿಸಿದವನು ಹೇಳಿದಮಾತು ನಿಜ, ಇವನು ಮಾನ ಮರ್ಯಾದೆಗಳನ್ನು ಮರೆತಂತಿದೆ, ಭೋಜನಶಾಲಾಧ್ಯಕ್ಷನಿಗೆ ಇಷ್ಟು ಅಟ್ಟ ಹಾಸವೇಕೆ ? ರಾಮ:- ಈ ಸುತ್ತಿನಲ್ಲಿ ನಿಮಗೇ ಕೆಲಸವು ಹೆಚ್ಚೆಂದು ತೋರು ವದು. ಪ್ರಜಾಪ್ರತಿನಿಧಿಗಳನ್ನು ಚುನಾಯಿಸುವಾಗ ನಿಮಗೆ ಕೆಲಸದ ಗಲಭೆ ಯು ಬಹಳವಲ್ಲವೆ ? ದೇವ:- ನಾನು ಅದನ್ನೆಲ್ಲಾ ಬಿಟ್ಟರುವೆನು, ನಮಗಿಂತ ಉತ್ತಮ ರಾಗಿರುವವರು, ತಾವು ತಾವೇ ಚುನಾಯಿಸಿಕೊಂಡು ತಮ್ಮಲ್ಲೇ ಯಾರಾ ದರೂ ಪ್ರತಿನಿಧಿಗಳಾಗುವರು, ಬಡವರಾದ ನಮಗೆ ಅದರಲ್ಲೇನೂ ಕೆಲಸವಿಲ್ಲ.