ಪುಟ:ನಿರ್ಮಲೆ.djvu/೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ದುಲೆ ಈಗ ಬೇಡ (ಹೊರಟುಹೋಗಲು ಪ್ರಯತ್ನಿ ಸುವನು.) ಕಮಲ:- ಚಿಃ ! ಹಾಗಾಗಕೂಡದು ! ಈ ನಾಚುಕೆಯ ಪ್ರಕೃತಿ ಯನ್ನು ಬಿಡದಿದ್ದರೆ ಅವಳಿಗೆ ಬಹು ಅಸಮಾಧಾನವಾಗುವುದು, ನಿಮ್ಮ ಒಟ್ಟಿಯು ಅಂದವಾಗಿಲ್ಲದಿದ್ದರೇನು ? ಪ್ರೇಮಬಂಧವು ಉಡುಗೆ ತೊಡುಗೆ ಗಳನ್ನು ಅಪೇಕ್ಷಿಸುವುದಿಲ್ಲ. ತಾವು ಇಲ್ಲಿರುವುದು ಅವಳಿಗೆ ತಿಳಿದು ಬಂದಿ ರುವುದರಿಂದ ಅವಳು ತಮ್ಮ ಭೇಟಿಗೆ ಈಗಲೇ ಬರುವಳು. ರಾಮ:-(ಸ್ವಗತ೦) ಗ್ರಹಚಾರವೆ ! ಈಗೇನುಗತಿ ? ಹೆಂ,-ಹೆಂ- (ಪ್ರಕಾಶಂ) ಪ್ರಿಯಸೇನನೆ ! ಇಲ್ಲಿಯೇ ಇರಬೇಕೆ ? ಹಾಗಾದರೆ, ನೀನು ನನಗೆ ಸಾಹಾಯ್ಯವನ್ನು ಮಾಡಬೇಕು, ನನಗೆ ಬುದ್ದಿಯೇ ಓಡುವುದಿಲ್ಲ, ಇದೇನು ತಂಟೆಯಪ್ಪ ! ಆಗಲಿ, ಧೈಲ್ಯವನ್ನು ವಹಿಸುವೆನು. ಪ್ರಿಯ:-ಮೊದಲಿನಲ್ಲಿ ಸ್ವಲ್ಪ ಧೈದ್ಯವಾಗಿದ್ದರೆ ಸರಿ , ಅವಳೂ ಹೆಂಗಸಲ್ಲವೆ ? ಹೆದರಲೇಕೆ ? ರಾಮ:-ಯಾವ ಹೆಂಗಸನ್ನು ನೋಡಬೇಕೆಂದರೂ ನನಗಿಷ್ಟು ಭಯವಾಗಲಿಲ್ಲ , [ನಿರಲೆಯು ಪ್ರವೇಶಿಸುವಳು.] ಪ್ರಿಯ:-(ರಾಮವರ್ಮನನ್ನು ತೋರಿಸಿ) ನಿರ್ಮಲೆ, ಇದೊ ಇವನೇ ನಿನ್ನ ರಾಮವರ್ಮನು. ರಾಮವರ್ಮ, ಇದೊ, (ಸಿರಲೆಯನ್ನು ತೋರಿಸಿ) ಇವಳೇ ನಿನ್ನ ನಿಲೆಯು, ಇಬ್ಬರಿಗೂ ಪರಿಚಯವಾದರೆ ಸಾಕು, ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಗೌರವಿಸಲುಳ್ಳ ನಿಮ್ಮಿಬ್ಬರನ್ನೂ ಒಟ್ಟಿಗೆ ಸೇರಿಸಿದುದು ನನ್ನ ಸುಕೃತವೇ ಸರಿ. - ನಿರ:-(ಸ್ವಗತಂ) ವಿನಯಸಂಪನ್ನ ೩ ಗಂಭೀರಸ್ಯನೂ ಆದ ಈತನ ಪರಿಚಯವು ಅತ್ಯವಶ್ಯಕವು (ಪ್ರಕಾಶ೦) ಸೀವು ಸುಖವಾಗಿ ಬಂದು ಇಲ್ಲಿಗೆ ಸೇರಿದುದರಿಂದ ಪರಮಸಂತೋಷವಾಯಿತು, ಮಾರ್ಗದಲ್ಲಿ ಕೆಲವು ತೊಂದರೆಗಳು ಸಂಭವಿಸಿದುವೆಂದು ಕೇಳಿದೆನು.