ಪುಟ:ನಿರ್ಮಲೆ.djvu/೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೦ ನಿರ್ಮಲೆ ರಾಮ: -ಒಂದೆರಡು ! ಇಲ್ಲ, ಕೆಲವು ! ಅಹುದು, ನಿಮ್ಮಲೆ ! ಬಹಳ ಅಸಂಭವಗಳು ಪ್ರಾಸವಾದುವು. ಈರೀತಿ ಸುಖವಾಗಿ ಪರಿಣಮಿಸಿದಹೂ- ಈ ಅಸಂಭವಗಳಿಗಾಗಿ ನಾವು ವ್ಯಸನಪಡದೆ ಸಂತೋಷಿಸಬೇಕಾಗಿದೆ. ಪ್ರಿಯ:-(ರಾಮನನ್ನು ಕುರಿತು) ನೀನು ಇದುವರೆಗೆ ನಿನ್ನ ಜೀವ ಮಾನದಲ್ಲಿ ಇಷ್ಟು ಚೆನ್ನಾಗಿ ಮಾತನಾಡಿದುದೇ ಇಲ್ಲ, ಹೂ-ಹಾಗೆಯೇ ಮಾತನಾಡು, ಜಯವು ದೊರೆವುದು, ಹೂ ನಿರ್ಮ:-ನೀವು ಹೊಗಳುವಿರಿ, ಪ್ರಪಂಚವನ್ನೆಲ್ಲಾ ತಿರುಗಾಡಿ ದೊಡ್ಡ ದೊಡ್ಡ ಮನುಷ್ಯರ ಗುಂಪಿನಲ್ಲಿದ್ದ ನಿಮಗೆ ಈ ಹಳ್ಳಿಯ ಜನರು ಸ್ನೇಹಕ್ಕೆ ಸರಿಹೋಗುವರೆ ? ರಾಮ:-(ಥೈಲ್ಯವನ್ನು ತಂದುಕೊಂಡು) ನಾನು ಎಲ್ಲೇ ಇದ್ದರೂ ಜನರಗುಂಪಿಗೆ ಸೇರುವುದೇ ಬಹಳ ಕಡಿಮೆಯೆಂದು ಹೇಳಬೇಕು. ಇತರರು ಸುಖವಾಗಿ ತಮ್ಮ ಜಿ' ವಮಾನವನ್ನು ಕಳೆಯುತ್ತಿದ್ದರೆ, ನಾನು ದೂರದಲ್ಲೇ ಅವರೆಲ್ಲರನ್ನೂ ನೋಡುತ್ಯ ಜೀವನ ತತ್ವವನ್ನು ವಿಮರ್ಶೆ ಮಾಡಿಕೊಳ್ಳುತ್ತೇನೆ. ಕಮ: ಕೊನೆಗೆ ಸುಖವಾಗಿ ಬಾಳು, ಅದೇ ಸರಿಯಾದ ಮಾರ್ಗ ವೆಂದು ನಾನು ಕೇಳಿರುವೆನು. ಪ್ರಿಯ: (ರಾಮವರ್ಮನನ್ನು ಉದ್ದೇಶಿಸಿ) ಎ೦ತಹ ವಾಗೃತಿ ? ಇನ್ನೊಂದು ಸಾರಿ ಹೀಗೆಯೇ ಮಾತನಾಡು, ಧೈರವು ಬಂದೇ ಬರುವುದು. ರಾಮ:-( ಪ್ರಿಯಸೇನನನ್ನು ಕುರಿತು) ಹೊ-ಆಗಲಿ, ನೀನು ನನ್ನ ಮಗ್ಗ ಲಿನಲ್ಲಿಯೇ ಇರು. ನಾನೇನಾದರೂ ಹೆಚ್ಚು ಬೀಳುವ ಸಂಭವವು ಬಂದರೆ, ಸರಿಪಡಿಸು ನಿರ:-ಮಾನವರ ಜೀವಮಾನವನ್ನು ಪರಿಶೋಧಿಸುವುದು ಬಹುಹಿತ ಕರವಾಗಿರಲಾರದು. ಏಕೆಂದರೆ, ನೀವು ನೋಡಿ ಮೆಚ್ಚುವ ಗುಣಕ್ಕಿ೦ತಲೂ, ದೋಷಗಳು ಹೇರಳವಾಗಿರುವುವಲ್ಲವೆ ? ರಾಮ: ... ಸಿಗ್ನಲೆ, ಹಾಗಲ್ಲ; ಮನ್ನಿ ಸು. ಯಾವಾಗಲೂ ವಿನೋದ ಟಿ