ಪುಟ:ನಿರ್ಮಲೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ನಿರ್ಮಳೆ `ಗುವುದು, ನೀವು ಹೇಳಬೇಕಾದುದು ಮತ್ತೇನು ? ರಾಮ: ಅಹುದು, ನ್ಯಾಯವಾಗಿಯ ಹಾಗೆಯೆ ! ನಮ್ಮ ಆಗ ಮನವನ್ನು ಕಮಲಾವತಿಯು ನಿರೀಕ್ಷಿಸುತ್ತಿರಬಹುದು, ನಾನು ಹೀಗೆ ಮಾತ ನಾಡುತ್ತ ನಿಂತಿರುವುದು ನ್ಯಾಯವಲ್ಲ ವೆಂದು ತೋರುವುದು. ನಿಮ್ಮ:- ಇದುವರೆಗಣ ನನ್ನ ಜೀವಮಾನದಲ್ಲಿ ನನ್ನೊಡನೆ ಎಂದೂ ಇಷ್ಟು ಹಿತವಾಗಿ ಯಾರೂ ಮಾತನಾಡಿರಲಿಲ್ಲ, ನಾವು ಇನ್ನೂ ಸ್ವಲ್ಪ ಕಾಲ ಮಾತನಾಡುತ್ತಿರಬಾರದೇಕೆ ? ರಾಮ:-ಊ ...ಊ. • ಅಹುದು, ಕಮಲಾವತಿಯು ನಮ್ಮನ್ನು ಕೂಗುವಳು, ನಾನೂ ನಿನ್ನ ಜತೆಯಲ್ಲೇ ಬರಲೋ? ನಿರ:-ನೀವೇ ಮುಂದೆ ಹಜ್ಜೆಯನ್ನು ಹಾಕಿರಿ, ನಾನು ಬರುತ್ತೇನೆ. ರಾಮ:-(ಸ್ವಗತಂ) ಈ ಮೃದುಮಧುರವಾಕ್ಕುಗಳು ಸಾಕಾದುವು. (ಹೊರಟು ಹೋಗುವನು) ನಿಲ್ಮ:-(ಸ್ವಗತ೦) ಹಾ, ಹಾ!! ಏನುಗಾಂಭೀರ? ಎಷ್ಟು ಮಧುರ ವಾದ ವಾಣಿ? ಎಂತಹ ಮೃದುಭಾಷಣ! ನನ್ನ ನ್ನು ಒಂದು ಬಾರಿಯಾದರೂ ಕಣ್ಣೆತ್ತಿಸಹಾ ನೋಡಲಿಲ್ಲ ವೆಂದು ನನಗೆ ಭರವಸೆಯಿದೆ. ಇವನು ನಾಚು ಕೆಯೊಂದನ್ನು ಬಿಟ್ಟರೆ ಸಾಕು, ಸ್ಪುರದ್ರೂಪಿಯು, ಜಾಣ್ಮಯು ಇವನಲ್ಲಿ ಪೂರ್ಣವಾಗಿರುವುದು, ಇವನಲ್ಲಿರುವ ಮರುಳಾಟಕ್ಕಿಂತ ಜಾಣ್ಮಯೇ ಅವ ನನ್ನು ಹುಚ್ಚನನ್ನಾಗಿ ಮಾಡುತ್ತಲಿದೆ, ಇವನಿಗೆ ಧೈಲ್ಯವಾಗಿರುವದೊಂದನ್ನು ಕಲಿಸಿಬಿಟ್ಟರೆ, ನನಗೆ ತಿಳಿದವರೊಬ್ಬರಿಗೆ ಮಹದುಪಕಾರವನ್ನು ಮಾಡಿದಂತಾ ಗುವುದು, ಆ ಒಬ್ಬರುಯಾರು? ನಿಜವಾಗಿಯೂ ಆ ಪ್ರಶ್ನೆಗೆ ನಾನೇ ಉತ್ರ ರವನ್ನು ಹೇಳಲಾರದವಳಾಗಿರುವೆನು. (ಹೊರಟು ಹೋಗುವಳು) (ದುರ್ಮತಿಯ ಕಮಲಾವತಿಯ ಪ್ರವೇಶಿಸುವರು ಹಿಂದೆ ಚಂಡಿಯ - ಪ್ರಿಯಸೇನನೂ ಬರುವರು) ದುರ್ಮ:ಕಮಲೆ, ಅದೇಕೆ ನನ್ನ ಬೆನ್ನಿನಹಿಂದೆಯೇ ಬರುವಿ? ಹೀಗೆ ನನ್ನನ್ನು ಕಾಡಲು ನಿನಗೆ ನಾಚುಕೆಯಿಲ್ಲ ವೆ?