ಪುಟ:ನಿರ್ಮಲೆ.djvu/೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೬೧ ಕಮಲೆ:-ಥ ! ಬುಲಾಕೆಂದರೆ ನನಗೆ ವಾಂತಿಬರುವುದು, ನೀನು ಖಂಡಿತವಾಗಿಯೂ ಹೋಗಕೂಡದು, ಇದೇನು ಗೋಳಪ್ಪ! ಉತ್ತಮವಾದ ಜವಾಹಿರಿಯನ್ನು ಮೂಲೆಗೆ ಬಿಸುಟು ಹರಳುಕಲ್ಲಿನ ಬುಲಾಕನ್ನು ಧರಿಸ ಬೇಕೆಂದರೆ ಯಾರಿಗೆತಾನೆ ಸಿಟ್ಟಾಗದಿರುವುದು ? ದುರ್ಮ:-ಕಮಲೆ, ಹುಚ್ಚು ಹುಚ್ಚಾಗಿ ಆಡ ಬಾರದು, ಆ ಬುಲಾ ಕನ್ನು ತೆಗೆದುಕೊ, ಬಂದಿದ್ದನ್ನೆಲ್ಲಾ ಎಳೆದುಕೆ, ನಿನ್ನ ಜವಾಹಿರಿಯಲ್ಲ ನಿನ್ನ ದೇ, ಹೆದರಬೇಡ, ನಮ್ಮ ಅತ್ತೆಯ ಪೆಟ್ಟಿಗೆಯಿಂದ ನಾನು ಅದನ್ನು ಕಳವುಮಾಡಿ ತಂದಿರುವೆನು. ಅವಳಿಗೆ ಇನ್ನೂ ಆ ವಿಚಾರವು ತಿಳಿದುಬಂದಿಲ್ಲ. ನಿನ್ನ ಕಾಂತನಬಳಿಗೆ ಓಡು, ಹಾರು. ಅವನು ಎಲ್ಲ ಸಂಗತಿಗಳನ್ನೂ ತಿಳಿಸು ವನು, ಓಡು, ಅತ್ತೆಯು ಅತ್ತರೆ ನಾನು ಸರಿಪಡಿಸುವೆನು, ನೀನು ಓಡು. ಕಮ:-ಎಷ್ಟು ಉಪಕಾರವನ್ನು ಮಾಡಿರುವೆ ? ಬಹಳ ಸಂತೋಷ ವಾಯಿತು, ಅದಕ್ಕಾಗಿ ನಿನಗೆ ಅನೇಕ ವಂದನೆಗಳು. ದುರ್ಮ:ಸಾಕು, ಸಾಕು, ನಿನ್ನ ವಂದನೆಗಳು ಸಾಕು, ಅಗೊ, ಅತ್ತೆಯು ಒರುತ್ತಿರುವಳು. ಈಗ ಅವಳಿಗೆ ಕಳ್ಳತನವು ಪ್ರಾಯಶಃ ಗೊತ್ತಾಗಿದೆ ಹೂ ! ಹೂ !! ಓಡು ; ಆಹಾಹಾ ! ನಮ್ಮತ್ತೆಯು ಒಳ್ಳೆಯ ತಿಮಿಂಗಿಲದಂತೆ ಹಾರಾಡುತ್ತಿರುವಳು ಹಾರಾಡಲಿ. ( ಚಂಡಿಯು ಬರುವಳು ) - ಚಂಡಿ:-( ಗಟ್ಟಿಯಾಗಿ) ಅಯ್ಯೋ ! ಕಳ್ಳರು !! ದಂಗೆಕೋರರು !!! ನಮ್ಮ ಮನೆಯನ್ನು ಲೂಟಿಮಾಡಿದಾರೆ !! ನಾವು ಹಾಳಾದೆವು ; ದಿಕ್ಕೆಟ್ಟೆವು !! ಮುಳುಗಿಹೋದೆವು ! ಸರೈನಾಶವಾಯಿತು !! ಅಯ್ಯೋ ! ಅಯ್ಯೋ ! - ದುರ್ಮ:-ಅತ್ತೆ, ಅದೇನು ? ನಮಗೇನೂ ಕೇಡು ಸಂಭವಿಸಿಲ್ಲವಷ್ಟೆ? - ಚಂಡಿ:-ಕಳುವಾಗಿದೆ ! ನನ್ನ ಪೆಟ್ಟಿಗೆಯನ್ನು ಯಾರೋ ಕಳ್ಳರು ಜವಾಹಿರಿಯ ಪೆಟ್ಟಿಗೆಯನ್ನು -ಅಯ್ಯೋ !-ಕದ್ದು ಕೊಂಡು ಹೋಗಿರುವರು. ಅಯ್ಯೋ ! ಕಮಲೆಯ ಜವಾಹಿರಿಯ ಪೆಟ್ಟಿಗೆ ! ನಾನು ಕೆಟ್ಟೆನು ! ಕೆಟ್ಟೆನು !!