ಪುಟ:ನಿರ್ಮಲೆ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ ನಿರ್ಮಲ ಭಿಸಬೇಕು, ಹಾಗೆಯೇ, ನಾನು ಈಗ ಅವರಿಗೆ ತಿಳಿಯದಂತೆ ಅವರ ಗುಣಾವಗುಣಗಳನ್ನು ಕಂಡುಹಿಡಿಯುವೆನು, ಅದರಿಂದ ವಿಶೇಷವಾಗಿ ಅನು ಕೂಲವಾಗುವುದು. ದೂತಿ :-ನಿನ್ನನ್ನು ನೋಡಿ ಅವರು ಸಂದೇಹಪಟ್ಟಿ ರುವರಷ್ಟೆ ? ನಿನ್ನ ಧ್ವನಿಯಿಂದಲೂ ಗುರುತನ್ನು ಹಿಡಿಯಲಾಗದಂತೆ ಮಾತನಾಡಬಲ್ಲೆಯೋ ? ನಿರ್ಮ :-ಓಹೋ! ಬಲ್ಲೆನು, ಆ ಭಾಗದಲ್ಲಿ ಹೆದರಬೇಡ. ಸೇವಕ ರಂತೆ ಮಾತನಾಡಲು ನನಗೂ ಬರುವುದು, ಸ್ವಾಮಿ, ಏನಪ್ಪಣೆ ? ತವ ಗೇನುಬೇಕು ? ಮಹಾಸ್ವಾಮಿ, ಚಿತ್ತೈಸಬೇಕು. ಆಜ್ಞೆ” ಎಂದು ಹೀಗೆ ಮಾತಾಡಿದರೆ ಸಾಕಷ್ಟೆ ? ದೂತಿ : ಸಾಕು; ಸಾಕು, ಅದೊ! ಅವರೇ ಇತ್ತ ಬರುತ್ತಿರುವರು. (ರಾಮವರ್ಮನು ಬರುವನು) ರಾಮ :-(ಸ್ವಗತ೦) ಈ ಮನೆಯಲ್ಲಿ ಎತ್ತ ಹೋದರೂ ಗಲಭೆ. ಹಜಾರಕ್ಕೆ ಹೋದರೆ ಅಧ್ಯಕ್ಷನು ತನ್ನ ಚರಿತ್ರೆಯನ್ನು ಹೇಳಿಕೊಳ್ಳಲುಪಕ್ರ ಮಿಸುವನು. ಮಹಡಿಯ ಮೇಲೆ ಹೋದರೆ, ಅವನ ಹೆಂಡತಿಯು ಉಪಚರಿ ಸಲು ಬರುವಳು, ಚಿಃ! ಸಾಕಪ್ಪ, ಈಗಲಾದರೂ ವಿರಾಮವು ದೊರೆಯ ಬಹುದು, ಸ್ವಲ್ಪ ಆಲೋಚಿಸುವ. ನಿರ್ಮ :-(ದೂರದಲ್ಲೇ ನಿಂತು) ಸ್ವಾಮಿ, ತಾವು ಕೂಗಿದಿರಾ? ತಮ್ಮಪ್ಪಣೆಯೇನು ? ರಾಮ:-(ಸ್ವಗತ೦) ನಿರ್ಮಲೆಯು ಗಂಭೀರೆ, ರಸಿಕೆ. ನಿರ್ಮ:-(ಇದುರಿಗೆ ನಿಂತು) ಸ್ವಾಮಿ ! ರಾಮ:-(ಅಡ್ಡಲಾಗಿ ನಿಂತು) ಇಲ್ಲ, ನಾನೊಮ್ಮೆ ಓರೆಯಾಗಿ ನೋಡಿದೆನು. ಅವಳಿಗೆ ಮೆಳ್ಳಗಣ್ಣೆಂದು ತೋರುವುದು. ನಿರ್ಮ:-ಸ್ಯಾಮಿ, ಯಾರೋ ಕರೆದಂತೆ ಕೇಳಿಸಿತು, ನಿಜ ವಾಗಿಯೂ ಕೇಳಿಸಿತು. ತಿ