ಪುಟ:ನಿರ್ಮಲೆ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ನಿರ್ಮಲೆ ರಾಮ:-ಇಲ್ಲ, ಇಲ್ಲ, (ಮತ್ತೊಂದು ದಿಕ್ಕಿಗೆ ತಿರುಗಿ) ನಮ್ಮಪ್ಪ ನನ್ನು ತೃಪ್ತಿಪಡಿಸಲು ಮಾತ್ರವೇ ನಾನಿಲ್ಲಿಗೆ ಬಂದುದಾಯಿತೆ ವಿನಾ ಮತ್ತೆ ಬೇರೆಯಿಲ್ಲ. ಈಗ ನನ್ನ ಮನಸ್ಸಿನ ತೃಪ್ತಿಗಾಗಿ ನಾನು ಹಿಂದಿರುಗಿ ಊರಿಗೆ ಹೋಗುವೆನು, ಅಷ್ಟೆ ! (ಎಂದು ಜೇಬಿನಿಂದ ಯಾವುದೋ ಒಂದು ಕಾಗದ ವನ್ನು ತೆಗೆದು ಓದಿಕೊಳ್ಳುವನು) ನಿರ್ಮ:-(ಇದಿರಿಗೆ ನಿಂತು) ತಾವು ಕರೆಯಲಿಲ್ಲವೆ ? ಹಾಗಾದರೆ, ಮತ್ತೊಬ್ಬರು ಕರೆದರೇನೆ ? ರಾಮ;-ಇಲ್ಲ, ಯಾರೂ ಕರೆಯಲಿಲ್ಲ. - ನಿರ್ಮ:-ಯಾರೂ ಕರೆಯಲಿಲ್ಲ ವೆ? ಏನಿದ್ದರೂ ಅಪ್ಪಣೆಯಾಗಲಿ. ಸೇವಕರು ಕಾದುಕೊಂಡಿರುವೆವು. ರಾಮ:- ನಮಗೆ ನಿಮ್ಮ ಸೇವೆಯು ಆವಶ್ಯಕವಿಲ್ಲ. (ಮುಖವನ್ನು ಚೆನ್ನಾಗಿ ದಿಟ್ಟಿಸಿನೋಡಿ) ಅಹುದು, ನಾನೇ ಕರೆದೆನು, ನನಗೆ-ನನಗೆಅಮ್ಮಣ್ಣ ! ನೀನು ಬಲು ಚೆಲುವೆ ! - ನಿರ್ಮ:- ತಮ್ಮ ಮಾತನ್ನು ಕೇಳಲು ನನಗೆ ನಾಚುಕೆಯಾಗುವುದು. ರಾಮ:-ಇಷ್ಟು ಮಟ್ಟಿಗೆ ಮನೋಲ್ಲಾಸವನ್ನುಂಟುಮಾಡುವ ಕಣ್ಣು ಗಳನ್ನು ನಾನೆಲ್ಲಿಯ ನೋಡಿರಲಿಲ್ಲ. ಪ್ರಿಯೆ, ನಾನೇ ಕರೆದೆನು, ನಿಮ್ಮಲ್ಲಿ ಹು-ಹು~ ಇದೆಯೊ ? ನಾನುಕೇಳುವುದು ಇದೆಯೊ ? ನಿರ್ಮ:-ಇಲ್ಲ. ಅದೇನು ? ರಾಮ:- ಈ ಮನೆಯಲ್ಲಿ ಕೇಳಿದುದು ಮಾತ್ರ ಇಲ್ಲ ವೆಂದು ತೋರು ವುದು, ಚಿಂತೆಯಿಲ್ಲ, ರುಚಿಯನ್ನು ಬದಲಾಯಿಸಿಕೊಳ್ಳಲು ನಾನು ನಿನ್ನ ಅಧರಾಮೃತವನ್ನಾದರೂ ಕೇಳಿದರೆ ಇಲ್ಲ ಎನ್ನು ವೆಯೋ ? ನಿರ್ಮ:-ಏನು ? ಅಮೃತವೆ? ಅಮೃತ, ಈ ಸೀಮೆಯಲ್ಲಿ ಅಮೃತ ವನ್ನು ಕೇಳುವವರೇ ಇಲ್ಲ. ಪರದೇಶದ ಪಾನಾರ್ಹವಸ್ತುಗಳನ್ನು ನಾವು ಮಾಡುವುದಿಲ್ಲ.