ಪುಟ:ನಿರ್ಮಲೆ.djvu/೭೭

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೮ ನಿರ್ಮಲ ನನಗೆಬೇಡ ! ಉಹು !! ನನಗೆ ಖಂಡಿತವಾಗಿಯೂ ಬೇಡ !!! ಈಗ ಅರೆಗಳಿ ಗೆಗೆ ಮುಂಚೆ ಇಲ್ಲಿ ಆ ನಿಮ್ಮಲೆಯು ಬಂದಿದ್ದ ಕಾಲದಲ್ಲಿ ಅವಳನ್ನು ನೋಡಿ ಬೆದರಿ, ನ್ಯಾಯಾಧೀಶನ ಮುಂದೆ ನಿಂತಿರುವ ಅಪರಾಧಿಯಂತೆ ನಡುಗುತ್ಯ, ಅರ್ಧ ಅರ್ಧ ಮಾತನಾಡಿದಿರಲ್ಲ ? ಅದೇಕೆ? ರಾಮ:-(ಸ್ವಗತ) ಇವಳು ನನ್ನ ಯೋಗ್ಯತೆಯನ್ನೂ ನೈಜವಾದ ಶಕ್ತಿಯನ್ನೂ ಕಂಡುಹಿಡಿದಿರುವಳು, (ಪ್ರಕಾಶ೦) ಅವಳನ್ನು ಕಂಡರೆ ನನಗೆ ಹೆದರಿಕೆಯೆಂದು ತಿಳಿದಿಯೋ? ಹಾ! ಹಾ!! ಹಾ!!! ಅದೊಂದು ವಿಚಿತ್ರವು. ಕುರೂಪಿ! ಮೆಳ್ಳಗಣ್ಣಿ! ಎಲ್‌, ರಮಣಿ, ನೀನು ಅವಳಂತೆ ಇಲ್ಲ: ನಾನು ಅವಳೊಡನೆಯೂ ಅರೆಗಳಿಗೆ 'ಹಾಸ್ಯವಾಗಿ ಮಾತನಾಡುತ್ತಿದ್ದೆನು. ಅವಳ ಕಾಠಿಣ್ಯಭಾವವು ನನಗೆ ಸರಿತೋರಿಬರಲಿಲ್ಲ. ಆದುದರಿಂದ ಅವಳೊಡನೆ ಮಾತನಾಡಲು ನನಗೆ ಇಷ್ಟವಿಲ್ಲ. ನಿರ:-ಹಾಗಾದರೆ, ತಾವು ಸ್ತ್ರೀಸಮಹದಲ್ಲಿ ಬಹು ಬಳಿಕೆಯುಳ್ಳ ವಗೆಂದು ತೋರುವುದು. ರಾಮ:-ಆಹಾ! ಸಂದೇಹವೇನು? ಸ್ತ್ರೀಯರ ಸಂಘದಲ್ಲಿ ನಾನು (ಸತ್ವ ಸಮರ್ಥ' ಎಂಬ ಬಿರುದನ್ನು ಪಡೆದಿರುವೆನು, ನನ್ನನ್ನು ಅವರು « ಹರಟೆಯಮಲ್ಲ ' ಎಂಬುವರು, ಹರಟೆಯಲ್ಲಿನ ಪರಿಚಯವನ್ನು ನಾನು ಮಾಡಿಸಲೋ? (ಚುಂಬಿಸಲೆಳಸುವನು) ನಿಮ್ಮ:-ಸ್ವಲ್ಪ ನಿಧಾನಿಸಿ. ಹಾಗಾದರೆ ತಮ್ಮನ್ನು ಕಂಡರೆ ಬಹು ಮಂದಿಗೆ ಪ್ರೇಮವಿರುವದೆಂದು ತೋರುವುದು. ರಾಮ;-ಅದೇನೆಂದು ಹೇಳಲಿ, ನಮ್ಮ ಸಂಘಕ್ಕೆ ಸೇರಿದವರೆಲ್ಲ ರೂ ನನಗೆ ಬೇಕಾದವರೇ, ನಿಮ್ಮ:-ಹಾಗಾದರೆ, ತಾವು ಆ ಸಂಘದಲ್ಲಿ ಬಹಳ ಸಂತೋಷದಿಂದ ತಾಲವನ್ನು ಕಳೆಯಬಹುದೆಂದು ತೋರುವುದು. ರಾಮ:-ಅಲ್ಲಿ ನನ್ನ ಸಂತೋಷಕ್ಕೆ ಪಾರಾವಾರವೇ ಇಲ್ಲ, ತಿಂಡಿ,