ಪುಟ:ನಿರ್ಮಲೆ.djvu/೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ

  • ೬೯

ಊಟ, ಎಲೆಯಡಿಕೆ, ಪಗಡೆ, ಇಸ್ಪಿಟು, ಎಷ್ಟೊ ಆಟಗಳು. ನಿಮ್ಮ:-ಇಷ್ಟೇನೆ, ಹರಟೆಯಮಲ್ಲರ ಪ್ರವರ್ತನೆ ! ಭಲಾ ! ಹಾ! ಹಾ!! ರಾಮ:-( ಸ್ವಗತಂ ) ಇದು ನನಗೆ ಆಗದು. ಈ ಹುಡುಗಿಯು ಒಳ್ಳೆಯಹಾಸ್ಯಗಾರಳೆಂದು ತೋರುವುದು, (ಪ್ರಕಾಶಂ) ಎಲ್‌, ನಗುವಿಯಾ? ನಿಮ್ಮ :-ಇನ್ನೇನು ಮಾಡಲಿ ? ನಿಮ್ಮ ಸಂಘದ ಹೆಂಗಸರು ಮನೆ ಯಲ್ಲಿಯೇ ಇಲ್ಲದಿರುವುದಾದರೆ, ಮನೆ ಕೆಲಸಗಳನ್ನು ಮಾಡುವರಾರು ? ರಾಮ :-(ಸ್ವಗತ) ಸರಿ ; ಸರಿ, ಇವಳು ನನ್ನ ನ್ನು ನೋಡಿ ನಗು ತಿಲ್ಲ, (ಪ್ರಕಾಶಂ) ನಿನಗೇನಾದರೂ ಕಸೂತಿ ಕೆಲಸವು ಬರುವುದೋ ? ನಿರ:-ಈ ಮನೆಯಲ್ಲಿರುವ ಕಸೂತಿಯ ಕೆಲಸಗಳನ್ನೆಲ್ಲ ಪರಾಂಬರಿ ಸಿದರೆ ತಿಳಿಯುವುದು. ರಾಮ :-ಅವಗಳನ್ನು ನನಗೆ ತೋರಿಸುವೆಯಾ ? ನಾನು ಅಂತವು ಗಳ ಗುಣವಿಮರ್ಶೆಯನ್ನು ಬಹಳ ಚೆನ್ನಾಗಿ ಮಾಡುವೆನಾದಕಾರಣ ಅವುಗೆ: ಇನ್ನು ನನಗೆ ತೋರಿಸಲೇಬೇಕು. (ಅವಳ ಕೈ ಹಿಡಿಯುವನು) ನಿಮ್ಮ :- ರಾತ್ರೆಯಕಾಲದಲ್ಲಿ ವಿವಿಧ ಬಣ್ಣಗಳ ವ್ಯತ್ಯಾಸವು ಕಂಡು ಬರುವುದಿಲ್ಲ, ಎಲ್ಲವೂ ಒಂದೇ ಸಮನಾಗಿ ತೋರುವುದು, ಆದುದರಿಂದ ತಾವು ಅವುಗಳನ್ನು ಬೆಳಗಾದಮೇಲೆ ನೋಡಬಹುದು (ಬಿಡಿಸಿಕೊಳ್ಳಲು ಪ್ರಯತ್ನ ಪಡುವಳು.) | - ರಾಮ,:-ನನ್ನ ರತ್ನ ವೆ ! ಈಗಲೇ ಏಕೆ ತೋರಿಸಕೂಡದು ? ನಿನ್ನ ಸೌಂದಠ್ಯವನ್ನು ನೋಡಿ ಮೋಹಪರವಶನಾಗದೆ ಇರುವುದೆಂತು ? ಓಹೋ! .ಈ ಮುದುಕನು ಇಲ್ಲೇ ಬರುತ್ತಿರುವನು, ನನ್ನ ಗ್ರಹಚಾರವೇ ಹೀಗೆ ! (ತೆರಳುವನು) [ದೇವದತ್ತನು ಆಶ್ಚರ್ಯಭರಿತನಾಗಿ ಬರುವನು.] ದೇವ:-(ಆಶ್ಚರದಿಂದ) ಎಲ! ಕಳ್ಳಿ! ವಂಚಕಿ ! ಇವನೇನೋ,