ಪುಟ:ನಿರ್ಮಲೆ.djvu/೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೭೧ ವಾಗುವುದು. ದೇವ:-ರಾತ್ರೆಯೆ ! ಒಂದು ಘಳಿಗೆಯ ವಿರಾಮವನ್ನು ಕೊಡ ಲಾರೆನು, ಈಕ್ಷಣವೇ ಅವನನ್ನು ಮನೆಯಿಂದ ಹೊರಗೆ ಹೊರಡಿಸುವೆನು. ನಿರ:-ತಂದೆಯೆ, ಹಾಗಾದರೆ ಒಂದು ಗಂಟೆಯಾದರೂ ವಿರಾಮ ವನ್ನು ಕೊಡು , ನಿನ್ನನ್ನು ತೃಪ್ತಿಪಡಿಸುವೆನು. ದೇವ:-ಆಗಲಿ, ಒಂದು ಗಂಟೆಕಾಲಮಾತ್ರ ವಿರಾಮವನ್ನು ಕೊಟ್ಟಿ ರುವೆನು, ಮಾಡುವ ಕಾರಗಳೆಲ್ಲವನ್ನೂ ಪ್ರಮಾಣಿಕತೆಯಿಂದ ನಡೆಯಿಸಿ ಬೇಕು ಸ್ವಲ್ಪವೂ ಮೋಸವಿರಬಾರದು, ಹುಡುಗಾಟವಲ್ಲ, ತಿಳಿಯಿತೂ ? ಒಂದು ಗಂಟೆಗಿಂತ ಹೆಚ್ಚಾದ ಅವಕಾಶವನ್ನು ಖಂಡಿತವಾಗಿಯ ಕೊಡುವುದಿಲ್ಲ. ನಿಮ್ಮ:-ತಂದೆಯೆ, ನಿನ್ನ ಆಜ್ಞೆಯನ್ನು ನೆರವೇರಿಸುವುದೇ ನನ ಗೊ೦ದು ವಿಧವಾದ ದರ್ಪವು ! ಇದು ನಿನಗೆ ಗೋಚರವಿಲ್ಲದ ಸಂಗತಿಯೆ ? ನನ್ನ ಮೇಲೆ ನಿನಗಿರುವ ವಾತ್ಸಲ್ಯಕ್ಕೆ ನಾನು ಅರ್ಹಳೆನಿಸಿಕೊಳ್ಳಲು ಸರೈ ಪ್ರಯತ್ನವನ್ನೂ ಮಾಡುತ್ತೇನೆ. (ತೆರಳುವರು.) ನಾಲ್ಕನೆಯ ಅ೦ ಕೆ. [ದೇವದತ್ತನ ಮನೆಯ ಪಡಸಾಲೆ, ಪ್ರಿಯಸೇನನೂ ಕಮಲಾವತಿಯೂ ಬರುವರು.] ಪ್ರಿಯ:ವಿಜಯಪಾಲನು ಈಗ ಬರುವನೆ ? ನಿನಗೆ ಹೇಳಿದವರಾರು ? ಕಮ:-ಅವನು ದೇವದತ್ತನಿಗೆ ಕಳಿಸಿರುವ ತಂತೀ ವರ್ತಮಾನವನ್ನು ನಾನೇ ನೋಡಿದೆನು, ರಾಮವರ್ಮನೂ ನೀನೂ ಹೊರಟ ಒಂದೆರಡು ಗಂಟೆ ಗಳಾದ ಅನಂತರ ಅವನು ಹೊರಟಿರುವನು. ಪ್ರಿಯ:-ಅವನು ಅಲ್ಲಿಗೆ ಬರುವುದಕ್ಕೆ ಮೊದಲೇ ನಾವು ನಮ್ಮ ಕೆಲಸವನ್ನು ಪೂರೈಸಬೇಕು. ಅವನು ನನ್ನ ಮನೋಭಿಪ್ರಾಯವನ್ನು ಬಲ್ಲ