ಪುಟ:ನಿರ್ಮಲೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ೮೧ ಅಯ್ಯೋ ! ನಾನು ಅನ್ಯಾಯವಾಗಿ ಮೋಸಹೋದೆನೆಲ್ಲ ! ಏನುಗತಿ ? ಅಯ್ಯೋ ! ನನ್ನ ಪೆಚ್ಚುತನವನ್ನು ನೋಡಿ ಎಲ್ಲರೂ ನಗುವರು. ನನ್ನ ಹೆಸರು ಜಗರ್ತ್ಪಸಿದ್ಧವಾಗುವುದು, ನಾನು ಗಾಂಪರೊಡೆಯನಾದೆನು. ನಾನು ಈ ಮನೆಯನ್ನು ಭೋಜನಶಾಲೆಯೆಂದು ನಂಬಬಹುದೆ ? ಅಯ್ಯೋ ! ನಮ್ಮಪ್ಪನ ಸನ್ನಿತ್ರನು ಭೋಜನಶಾಲೆಯ ಅಧ್ಯಕ್ಷನೆ ? ನನ್ನ ನ್ನು ಎಂತಹ ಆಡಂಬರಗಾರನೆಂದೂ, ದುರಹಂಕಾರಿಯಿಂದ ದೇವದತ್ತನು ಆಲೋಚಿಸ ಬಹುದು? ಎಂತಹ ಬುದ್ದಿ ಯಿಲ್ಲದ ಕೆಲಸವನ್ನು ಮಾಡಿದಂತಾಯಿತು. ಎಲೈ ರಮಣಿ, ನಿನ್ನ ನ್ನು ದೂತಿಯೆಂದು ಭಾವಿಸಿದ್ದೆನು. ನಿರ್ಮ:- ಸರಿ ! ನನ್ನ ನಡತೆಯಲ್ಲಿ ಯಾವ ವಿಷಯವನ್ನು ನೋಡಿ ನನ್ನ ನ್ನು ದೂತಿಯೆಂದು ತಿಳಿದಿರಿ ? ರಾಮ'-ಇಲ್ಲ ; ಇಲ್ಲ, ನನ್ನ ಂತಹ ಮೂಢರು ಮತ್ತಾರೂ ಇಲ್ಲ, ನಾನು ತಪ್ಪುಗಳನ್ನು ಚಂದಾ ಎತ್ತಲು ಹೊರಟಿದ್ದೆನು, ಯತ್ನ ವಿಲ್ಲದೆ ನಿನ್ನ ನ್ಯೂ ಬಬ್ಬ ಚಂದಾದಾರಳನ್ನಾಗಿ ಮಾಡಬೇಕಾಯಿತು, ನನ್ನ ವಿಚಿತ್ರ ಬುದ್ದಿಗೆ ತಕ್ಕಂತೆ ಪ್ರತಿಯೊಂದೂ ತಲೆಕೆಳಗಾಯಿತು, ಉಪಚಾರ ಮಾಡುತಿದ್ದ ನಿನ್ನ ನಡತೆಯನ್ನು ಧೈರ್ಯವೆಂದು ನಂಬಿದೆನು, ನಿನ್ನ ನಿರ್ಮಲ ಭಾವವನ್ನು ಮರುಳುಮಾಡುವ ಪ್ರಯತ್ನ ವೆಂದು ಭಾವಿಸಿದೆನು, ಈಗ ಎಲ್ಲವೂ ಮುಗಿಯಿತು. ಇನ್ನು ಈ ಮನೆಯಲ್ಲಿ ನಾನು ಯಾರಿಗೂ ಮುಖ ವನ್ನು ತೋರಿಸಲಾರೆನು. , ನಿರ್ಮ:ನಾನು ತಮಗೇನೂ ಅಪಕಾರವನ್ನು ಮಾಡಿಲ್ಲವಷ್ಟೆ ? ಇಷ್ಟೊಂದು ವಿನಯಸಂಪನ್ನರಾಗಿ, ನನ್ನೊಡನೆ ಬಹು ಅಕ್ಕರೆಯಿಂದ ಮಾ ತನಾಡಿದ ಗೌರವಸ್ತರ ಮನಸ್ಸನ್ನು ನೋಯಿಸಲು, ನನಗೆ ಸ್ವಲ್ಪವೂ ಇಷ್ಟ ವಿಲ್ಲ. (ಅಳುತ್ತ) ನನಗಾಗಿ ಯಾರಾದರೂ ಮನೆಯನ್ನು ಬಿಟ್ಟು ಹೋಗು ವುದಾದರೆ, ನನಗೆ ದುಃಖವು ಬರುವುದಿಲ್ಲವೆ ? ನನ್ನಲ್ಲಿ ನಿಷ್ಕಲಂಕವಾದ ನಡತೆಯೊಂದಲ್ಲದೆ ಬೇರೆ ಯಾವವಿಧವಾವ ಐಶ್ವಶ್ಯವೂ ಇರುವುದಿಲ್ಲ.