ಪುಟ:ನಿರ್ಮಲೆ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SA ನಿರ್ಮಲೆ ಯವನ್ನು ಕಬ್ಬೇರೆಮಾಡಿರುವುದು, ನಾನು ಇನ್ನು ಇಲ್ಲಿದ್ದರೆ ನಿಜವಾಗಿ ಯೂ ಕೆಡುವೆನು, ಚಂಚಲನಾಗದೆ ಧೈರ್ಯಮಾಡಿ, ಇವಳನ್ನು ಬಿಟ್ಟು ಈಗಲೇ ಓಡಿಹೋಗಬೇಕು, (ಪ್ರಕಾಶಂ) ನನ್ನ ವಿಷಯದಲ್ಲಿ ನೀನು ತೋರಿರುವ ಅಭಿಮಾನವು ನನ್ನ ಮನಸ್ಸನ್ನು ಬಹಳ ಮಟ್ಟಿಗೆ ಸೂರೆ ಗೊಂಡಿರುವುದು, ನಾನು ಸ್ವಚ್ಛೆಯಾಗಿ ಬಾಳಬಹುದಾಗಿದ್ದರೆ ನನಗೆ ಒಪ್ಪಿ ತಳಾದವಳನ್ನು ಈಗಲೇ ವರಿಸಬಹುದಾಗಿತ್ತು. ಆದರೆ ಲೋಕಾಪವಾ ದಕ್ಕೆ ಹೆದರಿ ತಂದೆಯ ಆಜ್ಞಾನುಸಾರವಾಗಿ ನಡೆಯಬೇಕಾಗಿದೆ. ನನಗೆ ಏನುಮಾತನಾಡಲೂ ತೋಚದು, ನಿಜವಾಗಿಯೂ ಹುಚ್ಚು ಹಿಡಿದಿದೆಯೆಂದೇ ಹೇಳಬಹುದು, ಈಗ ಹೋಗಿ ಬರುವೆನು, ದೇವರು ನಿನಗೆ ಶುಭವನ್ನು ಮಾಡಲಿ ! ಮಾಡಲಿ ! ( ಹೋಗುವನು) ನಿಮ್ಮ :-(ಸ್ವಗತ) ಇವನ ಗುಣಾತಿಶಯಗಳು ಇದುವರೆಗೂ ಸ್ವಲ್ಪ ವೂ ಗೋಚರವಿರಲಿಲ್ಲ, ನನಗೆ ಕೌಶಲವೂ ಯುಕ್ತಿಯ ನಿಜವಾಗಿಯೂ ಇದ್ದರೆ, ಇವನು ಮನೆಯಿಂದ ಹೇಗೆ ಹೊರಗೆ ಹೋಗಲಾಗುವುದೊ ನೋಡು ವೆನು. ಇವನ ಮನವನ್ನು ಸಂಪೂರ್ಣವಾಗಿ ಜಯಿಸಲು ದೂತಿಯಂತೆಯೇ ಇನ್ನೂ ಸ್ವಲ್ಪ ಕಾಲವಿರುವೆನು, ನನ್ನ ತಂದೆಗೆ ನಿಜವು ತಿಳಿದರೆ, ಅವನು ಹರ್ಷಿತನಾಗಿ ರಾಮವರ್ಮನನ್ನು ವರಿಸಲು ಆಜ್ಞೆಯನ್ನು ಕೊಡುವನು, ಅದೇ ಸರಿಯಾದ ಉಪಾಯವು (ಹೊರಟುಹೋಗುವಳು) - [ದುರ್ಮತಿ ಕಮಲಾವತಿಯರು ಬರುವರು.] - ದುರ್ಮ :-ನಿಮಗೆ ಇಷ್ಟವಿದ್ದರೆ ಪುನಃ ನೀವೇ ಕಳ್ಳತನವನ್ನು ಮಾಡಬಹುದು, ನನ್ನ ಕೆಲಸವನ್ನು ನಾನು ಮಾಡಿರುವೆನು, ಜವಾಹಿರಿ ಯ ಪೆಟ್ಟಿಗೆಯು ನಮ್ಮತ್ತೆಯ ವಶವಾಯಿತು. ಆದರೂ ಇದೆಲ್ಲವೂ ಸೇವ ಕರ ತಪ್ಪಿನಿಂದ ಆದುದೆಂದು ಅವಳು ತಿಳಿದಿರುವಳು. ಕಮ :-ಎಲೈ ದುರ್ಮತಿಯೆ, ಈ ದುರವಸ್ಥೆಯಲ್ಲಿ ನಮ್ಮ ಕೈ ಬಿಡುವೆಯೊ ? ನಾನು ಓಡಿಹೋಗುವೆನೆಂದು ನಮ್ಮಗೆ ಅನುಮಾನವು