ಪುಟ:ನೀರೆದೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀರದೆ ೧೭ ದರೋಗನ ಕ್ಷೇಮಚಿಂತಕನಾಗಿದ್ದ ಜಮಾದಾರನೊಬ್ಬನು ಓಡಿಬಂದು ಅವನ ಕಿವಿಯಲ್ಲೇನೋ ಹೇಳಿದನು. ಬಳಿಕ ದರೋಗನು ನಿರಸನಾದನು. ಹುಡುಗಿಗೆ ಮೂರ್ಛಿಯು ತಿಳಿಯಲಿಲ್ಲ. ದರೋಗನು ಮೊದಲು, ಅವಳು ವೇಷಹಾಕಿಕೊಂಡಿದ್ದಳೆಂದು ತಿಳಿದನು. ಜಮಾದಾರನು, ಅದು ವೇಷವಲ್ಲ ಹುಡುಗಿಗೆ ಪ್ರಾಣವುಳಿಯುವುದೇ ಸಂಶಯವೆಂದು ಹೇಳಿದ ಬಳಿಕ ದರೋಗನು ಭಯಗೊಂಡು ಡಾಕ್ಟರನನ್ನು ಕರೆತರಲು ಕನಸ್ಸೇಬಿ ನನ್ನು ಕಳುಹಿದನು. ಡಾಕ್ಟರನು ಬಂದು ಅನೇಕ ಪ್ರಯತ್ನಗಳಿಂದ ಹುಡು ಗಿಯನ್ನು ಬದುಕಿಸಿದನು. ಹುಡುಗಿಯೇನೊ ಬದುಕಿಕೊಂಡಳು. ಆದರೆ ದರೋಗನು ಅವಳ ಇಲ್ಲಿಗೆ ಬಿಡಲಿಲ್ಲ. ಅವಳನ್ನು ದೇವಿಯಲ್ಲಿ ಹಾಕಿಸಿ ಠಾಣೆಗೆ ಕಳುಹಿ ದನು. ಠಾಣೆಗೆ ಕಳುಹುವುದಕ್ಕೆ ಮೊದಲು ಡಾಕ್ಟರನು ಹುಡುಗಿಯನ್ನು ತನ್ನ ಮನೆಗೆ ಕೊಂಡೊಯ್ದು ಅವಳಿಗೆ ಹಾಲು ಮುಂತಾದ ಆಹಾರವನ್ನು ಕೊಟ್ಟು ಪಚರಿಸಿ ಕಳುಹಿದನು. ಮಧ್ಯಾಹ್ನಕ್ಕೆ ಮೊದಲು, ಟೊನಿಯ ಸುದ್ದಿಯು ನಾಲ್ಲೂಕಡೆಗೆ ಳಲ್ಲಿ ಹರಡಿಕೊಂಡಿತು. ಹತ್ಯಾಕಾರಿಯು ಹಿಡಿಯಲ್ಪಟ್ಟಿದ್ದಂತೆಯ ಸಮಾ ಚಾರವು ಹೊರಟು, ಆ ವಿಚಾರದಲ್ಲಿ ಜನರು ನಾನಾವಿಧವಾಗಿ ಆಡಿಕೊ೦ ಡರು. ಆದರೆ ಹುಡುಗಿಗೆ ಸಹಾಯವನ್ನು ಮಾಡಲಾರೂ ಮುಂದಾಗಿ ಬರ ಲಿಲ್ಲ-ಹುಡುಗಿಯು ಸೆರೆಯಲ್ಲಿ ಡಲ್ಪಟ್ಟಳು. - ಟ ದಿ ಆರನೆಯ ಪರಿಚ್ಛೇದ. ರಮಣೀಮೋಹನನು ವಾಸವಾಗಿದ್ದುದು ಗೋಪಾಲಪುರದಲ್ಲಿ ಅಕ್ಕಿಗೂ ಸುದ್ದಿಯು ಮುಟ್ಟಿತು. ಮೊದಲು ವಾಮೆಯು ಸುದ್ದಿಯನ್ನು ಕೇಳಿದವಳು-ಅವಳು ಸುದ್ದಿಯನ್ನು ಕೇಳಿ ಯಜಮಾನಿಗದನ್ನು ತಿಳಿಸದೆ

    • *