ಪುಟ:ನೀರೆದೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Mwww ಏಳನೆಯ ಪರಿಚ್ಛೇದ ತಾಯಿ-ಪ್ರಪಂಚದಲ್ಲಾರನ್ನು ನೋಡಿಕೊಳ್ಳಲಾದೀತು ? ತಾನು ಬದುಕಿಕೊಂಡರೆ ಸಾಕು, ರಮಣೀಮೋಹನನಿಗೆ ಮನಸ್ಸಿನಲ್ಲಿ ಸ್ವಲ್ಪ ವ್ಯಥೆಯಾದಂತೆ ತೋರು ತದೆ. ಅದು ಕಾರಣ ಅವನಾವ ಉತ್ತರವನ್ನೂ ಕೊಡಲಿಲ್ಲ. ಸ್ವಲ್ಪ ಹೊತ್ತಾದ ಬಳಿಕ, " ಅಮ್ಮಾ ! ಹುಡುಗಿಗಾರೂ ದಿಕ್ಕಿಲ್ಲ” ಎಂದನು. ತಾಯಿ-ಬಡವರಾದ ದುಃಖಿಗಳಿಗೆ ದಿಕ್ಕಾರು ಇರುವರು ? ರಮಣೀ-ಅಮ್ಮಾ ! ಹುಡುಗಿಯನ್ನು ಮನೆಗೆ ಕರೆತಂದಿದ್ದೇನೆ. ತಾಯಿ-ಇಲ್ಲಿಗೆ ? ನಮ್ಮ ಮನೆಗೆ ? ರರ್ಮನೇ-ಅಹುದು. ತಾಯಿ-ದೂರಕಳುಹು ಪೊಲೀಸ ಆಸಾಮಿಗಳಿಗೆಲ್ಲಾ ಮನೆಯಲ್ಲಿ ಸ್ಥಳವು ಸಿಗದು. ರಮಣೀ-ಈಗವಳು ಪೊಲೀಸ ಆಸಾಮಿಯಲ್ಲ. ತಾಯಿ-ಆಸಾಮಿಯಾಗದಿದ್ದರೂ ಆ ಅಲ್ಪಜನರಿಗೆ ಮನೆಯಲ್ಲಿ ಸಳನಿ. - ೮ ಇ ರಮಣೀ-ಹುಡುಗಿಗೆ ನಿಲ್ಲುವುದಕ್ಕೆ ನೆರಳಿಲ್ಲ -ಎಲ್ಲಿರುವಳು ? ತಾಯಿ-ಅದೇಕೆ ? ಮರದ ಬುಡದಲ್ಲಿರಲಿ, ರಮಣನೇಮೋಹನನು ಆಕಾಶವನ್ನು ನೋಡಿದನು. ಸಾಯಂಕಾಲ ನಾಗುತ ಬಂದಿತು. ಆಕಾಶವು ನೀಲಿಯಬಣ್ಣವು ಹೋಗಿ ಕೃಷ್ಣವಸನ ದಿಂದಾವೃತವಾಗುತ ಬರುತಿದ್ದಿತು. ರಮಮೋಹನನು ಮಾತಾಡದೆ ತಾಯಿಯ ಬಳಿ ಕುಳಿತಿದ್ದನು. ಗೃಹಿಣಿಯು ಹರಿನಾಮದ ಮಾಲೆಯನ್ನು ಟಕಟಕೆಂದು ತಿರುಗಿಸುತ್ತ, * ಮೋಹನ ! ಇಂದೇಕೆ ಅಷ್ಟೊಂದು ಅನ್ಯಮನಸ್ಕನಾಗಿರುವೆ ? ” ಎಂದಳು. ತಾಯಿಯು ರಮಣನೇಮೋಹನನ್ನು ಬರಿ “ ಮೋಹನ' ಎಂದು ಕರೆಯುವಳು. ಮೋಹನನು, “ ನಾಳೆ ಕಲಿಕತ್ತೆಗೆ ಹೋಗೋಣವೆಂದು ಯೋಚಿಸುತ್ತಿದ್ದನು ” ಎಂದನು. ತಾಯಿ-ಅದೇಕೆ ? ಕಾಲೇಜು ತೆರೆಯುವುದಕ್ಕಿನ್ನೂ ಹೆಚ್ಚು ವಿಳಂ ಬವಿದೆ ?