ಪುಟ:ನೀರೆದೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ೩೦ ಸೀರದೆ ನಾಮೆಯಂತೆ ನಂಬುಗೆಯಾದವಳು ಮತ್ತಾರೂ ಇಲ್ಲ ಅವಳ೦ತೆ ಮನೆಯ ಕೆಲಸಕಾರ್ಯಗಳನ್ನು ಮಮತೆಯಿಂದ ನೋಡಿಕೊಳ್ಳುವವರು ಮತ್ತಾರೂ ಇಲ್ಲ-ಆದರೆ ಪೊಲೀಸ ಆಸಾಮಿಯಾಗಿದ್ದ ಭಿಕ್ಷದ ಹುಡುಗಿಗೆ ಮನೆಯಲ್ಲಿ ರಲು ಸ್ಥಳವನ್ನು ಕೊಡುವದುಚಿತವಲ್ಲ, ಅವಳಿಗೆ ಸ್ಥಳವನ್ನು ಕೊಡದಿ ದ್ದರೆ ನಾಮೆಯು ಹೊರಟುಹೋಗುವಳು. ಯಜಮಾನಿಗೆ ಬಹಳ ಅನು ಸಂಕಟಕ್ಕಿಟ್ಟಿತು. ಅವಳು ಬಹಳ ಯೋಚಿಸಿ ಬಳಿಕ, ಒಳ್ಳೆಯದು, ಹುಡುಗಿಯು ಇಲ್ಲಿರಲಿ ; ಆದರೆ ಅವಳು ಮನೆಯೊಳಗೆ ಬಾರದಿರಬೇಕು ! ಎಂದು ಹೇಳಿದಳು. 5. ಒಂಬತ್ತನೆಯ ಪರಿಚ್ಛೇದ. ವ M ಆrama ರನುಮೋಹನನು ಕಲಿಕತ್ತೆಗೆ ಹೋಗಲಿಲ್ಲ --ವಾಮೆಯಮನೆ ಯನ್ನು ಬಿಟ್ಟು ಹೋಗಲಿಲ್ಲ. ಅವರಿಬ್ಬರ ಇಷ್ಟಾರ್ಥವೂ ಕೈಗೂಡಿತು. ಅನಾಥೆಯಾದಾ ಹುಡುಗಿಯು ಆಶ್ರಯವನ್ನು ಹೊಂದಲಿ, ಅಥವಾ ಹೊಂದದೆ ಹೋಗಲಿ, ಅವರಿಗೇಕೆ ಅಷ್ಟೊಂದು ಮನೋವ್ಯಥೆ ? ಹುಡುಗಿಯಲ್ಲಿ ಅವರಿಗೇಕೆ ಅಷ್ಟೊಂದು ಮೋಹ ಅಥವಾ ಮಮತೆ ? ಆ ಮೋಹ ಮಮತೆಗಳೇಕೋ, ನಾವದನ್ನು ಹೇಳಲಾರೆವು. ನಾವು ಬತ್ತಡವೆ ಬಂದು ಕಪೋತದ ಹಕ್ಕಿಯನ್ನು ನೋಡಿದ್ದೆವು ಅದು ಒಂಟಿಯಾಗಿದ್ದಿತು. ಅದ ರೊಂದಿಗೆ ಬೇರೆ ಕಪೋತವಾಗಲಿ, ಕಪೋತಿಯಾಗಲಿ ಇರಲಿಲ್ಲ. ಅದು ಎಲ್ಲಿಂದಲೋ ಹಾರಿ ಬಂದು ನಮ್ಮ ಮನೆಯ ಮಾಳಿಗೆಯ ಮೇಲೆ ಕುಳಿತು ಕೊಂಡಿತು. ಅದಕ್ಕೆಸಲವಾಗಿ ನಮ್ಮ ಮನಸ್ಸು ಮರುಗಿತು. ನಾವು ಅಂತರಿಕ್ಷವನ್ನೆಲ್ಲಾ ನೋಡಿದೆವು. ಹತ್ತರದಲ್ಲಾಗಲಿ ದೂರದಲ್ಲಾಗಲಿ ಬಂದಾದರೂ ಪಾರಿವಾಳ ದಹಕ್ಕಿಯು ಕಣ್ಣಿಗೆ ಬೀಳಲಿಲ್ಲ. ನಾವಾಗ ಸ್ಪಂದ ನಹೃದಯದಿಂದ ಮನೆಯೊಳಗೆ ಹೋಗಿ ಹಕ್ಕಿಗೊಸ್ಕರ ಸ್ಪಲ್ಪ ಧಾನ್ಯ ವನ್ನು ತಂದುಹಾಕಿದೆವು. ಹಕ್ಕಿಯು ಅದನ್ನು ತಿನ್ನಲಿಲ್ಲ-ಎದ್ದು ಹಾರಿ ಹೋಯಿತು. ನಾವದನ್ನು ಬಹಳವಾಗಿ ಕರೆದೆವು. ಅದು ಬರಲಿಲ್ಲ. ನಾವು