ಪುಟ:ನೀರೆದೆ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ನೀರದೆ wwwmy ಮೋಹನನು ಅಲ್ಲಿ ನಿಲ್ಲದೆ ಬೇಗನೆ ಹೋಗಿ ಬಂಡಿಯನ್ನು ಹತ್ತಿ ದನು-ಆಗ ವಾಮೆಯು ಓಡಿ ಬಂದು, “ ಮೋಹನ ! ಯಜಮಾನಿಯು ನಿನ್ನನ್ನು ಕರೆಯುತ್ತಾಳೆ ” ಎಂದಳು. ಮೋಹನನು ಮೆಲ್ಲ ಮೆಲ್ಲನೆ ಬಂಡಿಯಿಂದಿಳಿದು ವಾಮೆಯನ್ನನು ಸರಿಸಿ ಹೋದನು. ಯಜಮಾನಿ-ಎಲ್ಲಿಗೆ ಹೋಗುತ್ತಿ ? ಮೋಹನನು ನಿಸ್ಸಂಕೋಚವಾಗಿ, “ ನೀರದೆಯನ್ನು ಹುಡುಕಿ ಕೊಂಡು ಬರುವುದಕ್ಕೆ” ಎಂದನು. ಯಜಮಾನಿ-ನಾನೊಬ್ಬಳೇ ಇರಲೆ ? ಮೋಹನ-ನಾನೀಗಲೇ ಹಿ೦ದಿರಿಗಿ ಬರುವೆನು. ಯಜಮಾನಿ-ಅದಾಗುವುದಿಲ್ಲ-ಗಾಡಿಯು ಹೊರಡುವುದಕ್ಕೆ ಸಾವ ಕಾಶವಿಲ್ಲ. ಮೋಹನ-ಆದಿದ್ದರೆ ಮತ್ತೊಂದು ಗಾಡಿಯ ಹೊಗುವೆನು. ಯಜಮಾನಿ-ಆಗದು, ಇದೇ ಗಾಡಿಯಲ್ಲಿ ಹೋಗಬೇಕು. ನಾಮೆಯು ಯಜಮಾನಿಯ ಕಿವಿಯಲ್ಲಿ “ ಅಷ್ಟೊಂದು ಖಂಡಿತ ವಾಗಿ ಒತ್ತಾಯಮಾಡಲಾಗದು.ಚಿಕ್ಕ ಹುಡುಗನಲ್ಲ - ಎದುರು ಬಿದ್ದರೆ?” ಎಂದಳು. ಆದರೆ ಅವನು ಎದುರುಬೀಳ-ಮೋಹನನು ತಾಯಿಯ ಅಪ್ಪಣೆ ಯನ್ನು ನಿವಾರರಿಲ್ಲ-ಮೌನವಾಗಿ ನಿಂತಿದ್ದನು. ಸ್ವಲ್ಪ ಹೊತ್ತಾದ ಬಳಿಕ, “ ಅಮಾ” ಎಂದು ಕರೆದನು. ಯಜಮಾನಿ-ಏನು ? ಮೋಹನ-ನೀರದೆಯು ಹುಡುಗಿ-ಈ ದೇಶದ - ಯಜಮಾನಿ-ಫಿಕ್ಷಕರಿಗೆ ವಿದೇಶವಾವದು ? ಸ್ವದೇಶವಾವದು ? ಮೋಹನ-ಅವಳೆಲ್ಲಿಗೆ ಹೋಗಲಾಗಳು ? ಯಜಮಾನಿ-ಎಲ್ಲಿದ್ದಳೊ ಅಲ್ಲಿಗೆ ಹೋಗುವಳು. ಮೋಹನ-ಪ್ರಪಂಚದಲ್ಲಿ ಅವಳಿಗೆ ಬೇರೆ ಸ್ಥಳವಿಲ್ಲಯಜಮಾನಿ-ತೀರ್ಥಕ್ಷೇತ್ರಗಳಲ್ಲಿ ಭಿಕ್ಷಕ್ಕೆ ಕಡಿಮೆಯಿಲ್ಲ