ಪುಟ:ನೀರೆದೆ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ನೀರದೆ mದ ಹೊಂದಿದೆನು. ಅವಳ ಕಣ್ಣಿನಲ್ಲಾ ಮಚ್ಚೆಗಳಿದ್ದುವು. ನೀರದೆಯನ್ನು ಹೊಂದಿ ನಾನು ಪುನಃ ಸಂಸಾರಿಯಾದೆನು. ನೀರದೆಯು ಅವಳ ಜೀವನದಲ್ಲಿ ಆರುವರ್ಪಕಾಲ ಪಟ್ಟ ಕಷ್ಟವನ್ನು ಎಂದಿಗೂ ಮರೆಯೆನು. ” ರಮಣೀ-ಆ ಆರುವರ್ಷಕಾಲ ನೀರದೆಯಲ್ಲಿದ್ದಳು ? ಅನ್ನದಾ -ಒಬ್ಬ ವೇಶೈಯ ಮನೆಯಲ್ಲಿ. ರಮಣೀ-ನಾನೂ ಹಾಗೇನೇ ಕೇಳಿದೆನು. ಅನ್ನದಾ-ನಿನಗೆ ಹೇಳಿದವರಾರು ? ನಿರದೆಯೆ ? ರಮಣೀ-ಅಹುದು, ಅನ್ನದಾ-ಆದರೂ ನೀನು ನೀರದೆಯನ್ನು ತಿರಸ್ಕರಿಸಿ ನಿರಾಕರಿಸದೆ ಪ್ರೀತಿಸಿದೆ. ರಮಣಿ -ನೀರದೆಯನ್ನು ತಿರಸ್ಕರಿಸುವುದೆ ? ನೀರದೆಯನ್ನು ತಿರ ಸ್ಕರಿಸಿದ ದಿನ ನಾನು ಮನುಷ್ಯನಾಗೆನು.

  • ಅನ್ನದಾಬಾಬುವಿನ ಮೈಕಂಟಕಿತವಾಯಿತು-ಕಣ್ಣು ಸೋಗೆಯಲ್ಲಿ ಎರಡು ತೊಟ್ಟು ನೀರುಕಳಿಸಿತು. ಅವನು “ ನನ್ನ ನೀರದೆಯನ್ನು ಪ್ರೀತಿಸುವವನನ್ನು ನನಗಿಂತಲೂ ಹೆಚ್ಚೆಂದು ತಿಳಿಯುವೆನು-ನಿನ್ನ ಉಪಕಾ ರಕ್ಕೆ ತಕ್ಕ ಪ್ರತ್ಯುಪಕಾರವನ್ನು ನಾನೆಂದೂ ಮಾಡಲಾರೆನು” ಎಂದನು.

ರಮಣ -ನನ್ನ ಅಭಿಪ್ರಾಯದಲ್ಲಿ ನಾವಿಬ್ಬರೂ ಋಣಿಗಳು. ಅನ್ನದಾ-ಆರಿಗಾರು ಮಳೆ ? ರಮಣೀ-ನೀರದೆಯ ಪ್ರಾಣರಕ್ಷಣೆಯನ್ನು ಮಾಡಿದವರಿಗೆ, ಅನ್ನದಾ-ವೇ ಯಮುನೆಯು ನೀರದೆಯನ್ನು ಆಸನ್ನ ಮೃತ್ಯುವಿ ನಿಂದ ರಕ್ಷಿಸಿದವಳು-ಯಮುನೆಯು ಬ್ರಾಹ್ಮಣರ ಮಗಳು-ಗಂಡನಿಲ್ಲದವಳು. ಕುಲತ್ಯಾಗಿಯಾದಾಗ ದಾಮೋದರ ನದಿಯ ಮರಳಿನಲ್ಲಿ ನೀರದೆಯನ್ನು ಹೊಂದಿದಳು-ತಾನು ಧರ್ಮಭ್ರಷ್ಠೆಯಾಗಿದ್ದರೂ ಯಮುನೆಯು ನೀರದೆಗೆ ಧರ್ಮವನ್ನೂ ವಿದ್ಯೆಯನ್ನೂ ನೀತಿಯನ್ನೂ ಕಲಿಸಿದಳು-ನೀರದೆಯು ವಯ ಸ್ಟಾಗಿ ಜ್ಞಾನವು ಬಂದಾಗ ಆ ವೇಶೈಯ ಆಶ್ರಯವನ್ನು ತ್ಯಜಿಸಿ ಭಿಕ್ಷು ಕ ೪ಾದಳು.ಅಸತ್ಸಂಗಕ್ಕಿಂತ ಭಿಕ್ಷೆಯು ಮೇಲೆಂದು ತಿಳಿದು ಹಾಗೆ ಮಾ. ದಳು-ಬಳಿಕ ನಡೆದ ವಿದ್ಯಮಾನಗಳನ್ನು ನೀನೇ ಬಲ್ಲ.