ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೫೪ ನೋವು
ಅಡುಗೆಯವನು ಟ್ರೇಯಲ್ಲಿ ಉಪಾಹಾರದ ತಟ್ಟೆಗಳನ್ನು ತಂದ.
ಹೇಳಲೋ ಬೇಡವೋ ಎಂದು ಎರಡು ಮೂರು ಸಲ ಯೋಚಿಸಿದ ಬಳಿಕ ಧೈರ್ಯ
ತಂದುಕೊಂಡು. " ವಿಷ್ಣುಮೂರ್ತಿಗಳೇ, ನೀವು ಎರಡು ತಪ್ಪುಗಳು ನಿಮ್ಮಿಂದ ಆಗಿವೆ
ಅಂದಿರಿ. ಇನ್ನೊಂದನ್ನೂ ಹೇಳಬೇಕಾಗಿತ್ತು!" ಎಂದರು ಶ್ರಿನಿವಾಸಯ್ಯ.
ತಟ್ಟೆಗಳನ್ನು ನೋಡಿದೊಡನೆ ವಿಷ್ಣುಮೂರ್ತಿಯವರಿಗೂ ಅದು ಹೊಳೆದಿತ್ತು.
"ಹೌದಲ್ಲ!ಶಕ್ತ್ಯನುಸಾರ ಭಕ್ತಿ ಅಂತ ಏನೋ ತಿಂಡಿತೀರ್ಥ ಮಾಡಿದ್ವಿ.ರಾಯರಲ್ಲೂ
ಈ ಕಾರ್ಯಕ್ರಮ ಇದೆ ಅನ್ನೋದನ್ನ ಮರೀಬಾರದಾಗಿತ್ತು."
ಮೋಹನರಾಯರು ನಸುನೆಕ್ಕು ಅಂದರು :
"ದೊಡ್ತದಲ್ಲ ವಿಷ್ಣುಮೂರ್ತಿಗಳೇ. ಇದು ಅಲ್ಪೋಪಹಾರ. ಯಾವ ಲೆಕ್ಕಕ್ಕೆ ?
ತಗೊಳ್ಳಿ ಶ್ರಿನಿವಾಸಯ್ಯನವರೇ. ತಗೊಳ್ಳಿ ಪದ್ಮನಾಭರಾವ್. ತಗೊಳ್ಳೀಪ್ಪಾ."
ನೀಡಿದುದನ್ನು ಸ್ವೀಕರಿಸುವುದರ ಹೊರತು ಬೇರೆ ಧಾರಿ ಇರಲಿಲ್ಲ.
ಮೋಹನರಾಯರ ಪತ್ನಿ ಮಗಳೊಡನೆ ಬಂದರು. ಆರತಿ ಈಗ ವಿಲಾಸಿನಿಯಲ್ಲ
ವಧುಪರೀಕ್ಷೆಯಲ್ಲವೆ ಅದು? ಬಹಳ ಬೆಲೆಯ ರೇಷ್ಮೆ ಸೀರೆಯನ್ನು ಮೈತುಂಬ ಹೊದೆದ.
ಕೊಂಡು,ಗಂಭೀರವಾಗಿ ಆ ಲತಾಂಗಿ ಬಂದ ರೀತಿ ಶ್ರಿನಿವಾಸಯ್ಯನವರಿಗೆ ಮೆಚ್ಚುಗೆಯಾಯಿತು
ನಿರಾಶೆಯಾದುದು ಪದ್ಮನಾಭನಿಗೆ.ಅವನೆಂದುಕೊಂಡ. ಒಳ್ಳೆಯ ವಾಕಿಂಗ್ ಸ್ಟಿಕ್. ಪ್ರಮದೆ-
ಸುಬ್ಬಿ-ಕನಕಲತೆಯರಿಗೂ ಈಕೆಗೂ ಧ್ರುವಗಳ ಅಂತರ...
ಅದರೆ ಅ ಕಣ್ಣುಗಳು! ತುಟಿಗಳು!
ಆರತಿ ಕಳ್ಳ ನೋಟದಿಂದ ಅವನನ್ನು ನೋಡುವುದರಲ್ಲಿ ನಿರತಳಾಗಿದ್ದಳು : ವುಲ್ಲನ್
ಪ್ಯಾಂಟ್ ಬುಶ್ ಶರ್ಟಿನ ಕೆಂಪನೆಯ ಹುಡುಗ...
ಅವರ ನೋಟಗಳು ಸಂಧಿಸಿದಾಗ ಪದ್ಮನಾಭನಿಗೆ ರೋಮಾಂಚವಾಯಿತು. [ಅವಳಿಗೂ
ಅಷ್ಟೆ.] ಅವನ ನಿರಾಶೆ ಸಮಾಧಾನಕ್ಕೆ ಎಡೆಮಾಡಿಕೊಟ್ಟಿತು.
"ಆರತೀನ ಏನಾದರೂ ಕೇಳೋದಿದ್ದರೆ ಕೇಳಬಹುದು," ಎಂದರು ಮೋಹನರಾಯರು.
ಲಾಯರ್ ರಾಯರು ಆ ಸನ್ನಿವೇಶದಲ್ಲಿ ವಿಚಾರಣೆಯನ್ನು ಮುನ್ನೆಡೆಸುವ
ನ್ಯಾಯಾಧೀಶರಾಗಿದ್ದರು.
ಆದರೆ ವಕೀಲರಾಗಿ ಪ್ರಶ್ನೆಗಳ ಮಳೆ ಸುರಿಸಲು ಶ್ರಿನಿವಾಸಯ್ಯ ಸಿದ್ಧರಿರಬೇಕುಲ್ಲ ?
"ಛೆ ! ಛೆ ! ಕೇಳೋದು ಏನೂ ಇಲ್ಲ," ಎಂದರು.
ಅಷ್ಟರತನಕ ಪ್ರಯಾಸದಿಂದ ತುಟಿಗಳನ್ನು ಬಿಗಿಹಿಡಿದಿದ್ದ ವಿಷ್ಣುಮೂರ್ತಿಯವರಿಗೆ
ಮಾತಿನ ಆಕ್ಷಿ ಬಂತು.
"ನಾನೊಂದು ಹೇಳ್ಲಾ ಶ್ರಿನಿವಾಸಯ್ಯನವರೇ. ಈಗಿನ ಕಾಲ್ದಲ್ಲಿ ಹುಡುಗ-ಹುಡುಗಿ
ಮದುವೆಗೆ ಮುಂಚೆ ಪರಸ್ಪರ ಮಾತನಾಡೋದು ತಪ್ಪಲ್ಲ. ಬೇಕಿದ್ದರೆ ಪದ್ಮನಾಭರಾಯರೂ
ಮೋಹನರಾಯರ ಮಗಳೂ ಒಂದೈದು ನಿಮಿಷ..."
ಶ್ರಿನಿವಾಸಯ್ಯ ಅಂದರು :
" ಛೆ ! ಛೆ ! ಅದರ ಅಗತ್ಯ ಏನು? ... ಅಲ್ಲಾ, ಅದೂ ಸರೀನೇ ಅನ್ನಿ."
ತೀರ್ಪಿತ್ತರು ಮೋಹನರಾಯರು :