ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8ರಿ ಪಂಚತಂತ್ರ ಕಥೆಗಳು, ಅಸತ್ಯವಾದ ವಾಕ್ಕುಗಳನ್ನು ನುಡಿವುದಕ್ಕಿಂತ ಮಿನಿಯಾಗಿರು ವುದು ಮೇಲು, ಪರಧನವನ್ನು ಅಪಹರಿಸುವುದಕ್ಕಿಂತ ಭಿಕ್ಷವತ್ತು ವುದು ಒಳ್ಳೆಯದು. ಊಳಿಗ ಮಾಡುವುದರಿಂದ ಮಾನವೂ, ಬೆಳದಿಂಗ ೪ಂದ ಕತ್ತಲೆಯ, ವ್ಯಾಧಿಯಿಂದ ಚೆಲುವತನವೂ, ದೇವಕಥೆಗಳನ್ನು ಕೇಳುವುವರಿಂದ ಪಾಪವೂ ಹೇಗೆ ನಶಿಸುವುವೋ ಹಾಗೆಯೇ, ಒಬ್ಬ ರನ್ನು ಯಾಚಿಸುವುದರಿಂದ ಯಾಚಕನ ಗುಣಗಳಲ್ಲಾ ನಶಿಸುವುವು. ಅಧಮರು ಧನವನ್ನು ಕೋರುತ್ತಾರೆ ; ಮಧ್ಯಮರು ಧನಮಾನಗ ಳನ್ನು ಬಯಸುತ್ತಾರೆ; ಉತ್ತಮರು ಮಾನವನ್ನೇ ಅಪೇಕ್ಷಿಸು ತ್ತಾರೆ. ಮಹಾತ್ಮನಿಗೆ ಮಾನನೇ ಧನ. ಆದಕಾರಣ ಪರಾನ್ನ ದಿಂದ ನಾನು ಹೇಗೆ ಮೈಯನ್ನು ಬೆಳಸಲಿ ? ಇದು ಒಂದು ಮೃತ್ಯುದ್ವಾರ. ರೋಗಿಯೂ, ಬಹುಕಾಲ ಪ್ರವಾಸಮಾಡುವನೂ, ಪರಾನ್ನವನ್ನು ಭುಜಿ ಸುವನೂ, ಪರಗೃಹವಾಸವನ್ನು ಮಾಡುವವನೂ ಬದುಕಿದ್ದರೂ ಸತ್ತವ ನಿಗೆ ಸಮಾನರು ಎಂದು ಆಲೋಚಿಸಿ, ಸಿಟ್ಟುಗೊಂಡು ಧನಾಪೇಕ್ಷೆ ಯಿಂದ ಆ ಸಂನ್ಯಾಸಿಯನ್ನು ಕಚ ಬೇಕೆಂದು ಹತ್ತಿರಕ್ಕೆ ಹೋದೆನು. ಅದನ್ನರಿತು ಆತನು ಕೋಲನ್ನು ತೆಗೆದುಕೊಂಡು ನನ್ನನ್ನು ಹೊಡೆ ದನು. ಆಗ ಮುಖಕೆಟ್ಟು ಈಚಗೆ ಬಂದೆನು, ಉತ್ಸಾಹವುಳ್ಳವನಿಗೆ ಎಲ್ಲಿಗೆ ಹೋದರೂ ಸಂಪತ್ತು ಉಂಟಾಗು ವುದು, ಪಾಪಾಸು ಮಟ್ಟದವನ ಕಾಲಿಗೆ ಭೂಮಿಯೆಲ್ಲಾ ಚರ್ಮದಿಂದ ಹೊದಿಸಿದ ಹಾಗೆ ಇರುವುದು ಸಂತೋಷವೆಂಬ ಅಮೃತದಿಂದ ತೃಪ್ತಿ ಹೊಂದಿ ಶಾಂತವಾದ ಮನಸ್ಸುಳ್ಳವರಿಗೆ ಎಂಥ ಸುಖವುಂಟಾಗು ವುದೋ ಅಂಥ ಸುಖವು ಧನಲುಬ್ದರಾಗಿ ಈಚೆ ಆಚೆ ಓಡುವವರಿಗೆ ಹೇಗೆ ಉಂಟಾಗುವುದು? ತುಂಬ ಧನಾಶೆಯುಳ್ಳವನಿಗೆ ನೂರು ಗಾವು ದವಾದರೂ ದೂರವಾಗಿ ಇರದು. ನಿತ್ಯಸಂತೋಷಿಯಾಗಿ ಇರುವವನಿಗೆ ಧನವು ಕೈಗೆ ಸಿಕ್ಕಿದರೂ ಅದರಲ್ಲಿ ಆದರಣೆ ಹುಟ್ಟದು. ಅಸಾಧ್ಯವಾದ ಅರ್ಥದ ನಿಮಿತ್ತವಾಗಿ ಪ್ರಯತ್ನ ಮಾಡಬಾರದು. ಧನವಂತನು ವಿವೇ ಕಿಯಾದರೆ, ರತ್ನದೊಂದಿಗೆ ಚಿನ್ನ ಸೇರಿದ ಹಾಗೆ ಶೋಭಿಸುವನು.