ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಹೃಲಾಭವು. ನುಡಿದನು. ಅದಕ್ಕೆ ಆ ಮೃಗವು-ನನ್ನ ಹೆಸರು ಚಿತ್ರಾಂಗನು, ಒಬ್ಬ ಬೇಟೆಗಾರನು ನನ್ನ ಮೇಲೆ ಚಲಹಿಡಿದು ಬೆನ್ನಟ್ಟಿ ಬರಲು, ಹೆದರಿ ಇಲ್ಲಿ ಯಾರ ಸಂಗಡಲಾದರೂ ಸ್ನೇಹಿಸಿಕೊಂಡು ನಿರ್ಭಯವಾಗಿ ಇರೋಣವೆಂದು ಬಂದೆನು-ಎನಲಾಗಿ, ಆ ಮಾತಿಗೆ ಮಿತ್ರಮಂದರನು ಬಹಳ ಸಂತೋವಿನಿ-ಎಲೈ ಚಿತ್ರಾಂಗನೇ, ಈ ವನದಲ್ಲಿ ನಿನಗೆ ನಮ ಗಿಂತ ಆಪ್ತರು ಸಿಕ್ಕಲಾರರು. ಈ ಮನೆಯನ್ನು ನಿನ್ನ ಮನೆಯಾಗಿ ಎಣಿಸಿ ಕೊಂಡು ಮನಸ್ಸಿನಲ್ಲಿ ಭೇದವಿಲ್ಲದೆ ಇಲ್ಲಿ ನಮ್ಮ ಸಂಗಡ ಇರು-ಎಂದಿತು. ಮೃಗವು ಅದಕ್ಕೆ ಸಮ್ಮತಿಸಿ ಅಲ್ಲಿ ಬಹುಕಾಲ ಸುಖವಾಗಿದ್ದಿತು. Friendly feeling, ಹಾಗಿರಲು ಒಂದಾನೊಂದು ದಿನ ಮೃಗವು ದೂರಕ್ಕೆ ಮೇವಿಗೆ ಹೋಗಿ ನಿತ್ಯವೂ ಬರುವ ವೇಳಗೆ ಬಾರದೆ ಇದ್ದುದರಿಂದ, ಕೂರ್ಮಾದಿ ಗಳು ಚಿಂತೆಹೊಂದಿ ಸ್ವಲ್ಪ ಹೊತ್ತು ಏನೂ ತೋರದೆ ಇದ್ದುವು. ಆಗ ಲಘುಪತನಕನು ಎದ್ದು ನಾನು ಚಿತ್ರಾಂಗನನ್ನು ಹುಡುಕಿ ಬಿರು ತೇನೆ ಎಂದು ಹಾರಿಹೋಗಿ ಸಮಾಪದಲ್ಲಿ ಉರಲಿನಲ್ಲಿ ಸಿಕ್ಕಿಕೊಂ ಡಿದ್ದ ಮೃಗವನ್ನು ನೋಡಿ ಕಣ್ಣೀರು ಬಿಡುತ್ತಾ, ದುಃಖಸಮುದ್ರದಲ್ಲಿ ಮುಳುಗಿ-ಎಲೈ ಚಿತ್ರಾಂಗಾ, ನೀನು ಒಬ್ಬರನ್ನೂ ಬೇಡುವವನಲ್ಲ; ಅನೃರ ಆಪತ್ತನ್ನು ಸಹಿಸಲಾರೆ ; ಇತರರ ಸತಿಗೆ ಆಕೆ ಪಡುವವನಲ್ಲ, ಕಾಡಿನಲ್ಲಿ ಹುಲ್ಲತಿಂದು ನೀರುಕುಡಿದು ಕಾಲವನ್ನು ಕಳಯುತ್ತೀಯೆ. ಒಬ್ಬರಿಗೆ ಅಪಕಾರ ಮಾಡುವುದಿಲ್ಲ. ಇಂಥ ನಿನಗೆ ಈ ದುರವಸ್ಥೆ ಸಂಭವಿಸಬಹುದೇ ?-ಎಂದು ಅನೇಕ ಪ್ರಕಾರವಾಗಿ ಆ ಮೃಗವನ್ನು ಕುರಿತು ದುಃಖಿಸುತ್ತಾ, ತಿರುಗಿ ಅದನ್ನು ಕುರಿತು-ಈ ಮೂಲೆಗೆ ನೀನು ಏತಕ್ಕೋಸ್ಕರ ಬಂದೆ ? ಹೇಗೆ ಸಿಕ್ಕುಬಿದ್ದೆ ? ಇನ್ನು ಮೇಲೆ ನಾವು ಮಾಡಬೇಕಾದುದೇನು?-ಎಂದು ಕೇಳಿತು. ಅದಕ್ಕೆ ಚಿತ್ರಾಂಗನು “ಎಲೈ ಸ್ನೇಹಿತನೇ, ಬೇಟೆಗಾರನು ಬಂದ ಮೇಲೆ ನನ್ನನ್ನು ರಕ್ಷಿಸು ವುದು ನಿನಗೆ ಕಮ್ಮ. ಆದಕಾರಣ ಅವನು ಬರುವುದಕ್ಕಿಂತ ಮುಂಚೆಯೇ ನೀನು ಹೋಗಿ ಈ ವೃತ್ತಾಂತವನ್ನೆಲ್ಲಾ ಹಿರಣ್ಯಕನಿಗೆ ತಿಳಿಸಿ ಅವನನ್ನು