ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99 ಸಂಧಿವಿಗ್ರಹವು. ಪಡದೆ ಕಾರಗಳನ್ನು ಮಾಡುವಾಗ ಚೆನ್ನಾಗಿ ವಿಚಾರಿಸುತ್ತಾ ತಾಳ್ಯ ಯುಂಟಾಗಿ ಉಪಾಯಗಳನ್ನರಿತು ಮಧ್ಯವಿಲ್ಲದೆ ಇರುವವರಿಗೆ ದಂಡ ನೀತಿ ಸುಲಭವು. ಅರಸನಿಗೆ ಚತುರಂಗಬಲಸಮೃದ್ಧಿ ಯಿಲ್ಲದಿದ್ದರೂ ಬೊಕ್ಕಸವೂ ಮಂತ್ರವೂ ಇದ್ದರೆ ಅವು ಯುದ್ಧಕ್ಕೆ ಒದಗುವುವು. ಬೊಕ್ಕಸದಿಂದ ಎಲ್ಲರೂ ಧೃತರಾಗುವರು. ಮಂತ್ರದಿಂದ ಜಗತ್ತು ಜಯಿಸಲ್ಪಡುವುದು. ಪ್ರಾಣತ್ಯಾಗಮಾಡಿದರೂ ಪಡೆಯಕೂಡದ ಸಂಪ ತುಗಳು ಸೀತಿತಿಳಿದವರ ಮನೆಯಲ್ಲಿ ತಮ್ಮ ಸ್ಮಕ್ಕೆ ತಾವೇ ಬಂದು ಇರುವುವು. ಶೂರರೂ ಉಪಾಯವರಿತವರೂ ಮದ್ದಿವಂತರೂ ವಿದ್ಯಾಂ ಸರೂ ಸಹಾಯವಾದರೆ ಅರಸನು ಸರ್ವೊನ್ನ ತನಾಗುವನು. ಅರಸ ನಾಗುವುದು ಸತ್ಸಹಾಯದಿಂದಲೇ ಅಲ್ಲವೇ ? ರಾಜ್ಯಲಕ್ಷ್ಮಿ ವಂಶಪರಂ ಪರೆಯಾಗಿ ಬಂದಿದ್ದರೂ ಒಳ ಯ ಸಹಾಯವಿಲ್ಲದ ವಿದ್ವಾಂಸನನ್ನಾಗಲಿ ತೇಜಗಾರನನ್ನಾಗಲಿ ವರಿಸಲಿಚ್ಛಿಸಳು; ಶೂರನೂ ಸತ್ಸಹಾಯಕನೂ ಆದವನನ್ನೇ ವರಿಸಲಿಚ್ಛಿಸುವಳು, ರೆಕ್ಕೆಗಳಿಲ್ಲದ ಪಕ್ಷಿಗೆ ಆಕಾಶ ಗಮನವು ಹೇಗೆ ಕೊನೆಸಾಗದೆ ಹಾಗೆಯೇ, ಸಹಾಯವಿಲ್ಲದವನಿಗೆ ಒಂದು ಪ್ರಯತ್ನ ವಾದರೂ ಕೊನೆಸಾಗಲಾರದು. ಪ್ರಭುವು ತನ್ನ ಬುದ್ದಿಗೆ ತೋರಿದ ಕಾರವನ್ನು ವಿವೇಕಿಯಾದ ಆಪ್ತನೊಂದಿಗೆ ಆಲೋ ಚಿಸಿದರೆ, ಅಂಬಿಗನಿಂದ ಹಡಗು ಹೇಗೆ ರೇವಿಗೆ ಸೇರುವುದೋ ಹಾಗೆ ವಿಘ್ನಗಳಿಲ್ಲದೆ ಚೆನ್ನಾಗಿ ಹೇಮವನ್ನು ಹೊಂದುವನು. ತನ್ನ ಆದಾ ಯವನ್ನೂ ವೇದವನ್ನೂ ಸ್ಪಷ್ಮವಾಗಿ ತಿಳಿದುಕೊಂಡು ಗೂಢರಾದ ಚಾರರನ್ನು ಸಂಪಾದಿಸಿ ಮಂತ್ರವನ್ನು ಗುಟ್ಟು ಪಡಿಸಿ ಪ್ರಜೆಗಳಿಗೆ ಅಪ್ರಿಯಗಳನ್ನು ನುಡಿಯದೆ ದಯೆಯುಳ್ಳವನಾಗಿ ಯಾವನಿರುವನೋ ಅವನು ಸಮುದ್ರದಿಂದ ಸುತ್ತಿಕೊಳ್ಳಲ್ಪಟ್ಟ ಮಂಡಲವನ್ನೆಲ್ಲ ಅನುಭವಿ ಸುವನು, ತನ್ನ ಶಕ್ತಿಯನ್ನರಿಯದೆ ಗಾಂಧನಾಗಿ ದೊಡ್ಡ ಕಾರಗಳಿಗೆ ಆರಂಭಿಸಿದವನು ಬಾವಿಯಲ್ಲಿ ಬಿದ್ದ ಮೊಟ್ಟೆಯ ಹಾಗೆ ಕೆಟ್ಟು ಹೋಗುವನು. ಆದಕಾರಣ ಈಗ ಯುದ್ಧ ವೊಳ್ಳೆಯದಲ್ಲ. ಗೂಗೆಗಳಿಗೂ ನಮಗೂ ಸಹಜವೆರವಾದುದರಿಂದ ಸಂಧಿಯೂ ಸರಿಬೀಳದು-ಎನಲು, ಮೇಘ