ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

102 ಪಂಚತಂತ್ರ ಕಥಗಳು. ಆಲೋಚಿಸುವುದಕ್ಕೆ ಕರೆದು-ಎಲ್ಲ ನೀರಿಲ್ಲದುದರಿಂದ ಆನೆಗಳ ಗುಂಪು ಇಲ್ಲಿಗೆ ಬಂದು ಮೇಘಗಳ ಹಾಗೆ ದಿಕ್ಕುಗಳನ್ನೆಲ್ಲಾ ವ್ಯಾಪಿಸಿದುವು. ಅವುಗಳ ತುಳಿದಾಟದಿಂದ ಅನೇಕವಾಗಿ ಮೊಲಗಳು ನಲುಗಿ ಸತ್ತುವು. ಈ ಆನೆಗಳ ಉಪದ್ರವವು ನಮಗೆ ಹೇಗೆ ತಪ್ಪಿತು ? ಏನು ಮಾಡೋ ಣ ?-ಎನಲು, ಬಹು ವೃತ್ತಾಂತಗಳನ್ನರಿತ ವಿಜಯನೆಂಬ ಮುದಿಮೆ ಅವು ಶಿಲೀಮುಖನನ್ನು ನೋಡಿ-ಅಯ್ಯಾ, ಆನೆಗಳು ಇಲ್ಲಿಗೆ ಬಾರ ದಂತೆ ಮಾಡುವುದು ಕಷ್ಟ್ಯವಲ್ಲ.-ಎಂದಿತು. ಅದಕ್ಕೆ ಶಿಲೀಮುಖನು ಸಂತೋಸಿ-ಎಲೈ ವಿಜಯನೆ, ನೀತಿಶಾಸ್ತ್ರಗಳನ್ನೂ ದೇಶಕಾಲಗ ಳನ್ನೂ ಅರಿತ ನೀನು ಯಾವ ಕೆಲಸಕ್ಕೆ ಪ್ರವೇಶಿಸಿದರೂ ಆ ಕೆಲಸವು ನಿಶ್ಚಯವಾಗಿ ಕೈಗಡಿಬರುವುದು-ಎಂದು ನುಡಿದನು. ಅದನ್ನು ಕೇಳಿ ವಿಜಯನು ತಾವು ಆಜ್ಞಾಪಿಸಿದರೆ ನಾನು ಇಗೋ ! ಈ ಕಾರ ವನ್ನು ಸಾಧಿಸಿಕೊಂಡು ಬರುತ್ತೇನೆ ಎಂದು ಅಪ್ಪಣೆ ಪಡೆದುಕೊಂಡು ಹೊರಗೆ ಹೋಗಿ, ತನ್ನೊಳು ತಾನು ಇಂತೆಂದು ವಿತರ್ಕಿಸಿದನು ಓಶನ್ನಿನ ಗಜೋ ಹಂತಿ ಜೆಮ್ರನ್ನಿವ ಭುಜಂಗಮಃ | ಪಾಲಯವ ಭೂಪಾಲ ಪ್ರಹಸನ್ನಿ ವ ದುರ್ಜನಃ | ನಮ್ಮಂಥ ಅಲ್ಪದೇಹಿಗಳು ಈ ಆನೆಗಳ ಸವಿಾಪಕ್ಕೆ ಹೋಗಿ ಹೇಗೆ ಮಾತಾಡಬಹುದು ?” ಮುಟ್ಟುವುದರ ಹಾಗೆ ಆನೆ ಕೊಲ್ಲುವುದು; ಮೂಸಿನೋಡುವುದರ ಹಾಗೆ ಹಾವು ಕೊಲ್ಲುವುದು ; ಮನ್ನಿಸುವವನ ಹಾಗೆ ಅರಸನು ಕೊಲ್ಲುವನು ; ನಗುತ್ತಿರುವವನ ಹಾಗೆ ದುರ್ಜನನು ಕೊಲ್ಲುವನು. ಆದಕಾರಣ ನಾನು ಪರ್ವತ ಶಿಖರವನ್ನೇರಿ ಗಜರಾಜ ನೊಂದಿಗೆ ಮಾತನಾಡುವನು-ಎಂದು ನಿಕ್ತ ಯಿಸಿ, ಬೆಟ್ಟದ ತುದಿಗೆ ಹತ್ತಿ ಗಜರಾಜನನ್ನು ನೋಡಿ, “ಎಲೈ ಗಜರಾಜನೇ, ನಿನಗೆ ಶುಭವಾಗಲಿಎಂದು ನುಡಿದನು. ಗಜರಾಜನು ವಿಜಯನನ್ನು ನೋಡಿ-ನೀನು ಯಾರು ? ಎಲ್ಲಿಂದ ಬಂದೆ ?-ಎಂದು ಕೇಳಿದನು. ' ನಾನು ದೂತ ನು, ನನ್ನನ್ನು ಭಗವಂತನಾದ ಚಂದ್ರನು ಕಳಿಹಿಸಿದನು' ಎಂದು ಮೂಲವು ಹೇಳಿತ್ತು, ಏನು ಕೆಲಸವಾಗಿ ಬಂದೆ ?' ಎಂದು ಆನೆ