ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

108 ಪಂಚತಂತ್ರ ಕಥೆಗಳು, ಅವರ ಹತ್ತಿರಕ್ಕೆ ಬಂದು-ಅಯ್ಯಾ, ನೀವು ತುಂಬಾ ದೊಡ್ಡವರು. ನಾಯನ್ನು ಹೊತ್ತುಕೊಂಡು ಹೋಗುತ್ತೀರೇನು ? ಎಂದು ಕೇಳಿದನು ( ಛೇ, ನಿನಗೇನು ತಿಳವುದು ಹೋಗು' ಎಂದು ಅವನ ಮಾತನ್ನು ನೀರಾ ಕರಿಸಿ ಬ್ರಾಹ್ಮಣರು ಹೋಗುತ್ತಿದ್ದರು. ಆ ಮೇಲೆ ಸ್ವಲ್ಪ ಹೊತ್ತಿಗೆ ಅವನು ಮತ್ತೊಂದು ವೇಷಹಾಕಿಕೊಂಡು ಬಂದು ಅಯ್ಯಾ, ನಿಮ್ಮ ನ್ನು ನೋಡಿದರೆ ಬ್ರಾಹ್ಮಣರಾಗಿದ್ದೀರಿ, ಈ ದೊಡ್ಡ ನಾಯನ್ನು ಏತಕ್ಕೆ ಹೊತ್ತುಕೊಂಡು ಹೋಗುತ್ತಿರಿ ?-ಎಂದನು, “: ಸಿನಗೆ ತಿಳಿಯದು ಹೋಗು' ಎಂದು ಅವನ ಮಾತನ್ನು ಸಡ್ಡೆ ಮಾಡದೆ ಬ್ರಾಹ್ಮಣರು ಮತ್ತೂ ಸ್ಪಲ್ಪದೂರ ಸಾಗಿಹೋದರು. ಬಳಿಕ ಸ್ವಲ್ಪ ಹೊತ್ತಿಗೆ ಅವನು ಇನ್ನೊಂದು ವೇಷವನ್ನು ಹಾಕಿಕೊಂಡು-ಎಲೈ ಬ್ರಾಹ್ಮಣೋತ್ತಮರೇ, ನೀವೀನಾಯನ್ನು ಹೊರುವುದೇನು ? ನಿಮಗೇ ಅವಸ್ಥೆಯನ್ನು ಯಾರು ತಂದಿಕ್ಕಿದರು ?-ಎಂದನು. ಆ ಮಾತುಗಳನ್ನು ಬ್ರಾಹ್ಮಣರು ಕೇಳಿ ಸ್ವಲ್ಪ ಅನುಮಾನಿಸಿ-ಇಷ್ಟು ಮಂದಿ ಏಕವಾಕ್ಯವಾಗಿ ಇದು ನಾಯೆಂದು ಹೇಳುತ್ತಾರೆ. ಇದು ಅಬದ್ದವಾಗಿರದು. ನನಗೇನೋ ಬುದ್ದಿಗೆ ಇವೆ ಬಂದಿತು ಎಂದು ನಿಶ್ಚಯಿಸಿಕೊಂಡು, ಆ ಹೋತನನ್ನು ಬಿಟ್ಟು ಬಿಟ್ಟು ಹೋದರು. ತರುವಾಯ ಅವನು ಅದನ್ನು ತಾನೇ ಎತ್ತಿಕೊಂಡು ಹೋ ದನು. ಆದಕಾರಣ ಶತ್ರುಗಳನೇಕರು ಬುದ್ದಿ ಮಂತರಾಗಿ ಇದ್ದರೂ ಅವ ರನ್ನು ವಂಚಿಸಬಹುದು. ನಾನು ಸಾಹಸದಿಂದ ಶತ್ರುಗಳನ್ನು ಜಯಿ ಸುವೆನು. ನನ್ನ ಮಾತನ್ನು ನಂಬಿ ಚಿಂತೆಬಿಟ್ಟು ಇರಬೇಕು. ನನ್ನ ಮೈಗೆ ರಕ್ತವನ್ನು ಸವರಿ ನೀವೆಲ್ಲರೂ ಋಷ್ಯಶೃಂಗ ಪರತಕ್ಕೆ ಹೋಗಿ ಇರಬೇಕು. ನಾನಿಲ್ಲಿದ್ದು ನಮಗೆ ಬಂದ ಆಪತ್ತನ್ನು ತಪ್ಪಿಸುವ ಪ್ರಯ ತೃ ವನ್ನು ಮಾಡುತ್ತಿರುವೆನು” ಎಂದು ಹೇಳಿದನು. ಮೇಘವರ್ಣನು ಆ ಪ್ರಕಾರವೇ ಮಾಡಿದನು. * ತರುವಾಯ ಸೂರಾಸಮಯವಾಗುತ್ತಲೇ ಉಪಮರ್ದನೆಂಬ ಮೂಕರಾಜನು ತನ್ನ ಮಂತ್ರಿಗಳನ್ನು ನೋಡಿ-ಶತ್ರುಗಳನ್ನು ನಿಕ್ಕೇ ಪವಾಗಿ ಕೊಲ್ಲಬೇಕು. ಒಬ್ಬನು ಉಳಿದಾಗ್ಯೂ ನಮಗೆ ಒಳ್ಳೆಯ