ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿವಿಗ್ರಹವು 111 ಎಂದು ರಾಕ್ಷಸನು ಕೇಳಿದನು. ಬ್ರಾಹ್ಮಣನ ಹಸುಗಳನ್ನು ಅಪಹರಿಸ ಹೋಗುತ್ತೇನೆಂದು ಕಳ್ಳನೆಂದನು. ನಾನು ಆ ಬ್ರಾಹ್ಮಣನನ್ನು ಹಿಡಿಯ ಹೋಗುತ್ತೇನೆಂದು ರಾಕ್ಷಸನು ಹೇಳಿದನು. ತರುವಾಯ ಅವರಿಬ್ಬರೂ ಬ್ರಾಹ್ಮಣನ ಮನೆಗೆ ಹೋಗಿ ಬಾಗಿಲಲ್ಲಿ ನಿಂತರು. ಆಗ ಆ ರಾಕ್ಷಸನು ಚೋರನನ್ನು ನೋಡಿ_ನಾನು ಮುಂಚೆ ಒಳಕ್ಕೆ ಹೋಗಿ ಬ್ರಾಹ್ಮಣನನ್ನು ಹಿಡಿಯುತ್ತೇನೆ; ಆ ಮೇಲೆ ನೀನು ಆಕಳುಗಳನ್ನು ಹೊಡೆದುಕೊಂಡು ಹೋಗು ಎಂದನು. ಆ ಮಾತನ್ನು ಕಳ್ಳನು ಕೇಳಿ - ನೀನು ಮೊದಲಲ್ಲಿ ಬ್ರಾಹ್ಮಣನನ್ನು ಹಿಡಿದ ಪಕ್ಷದಲ್ಲಿ ಅವನು ಕೇಕೆಹಾಕಿದರೆ ನೆರೆಹೊರೆಯ ವರು ಏಳುವರು. ಆ ಸಮಯದಲ್ಲಿ ನಾನು ಓಡಿ ಹೋಗಬೇಕಲ್ಲದೆ ಆಕ ಳುಗಳನ್ನು ಹೇಗೆ ಹೊಡೆದುಕೊಂಡು ಹೋಗಲಿಕ್ಕಾದೀತು ? ನಾನು ಮೊದಲು ಆಕಳುಗಳನ್ನು ಹೊಡೆದುಕೊಂಡು ಈ ಗ್ರಾಮವನ್ನು ದಾಟಿ ಹೋಗುತ್ತಲೆ ನೀನು `ಬ್ರಾಹ್ಮಣನನ್ನು ಹಿಡಿಯಬಹುದು-ಎಂದು ರಾಕ್ಷಸನ ಸಂಗಡ ಹೇಳಿದನು. ಆಮೇಲೆ ಅವರಿಬ್ಬರೂ ನಿಟ್ಟಿನಿಂದ ಮೈ ತಿಳಿಯದೆ ಗಟ್ಟಿಯಾಗಿ ಮಾತನಾಡಲು, ಆ ಗದ್ದಲದಿಂದ ಮನೆಯ ಬ್ರಾಹ್ಮ ಣನು ಎಚ್ಚರಗೊಂಡು ಬೀದಿಯ ಬಾಗಿಲಿಗೆ ಬಂದು ಈ ಅರ್ಧರಾತ್ರಿಯ ವೇಳೆಯಲ್ಲಿ ನಮ್ಮ ಬಾಗಿಲಲ್ಲಿ ಜಗಳವಾಡುತ್ತಿದ್ದೀರಿ, ನೀವು ಯಾರು ? ಎಂದು ಕೇಳಿದನು. 'ಇವನು ನಿನ್ನ ಹಿಡಿಯಲಿಕ್ಕೆ ಬಂದ ಬ್ರಹ್ಮರಾಕ್ಷ ಸನು ' ಎಂದು ಕಳ್ಳನು ಹೇಳಿದನು. 'ಇವನು ನಿನ್ನ ಆಕಳುಗಳನ್ನು ಅಪಹರಿಸಲಿಕ್ಕೆ ಬಂದ ಕಳ್ಳನು ' ಎಂದು ಬ್ರಹ್ಮರಾಕ್ಷಸನು ನುಡಿದನು ಆಗ ಬ್ರಾಹ್ಮಣನು ತನ್ನ ಮಂತ್ರಬಲದಿಂದ ಬ್ರಹ್ಮರಾಕ್ಷಸನನ್ನು ಓಡಿಸಿ ಬಿಟ್ಟನು. ಅದಕ್ಕೆ ಮುಂಚೆಯೇ ಕಳ್ಳನು ಕಂಬಿಕಿತ್ತನು. ಆದಕಾರಣ ಶತ್ರುಗಳು ತಮ್ಮಲ್ಲಿ ತಾವು ಹೋರಾಡುವುದು ಮೇಲು. ಅದೂಅಲ್ಲದೆ ಮಹಾತ್ಮನಾದ ಶಿಬಿಚಕ್ರವರ್ತಿ ತನ್ನ ಮಾಂಸವನ್ನು ಕೊಯ್ದು ಡೇಗೆಗೆ ಕೊಟ್ಟು ಶರಣುಹೊಕ್ಕ ಪಾರಿವಾಳವನ್ನು ರಕ್ಷಿಸಿದನೆಂದು ಕೇಳಲಿಲ್ಲವೆ? ನೀನು ಶರಣಾಗತನನ್ನು ಕೊಲ್ಲಕೂಡದು-ಎಂದನು. ಅದನ್ನು ಕೇಳಿ ಉಪಮರ್ದನು ಪ್ರಕಾರವರ್ಣನೆಂಬ ಮಂತ್ರಿಯನ್ನು ನೋಡಿ--ನಿನ್ನ ಅಭಿಪ್ರಾಯವೇನು-ಎಂದು ಕೇಳಲು, ಅವನು ವಕ್ರನಾಸನು ಹೇಳಿದಂ