ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11E ಪಂಚತಂತ್ರ ಕಥೆಗಳು, Upamardana's kind reception of Chiranjivi, snd the consequent destruction of the Owls. ಆ ಬಳಿಕ ಉಪಮರ್ದನು ರಕ್ತಾಕ್ಷನ ಮಾತುಗಳನ್ನು ಆದರಿ ಸದೆ ಚಿರಂಜೀವಿಯನ್ನು ಹತ್ತಿರಕ್ಕೆ ಕರೆದು ಅಭಯಪ್ರದಾನಮಾಡಿಎಲೈ ಚಿರಂಜೀವಿಯೇ, ನೀನು ಸ್ನೇಚ್ಛೆಯಾಗಿ ನನ್ನ ಮನೆಯಲ್ಲಿ ಇರು -ವಿಂದು ಅವಕ್ಕೆ ಆಹಾರಗಳನ್ನು ಒದಗಿಸುವುದಕ್ಕೆ ತನ್ನ ಪರಿಚಾರಕ ರನ್ನು ಏರ್ಪಡಿಸಿ ಬಹು ಪ್ರೀತಿಯಾಗಿದ್ದನು. ಆ ಮೇಲೆ ಚಿರಂಜೀವಿ ಸ್ವಲ್ಪ ಕಾಲವಿದ್ದು ಶತ್ರುಗಳಿಗಿರುವ ಬಲವನ್ನೂ ದುರ್ಗಸ್ಥಾನಗಳನ್ನೂ ರಹಸ್ಯಮಾರ್ಗಗಳನ್ನೂ ತಿಳಿದುಕೊಂಡು, ಶತ್ರುಗಳನ್ನು ನಾಶಮಾಡ ಲಿಕ್ಕೆ ಇದು ಸಮಯವೆಂದು ಎಣಿಸಿ, ಒಂದು ದಿನ ಬೆಳಗ್ಗೆ ಗೂಗೆಗಳು ಮಲಗಿ ಮೈ ಮರೆತು ನಿದ್ದೆ ಹೋಗುತ್ತಿರುವಾಗ, ಗವಿಯ ಸುತ್ತಲೂ ಹಸುಗಳ ಮಂದೆ ನಿಲ್ಲುವುದರಿಂದ ಸೇರಿದ ಗೊಬ್ಬರವನ್ನು ಸ್ವಲ್ಪ ಕೊಕ್ಕಿನಲ್ಲಿ ಸ್ವಲ್ಪ ಕಾಲುಗಳಲ್ಲಿ ತೆಗೆದುಕೊಂಡು ಹೋಗಿ ಗುಹೆಯ ದ್ವಾರಗಳಲ್ಲೆಲ್ಲಾ ತುಂಬಿಟ್ಟು, ಗೂಗೆಗಳನ್ನು ಚೆನ್ನಾಗಿ ನೋಡಿನನ್ನನ್ನು ನಂಬಿದ ಇವುಗಳನ್ನು ಕೊಲ್ಲುವುದರಿಂದ ನನಗೆ ದೋಪವಿಲ್ಲ, ಶತ್ರುಗಳನ್ನು ನಂಬಿಸದೆ ಕೊಲ್ಲುವುದು ಕಮ್ಮ ನನ್ನನ್ನೇ ಮುಖ್ಯ ವಾಗಿ ನಂಬಿದ ಮೇಘವರ್ಣನಿಗೆ ಹಿತವನ್ನು ಮಾಡಬೇಕು. ಆಳಿದವನು ಸೇವಕನಿಗೆ ಯಾವ ಕೆಲಸವನ್ನು ಹೇಳುತ್ತಾನೋ ಆ ಕೆಲಸವನ್ನು ನೆರ ವೇರಿಸುವುದು ಅವನಿಗೆ ಧರ್ಮವು. ಇಂತಹ ಸಂಗತಿಯಲ್ಲಿ ಪಾಪಪುಣ್ಯ ಗಳು ಪ್ರಭುವಿಗೆ ಬರುವುದೇ ಹೊರತು ನೃತೃನಿಗೆ ಏನು ದೋಪವಿದೆ? ಮೇಘವರ್ಣನಿಗೆ ಈ ಸಮಯವನ್ನು ತಿಳಿಸಬೇಕು ಎಂದೆನಿಸಿ, ತಟ್ಟನೆ ಮೇಘವರ್ಣನ ಬಳಿಗೆ ಹೋಗಿ ಆತನಿಗೆ ಎರಗಿ ( ನಮ್ಮ ಮುಖ್ಯಿ ತೀರಿಸಿ ಕೊಳ್ಳುವುದಕ್ಕೆ ಯುಕ್ತವಾದ ಕಾಲವನ್ನು ಕಂಡು ಹಿಡಿದು ನಿಮಗೆ ತಿಳಿ ಸುವುದಕ್ಕೆ ಬಂದೆನು. ಕಡೆಯಲ್ಲಿ ನನ್ನ ಸಮಾಚಾರವನ್ನು ಹೇಳು ವೆನು, ಈಗ ನಮ್ಮವರೆಲ್ಲರೂ ಕಸಕಡ್ಡಿಗಳನ್ನು ತೆಗೆದುಕೊಂಡು ಬರುವ ಹಾಗೆ ಆಜ್ಞಾಪಿಸಿರಿ' ಎಂದು ಹೇಳಿ, ತಾನು ಉರಿವ ಕೊಳ್ಳಿಯನ್ನು ಕಚ್ಚಿ ಕೊಂಡು ಜಾಗ್ರತೆಯಾಗಿ ಮುಂದೆ ಹೋದನು. ಕಾಗೆಗಳಲ್ಲಾ ತೃಣ