ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ 118 ಪಂಚತಂತ್ರ ಕಥೆಗಳು, Chiranjivi honoured by Meghavarna. ಅಲ್ಲಿ ಮೇಘವರ್ಣನು ಮಹಾ ವೈಭವದೊಂದಿಗೆ ಒಡೋಲಗದಲ್ಲಿ ಮೈು, ಚಿರಂಜೀವಿಯನ್ನು ನೋಡಿ ತಬ್ಬಿಕೊಂಡು ಚೆನ್ನಾಗಿ ಸನ್ಮಾನಿಸಿ -ಇಷ್ಟುದಿನ ಶತ್ರುಗಳು ನಂಬುವಂತೆ ಯಾವ ವಿಧವಾಗಿ ನಡೆದು ಕೊಂಡ ? ನನಗೆ ಹೇಳಬೇಕು-ಎನಲು, ಚಿರಂಜೀವಿ ಇಂತೆಂದನು. ಅಯ್ಯಾ, ಕಾವ್ಯಾರ್ಥಿಯಾದವನು ಒಂದು ವೇಳೆ ಬರಿದು ನೆಲದಲ್ಲಿ ಮಲಗಿಕೊಳ್ಳುವನು, ಒಂದು ವೇಳೆ ಒಳ್ಳೆಯ ಮೃದುವಾದ ಹಾಸಿಗೆಗಳ ಮೇಲೆ ಮಲಗಿಕೊಳ್ಳುವನು, ಒಂದುವೇಳೆ ಕಾಯಿ ಸೊಪ್ಪುಗಳನ್ನು ತಿನ್ನುವನು, ಒಂದುವೇಳೆ ಪಡ್ರಸೋಪೇತವಾದ ಶಾನ್ನವನ್ನು ಉಣ್ಣು ವನು ; ಒಂದು ವೇಳ ಬೊಂತೆಯನ್ನು ಹೊಡೆದುಕೊಳ್ಳುವನು, ಒಂದು ವೇಳೆ ಒಳ್ಳೆಯ ಊತುಬಟ್ಟೆಗಳನ್ನು ಉಟ್ಟುಕೊಳ್ಳುವನು; ಸುಖರ್ದು ಖಗಳನ್ನು ಮನಸ್ಸಿನಲ್ಲೆಣಿಸನು. ಅನುವಲ್ಲದ ವೇಳೆಯಲ್ಲಿ ಅಧಿಕ ಸಾಮ ರ್ಥ್ಯವುಳ್ಳವನಾದಾಗ, ಶತ್ರುಗಳನ್ನಾದರೂ ಸೇವಿಸಿ ಸಮಯ ಬಂದಾಗ ಶತ್ರುಗಳನ್ನು ಗೆಲ್ಲುವನು. ಸಕಲದಿಕ್ಕಿನಲ್ಲಿ ಇರುವ ಅರಸುಗಳನ್ನೂ ಪರಾಕ್ರಮದಿಂದ ಗೆಲ್ಲುವಂತಹ ತಮ್ಮಂದಿರನ್ನು ಯುಧಿಷ್ಟಿರನು ಸಹ ಅನುಕೂಲವಿಲ್ಲದ ವೇಳೆಯಲ್ಲಿ ತನ್ನ ತಮ್ಮಂದಿರ ಸಹಿತ ಸಕಲ ಕಪ್ಪಗ ಇನ್ನೂ ಅನುಭವಿಸಲಿಲ್ಲವೇ ? ಮತ್ತದೇಶಾಧಿಪತಿಯಾದ ವಿರಾಟರಾ ಜನ ಹತ್ತಿರ ಕಾವಿಯ ಬಟ್ಟೆಗಳನ್ನು ಉಟ್ಟುಕೊಂಡು ಕೆಂಕಭಟ್ಟನೆಂಬ ಹೆಸರಿನಿಂದ ಧರ್ಮರಾಯನು ಇದ್ದನು ; ವಲಲನೆಂಬ ಹೆಸರಿಸಿಂದ ಅಡಿಗೆ ಯವನಾಗಿ ಭೀಮನು ಕಾಲವನ್ನು ಕಳದನು ; ಶಿಖಂಡಿಯಾಗಿ ಹೆಂಗಸ ರಿಗೆ ನಾಟ್ಯವನ್ನು ಕಲಿಸುತ್ತಾ ಬೃಹಂನಳಯೆಂಬ ಹೆಸರಿನಿಂದ ಅರ್ಜಿ ನನು ವರ್ತಿಸಿದನು; ತಂತ್ರಿಪಾಲನೆಂಬ ಹೆಸರಿನಿಂದ ನಕುಲನು ಆತ್ಮ ಶಿಕ್ಷಕನಾದನು; ದಾಮಗ್ರಂಥಿ ಎಂಬ ಹೆಸರಿನಿಂದ ಸಹದೇವನು ದನ ಕಾವ ವನಾಗಿ ಇದ್ದನು. ಬಳಿಕ ಕಾಲವು ಅನುಕೂಲಿ ಬರುತ್ತಲೇ ಸಾಂಡ ವರು ದುದ್ಯೋಧನನೇ ಮೊದಲಾದ ಶತ್ರುಗಳನ್ನೆಲ್ಲರನ್ನೂ ಗೆದ್ದು ಸಕಲ ಸಮಾಜವನ್ನೂ ಅನುಭವಿಸಿದರು. ಆದಕಾರಣ ನಾನು ಮಹಾ ಬಲ