ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿವಿಗ್ರಹವು. 119 ಹೀನನಾದ ದೆಸೆಯಿಂದ ಕತುಗಳನ್ನು ಓಲೈಸಿ ಹಗೆತೀರಿಸಿದನು-ಎಂದು ಚಿರಂಜೀವಿ ಹೇಳವನು. ಆಗ ಮೇಘವರ್ಣನು ಸಾವರವಾಗಿ ಚಿರಂಜೀವಿಯನ್ನು ನೋಡಿಶತ್ರು ಮಧ್ಯದಲ್ಲಿ ಸ್ವಲ್ಪವಾದರೂ ಶಂಕೆಯಿಲ್ಲದೆ ಧೈರ್ಯದಿಂದ ಹೇಗೆ ವರ್ತಿಸಿದೆ ಹೇಳು `ಎನ, ಚಿರಂಜೀವಿ ಇಂತೆಂದನು:-ದೇವಾ ಕೇಳು, ಉಲೂಕಪತಿಯಾದ ಉಪವರ್ದನನ ಮಂತ್ರಿಗಳಲ್ಲಿ ರಕ್ಷಾ ಕನೆಂಬವನು ನೀತಿಶಾಸ್ತ್ರ ವನ್ನು ಚೆನ್ನಾಗಿ ತಿಳಿದವನು, ಸಜ್ಜನರಿಗೆ ಪ್ರಿಯನು, ಪರಾಕ್ರಮವುಳವನು, ಕೊರವಲ್ಲದ ನಡವಳಿಕೆಯುಳ್ಳವನು, ಸರ್ವಜನರಿಂದಲೂ ಸ್ತೋತ್ರ ಮಾಡಲ್ಪಟ್ಟವು, ನನಗಿಂತ ಹೆಚ್ಚು ಬುದ್ದಿಯುಳ್ಳವನು. ಅವನು ನನ್ನನ್ನು ಕೊಲ್ಲಬೇಕೆಂದು ಉಪಮುರ್ದ ನನ ಸಂಗಡ ಎಷ್ಟು ಹೇಳಿದಾಗೂ ಆತನು ಕೇಳದೆ, ಇತರಾದ ತನ್ನ ಮಂತ್ರಿಗಳ ಸಂಗಡ ಆಲೋಚಿಸಿ, ಶರಣಾಗತರನ್ನು ಕೊಲ್ಲಕಡದೆಂದು ಅವರು ಹೇಳಲು, ಅವರ ಮಾತನ್ನು ಕೇಳಿ ನನ್ನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಇಷ್ಟು ವಿಪತ್ತನ್ನು ತಂದುಕೊಂಡನು. - ನೀನು ಅತಿಸಮರ್ಥನು, ಆದಕಾರಣ ಶತ್ರುಗಳನ್ನು ಜಯಿಸಿದೆ. ತನಗೆ ಸಮ ಯವಲ್ಲದಾಗ ಶತ್ರುಗಳಿಗೆ ಅಧೀನನಾಗಿದ್ದು ತರುವಾಯು ಶತ್ರುಗಳನ್ನು ಗೆಲ್ಲುವುದು ಒಳ್ಳೆಯದು. ಪೂರ್ವದಲ್ಲಿ ಒಂದು ಕೃಷ್ಣಸರ್ಪವು ಕಪ್ಪೆ ಗಳನ್ನು ತನ್ನ ಬೆನ್ನಿನ ಮೇಲೆ ಹೊತ್ತು ಓಲೈಸುತ್ತಿದ್ದು ಸಮಯ ಬಂದಾಗ ಅವುಗಳನ್ನೆಲ್ಲಾ ಕೊಂದಿತು-ಎನಲು, ಮೇಘವರ್ಣನು ಆ ಕಥೆಯನ್ನು ತನಗೆ ಹೇಳಂದನು. ಚಿರಂಜೀವಿ ಹೇಳುತ್ತಾನೆ. 'Triust-breaking-The Serpent Mlandavisha - and the Frog Jalapadu. ಮಂದವಿಪನೆಂಬ ಹೆಸರುಳ್ಳ ಒಂದು ನಾಗರಹಾವು ಹಸಿವುಗೊಂಡು ತಿರುಗುತ್ತಿದ್ದು ಕಪ್ಪೆಗಳುಳ್ಳ ಒಂದು ಕೊಳದ ಹತ್ತಿರಕ್ಕೆ ಹೋಗಿ ಅವು ಗಳ ಅರಸನಾದ ಜಾಲವಾದನೆಂಬ ಕಪ್ಪೆಯನ್ನು ನೋಡಿ, ಮಹಾದೈತ್ಯ ಬಂದ ಹೀನವಾದ ಕಂಠಸ್ವರದಲ್ಲಿ ನನ್ನ ಹೊಟ್ಟೆಗೋಸ್ಕರ ನಾನು ಬಟ್ಟೆ