ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

120 ಪಂಚತಂತ್ರ ಕಥೆಗಳು, ರನ್ನೂ ಕೇಳದೆ ಈ ವರೆಗೆ ಕಾಲಕಳದೆನು. ಈಗ ನಿಮಗೆ ನೃತ್ಯ ನಾಗಿ ಇರಬೇಕಾಗಿ ಬಂದಿತು, ನಾನೇನು ಮಾಡಲಿ ! ನನ್ನನ್ನು ದೈವವು ಈ ಗತಿಗೆ ತಂದಿತು --ಎನಲು, ಜಾಲಪಾದನು ಕೇಳ ನಮ್ಮನ್ನು ಈಗ ಆಕ್ರಯಿಸುವುದಕ್ಕೆ ಕಾರಣವೇನು?-ಎಂದು ಕೇಳಿದನು. ಅದಕ್ಕೆ ಮಂದವಿಪನು-ನಿನ್ನೆ ರಾತ್ರಿವೇಳೆಯಲ್ಲಿ ಹಸಿವಿನಿಂದ ಬಳಲಿ ಅತ್ತಿತ್ತ ತಿರುಗುತ್ತಿರುವಾಗ ಒಬ್ಬ ಬ್ರಾಹ್ಮಣಬಾಲನು ಕಾಣದೆ ನನ್ನನ್ನು ತುಳ ದನು. ನಾನು ಅವನನ್ನು ಅತ್ಯುಗ್ರವಾಗಿ ಕಚ್ಚಿ ದೆನು. ಆಗ ವಿಪ್ರವೇಶಿ ಅವನು ಮೂರ್ಛ ಹೋಗಲು, ಆ ಹುಡುಗನ ತಂದೆ ನೋಡಿ ಬಹಳ ದಿಗಿಲುಪಟ್ಟು ಮಂತ್ರವಾದಿಗಳನ್ನು ಕರೆದುತಂದು ಮಂತ್ರಪಾಕಿಸಿ ಔಷಧಗಳನ್ನು ಕೊಟ್ಟು ಅವನನ್ನು ಬದುಕಿಸಿಕೊಂಡು, ನನ್ನ ಮೇಲೆ ಬಹು ನಿಟ್ಟಿನಿಂದ ಕಣ್ಣು ಕೆರಳಿಸಿಕೊಂಡು, ನನ್ನ ಮಡುಗನನ್ನು ಕಚ್ಚಿದ ಕೆಟ್ಟ ಹಾವು ತನಗೆ ಆಹಾರವಾದ ಕಪ್ಪೆಗಳನ್ನು ಹೊತ್ತು ಬಹಳ ಹಸಿವಿನಿಂದ ಕಂಗೆಟ್ಟು ಓಡಲಾರದೆ ಆ ಕಪ್ಪೆಗಳು ದಯೆಮಾಡಿ ಕೊಟ್ಟ ಆಹಾರವನ್ನು ತಿಂದು ಅವುಗಳಲ್ಲಿ ಒಂದಾಗಿ ಸಂಚರಿಸಲಿ' ಎಂದು ನನ್ನನ್ನು ಶಪಿಸಿದನು. ನಾನು ಸವಿಾಪದಲ್ಲಿರುವ ಹುತ್ತಿನಲ್ಲಿದ್ದು ಈ ಮಾತುಗಳನ್ನೆಲ್ಲಾ ಕೇಳಿದೆನು. ಸಿಡಿಲಿನ ಸೆಟ್ಟನ್ನಾದರೂ ತಪ್ಪಿಸಿಕೊಳ್ಳ ಬಹುದಲ್ಲದೆ ಬ್ರಾಹ್ಮಣನ ಶಾಪವನ್ನು ತಪ್ಪಿಸಿಕೊಳ್ಳಕೂಡದು. ಈಗ ನೀನೇ ದಿಕ್ಕೆಂದು ಬಂದೆನು. ದಯೆಯಿಂದ ನನ್ನನ್ನು ಹತ್ತಿರಕ್ಕೆ ಸೇರಿಸಿಕೊಂಡು ನಿನ್ನ ನೃತ್ಯನನ್ನಾಗಿ ಆ ನನಗೆ ತುಸ ಆಹಾರಕೊಟ್ಟು ಕಾಪಾಡಬೇಕು. ಪೂರ್ವದಲ್ಲಿ ನನ್ನ ನಿಮ್ಮ ಹಿರಿಯರು ವಿವೇಕವಿಲ್ಲದು ದರಿಂದ ಸ್ನೇಹಿಸಲೊಲ್ಲದೆ ವೃಥಾ ಹಗೆತನವನ್ನು ಬೆಳೆಸಿಕೊಂಡು ಹೋದ ರು. ಈಗ ನಾನೂ ಸೀವೂ ಸ್ನೇಹವಾಗಿ ಕೂಡಿ ಆರೋಣ-ಎಂದು ಹೇಳಿದನು. ಅದಕ್ಕೆ ಮಂಡೂಕರಾಜನು ಸಂತೋಷಿಸಿ ಆ ಹಾವಿನ ಬೆನ್ನಿನ ಮೇಲೇರಿ ಕುಳಿತುಕೊಂಡಿರಲು, ಆತನ ಮಂತ್ರಿಗಳೂ ಬಂದು ಅದರ ಬೆನ್ನನ್ನೇರಿ ತಮ್ಮ ಅರಸನ ಸಂಗಡ ಕುಳಿತುಕೊಂಡರು. ಆಮೇಲೆ ಮಂದವಿಪ್ರನು ಸ್ವಲ್ಪಹೊತ್ತು ತಿರುಗಿ ದಣಿದವನಹಾಗೆ ಮೆಲ್ಲಮೆಲ್ಲಗೆ ನಡೆ