ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿವಿಗ್ರಹವು. 123 ಮುದಂ ವಿಷಾದಕ್ಕರದ ಹಿಮಾಗಳು ಸಮೋ ವಿವಸ್ವಾನುಕೃದಂ ಕೃತಘ್ನ ತಾ || ವಿರುದ್ಧ ಬುದ್ದಿ ಶುಚನಾಪರಂ ನಯ ಯಸ್ಸದ್ಧಾ ಅಮಿ ಹಂತಿ ದುರಯಃ | ಸೂರನು ಕತ್ತಲೆಯನ್ನು ಹೋಗಲಾಡಿಸುವಹಾಗೆ ಹೇಮಂತ ಋತುವು ಶರತ್ಕಾಲವನ್ನೂ, ಕೃತಘ್ನತೆಯು ಸುಕೃತವನ್ನೂ, ವಿವೇಕವು ದುಃಖವನ್ನೂ, ನೀತಿ ಆಪತ್ತನ್ನೂ, ದುರ್ನಿತಿ ಸಂಪತ್ತನ್ನೂ, ವಿಶಾ ದವು ಸಂತೋಷವನ್ನೂ, ಹೋಗಲಾಡಿಸುವುವು. ಆದಕಾರಣ ನೀತಿ ಯಿಂದ ಪ್ರಜೆಗಳನ್ನು ಪಾಲಿಸುವ ಅರಸನು ಸುಖವನ್ನು ಅನುಭವಿಸು ವನು-ಎಂದು ಹೇಳಿದ ಚಿರಂಜೀವಿಯ ನುಡಿಗಳಿಗೆ ಮೇಘವರ್ಣನು ಸಂತೋಷಿಸಿ, ಆತನಿಗೆ ಅರ್ಧರಾಜ್ಯವನ್ನು ಕೊಟ್ಟು ತಾನು ಸಾಮ್ರಾಜ್ಯ ವನ್ನು ಅನುಭವಿಸುತ್ತಾ ಸುಖವಾಗಿದ್ದನು. ಎಂದು ವಿಷ್ಣು ಶರ್ಮನು ಹೇಳಿದ ಸಂಧಿವಿಗ್ರಹವನ್ನು ಕೇಳರಾಜನಂದಸರು ಸಂತೋಷಿಸಿದರು. --<loooo