ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಖನಾಶವು.

129

Imprudence-The Iiion, the Fox and the Ass. ಒಂದು ವನದಲ್ಲಿ ಒಂದು ಸಿಂಹವುಂಟು. ಅದಕ್ಕೆ ಕೃತನಾಗಿ ಒಂದು ನರಿ ಇದ್ದಿತು. ಒಂದು ದಿನ ನಿಂಹವು ಮಹಾದೈನದಿಂದ ನರಿಯನ್ನು ನೋಡಿ-ನನಗೆ ಮಹೋದರವ್ಯಾಧಿ ಸಂಭವಿಸಿತು. ಕತ್ತೆಯ ಕಿವಿಯನ್ನ ಕರುಳನ್ನೂ ಭಕ್ಷಿಸಿದರೆ ಆರೋಗವು ವಾಸಿಯಾಗುವುದು. ಇನ್ನೊಂದು ಮದ್ದಿನಿಂದಲೂ ಗುಣವಾಗುವುದಿಲ್ಲ. ಆದಕಾರಣ ಮಹಾಪ್ರಯತ್ನದಿಂದ ಕತ್ತೆಯನ್ನು ಕರೆದುಕೊಂಡು ಬಾ ಎಂದು ಹೇಳಿತು. ಆ ಮಾತನ್ನು ಕೇಳಿ ನರಿ ಮಹಾಪ್ರಸಾದವೆಂದು ಕತ್ತೆಯನ್ನು ಕರೆದುಕೊಂಡು ಬರುವುದ ಕ್ಯಾಗಿ ಹೊರಟು, ಪಟ್ಟಣದ ಸಮೀಪದಲ್ಲಿ ಒಬ್ಬ ಅಗಸನ ಬಡಕತ್ತೆಯನ್ನು ನೋಡಿ, ತನ್ನ ಮಾತಿನ ಚಾತುರದಿಂದ ಅವನ್ನು ಮೋಸಗೊಳಿಸಿ ಕರೆದು ಕೊಂಡು ಹೋಗಿ ಹಿಂದಕ್ಕೆ ಒಪ್ಪಿಸಿತು. ನಿಂಹವು ಅದನ್ನು ಹಿಡಿದುಕೊ ಳ್ಳಬೇಕೆಂದು ಏಳುತ್ತಲೇ ಅದು ಅಂಜಿ ಓಡಿ ಹೋಯಿತು. ತರುವಾಯ ನಿಂಹವು ನರಿಯನ್ನು ನೋಡಿ ನನಗೆ ಸಿಕ್ಕಿದ ಕತ್ತೆ ಓಡಿ ಹೋಯಿತ್ತು, ಏನು ಮಾಡಲಿ ?-ಎಂದಿತು. ( ನನ್ನ ಪ್ರಜ್ಞಾ ಬಲದಿಂದ ಅದನ್ನು ಮರಳಿ ಕರೆದುಕೊಂಡು ಬರುತ್ತೇನೆ' ಎಂದು ಹೇಳಿ, ನರಿಯು ತಿರುಗಿ ಕತೆಯ ಬಳಿಗೆ ಹೋಗಿ, ಎಲೈ ನೀನು ಬಹು ಪಾಪಮಾಡಿದುದರಿಂದ ಕತ್ತೆಯಾಗಿ ಹುಟ್ಟಿ ಅಗಸನ ಮೈಲಿಗೆ ಬಟ್ಟೆಗಳನ್ನು ಹೊತ್ತು ಹೊತ್ತು ಕಂಗೆಟ್ಟು ಹೋಗುತ್ತೀಯೆ. ನನ್ನ ಹಾಗೆ ಸೈಟ್ನಾವಿಹಾರನಾಗಿ ಸಂಚರಿಸುತ್ತಾ ಕಾಡಿನಲ್ಲಿ ಏಕಿಲೊಲ್ಲೆ? ದೇವರು ನನಗೆ ಕೊಡುವ ಹಾಗೆ ನಿನಗೆ ಆಕಾರವನ್ನು ಕೊಡದೆ ಇರುವನೇ ? ಎಂದು ನುಡಿಯಲು,-ನಿಂಹವು ನನ್ನನ್ನು ಕೊಲ್ಲಲಿಕ್ಕೆ ಬಂದುದರಿಂದ ನಾನು ಓಡಿದೆನು-ಎಂದು ಕತ್ತೆ ಹೇಳಿತು, ಅದನ್ನು ಕೇಳಿ ನರಿಯುಓಹೋ, ನಿನಗೆ ತಿಳಿಯದೆ ಹೋಯಿತು. ಸಿಂಹವು ಎದ್ದುದು ನಿನ್ನನ್ನು ಕೊಲ್ಲುವುದಕ್ಕಾಗಲ್ಲ ಮತ್ತೇಕೆಂದರೆ, ನೀನು ಬಂದ ಸಂಗತಿಯನ್ನು ಮಿಕ್ಕ ನಿಂಹ ಶಾರ್ದೂಲ ಮುಂತಾದವುಗಳಿಗೆ ತಿಳಿಸುವುದಕ್ಕಾಗಿ ಎದ್ದಿತು. ನೀನು ಎಂದಿಗೆ ಬಂದೀಯೋ ಎಂದು ಎದುರು ನೋಡುತ್ತಿದೆ. ನನ್ನ ಮಾತನ್ನು ನಂಬಿ ಬಾ, ಬದುಕಿರುವ ತನಕ ನನ್ನ ಜತೆಯಲ್ಲಿ ಸುಖವನ್ನು ಅನಭವಿಸು.