ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ಮಿತ್ರಭೇದತಂತ್ರ: ನೋಡಿ ವಿಕಟಸಂಕಟಗಳು ಸ್ವಲ್ಪ ಹೊತ್ತು ಆಲೋಚಿಸಿ,-ಎಲೆ ಕಂಬುವವೇ, ನಾವು ಒಂದು ಉಪಾಯವನ್ನು ಹೇಳುತ್ತೇವೆ. ನೀನಂಜದೆ ನಮ್ಮ ಮಾತಿನ ಪ್ರಕಾರ ನಡೆದುಕೊಂಡ ಪಕ್ಷದಲ್ಲಿ ನಿನ್ನನ್ನು ನಮ್ಮ ಸಂಗಡ ಕರೆದುಕೊಂಡು ಹೋಗುತ್ತೇವೆ. ಹೇಗೆಂದರೆ : ಒಂದು ಕಟ್ಟಿಗೆಯನ್ನು ನಾವಿಬ್ಬರೂ ಎರಡು ಕೊನೆಗಳಲ್ಲಿ ಮೂಗಿನಲ್ಲಿ ಕಟ್ಟೆ ಕೊಂಡು ಹಾರಿ ಹೋಗುವೆವು. ನೀನು ಆ ಕಟ್ಟಿಗೆಯ ನಡುವನ್ನು ಗಟ್ಟಿಯಾಗಿ ಬಾಯಲ್ಲಿ ಕಚ್ಚಿ ಕೊಂಡು ಬಾಯಿಬಿಡದೆ ಇರಬೇಕುಎಂದು ಹೇಳಿದುವು. ಆ ಮಾತಿಗೆ ಕೂರ್ಮವು ಸಮ್ಮತಿಸಿ ಅವು ತಂದು ಕೊಟ್ಟ ಕಟ್ಟಿಗೆಯ ಮಧ್ಯಭಾಗವನ್ನು ಬಾಯಲ್ಲಿ ಕಚ್ಚಿ ಕೊಂಡಿತು. ಆ ಮೇಲೆ ಆ ಹಂಸಗಳು ಕಟ್ಟಿಗೆಯ ಎರಡು ಕೊನೆಗಳನ್ನೂ ಕಚ್ಚಿ ಕೊಂಡು ಆಕಾಶಮಾರ್ಗವಾಗಿ ಹಾರಿ ಹೋಗುತ್ತಿರಲಾಗಿ, ಒಂದು ಪಟ್ಟಣದಲ್ಲಿರುವ ಜನರು ಇವುಗಳನ್ನು ನೋಡಿ --ಇದೇನು ಅತಿಶಯ ವೆಂದು ಮಹಾಧನಿಯಿಂದ ಮಾತನಾಡಿದರು. ಆ ಧ್ವನಿಯನ್ನು ಕೇಳಿ ಬುದ್ದಿಯಿಲ್ಲದ ಕೂರ್ಮವು ಇದೇನು ಗದ್ದಲ " ಎಂದು ಹಂಸಗಳನ್ನು ಕೇಳಿತು. ಆ ಕ್ಷಣದಲ್ಲೇ ಕಟ್ಟಿಗೆಯ ಪಟ್ಟು ಬಿಟ್ಟು ಅದು ಕೆಳಗೆ ಬಿದ್ದು ಮಾಂಸಾಹಾರಿಗಳಿಗೆ ಎರೆಯಾಯಿತು. ಪೂರ್ವವೃತ್ತಾಂತವು ತಿಳಿಯುವು ದಕ್ಕಾಗಿ ಇನ್ನೊಂದು ಕಥೆಯನ್ನು ಹೇಳುವೆನು ಕೇಳು, ಹಿತರ ಮಾತು ಗಳನ್ನು ಕೇಳುವ ಬುದ್ಧಿವಂತರು ವಿವೇಕಿಗಳೊಳಗೆ ಹೊಗಳಿಸಿಕೊಳ್ಳು ತ್ತಾರೆ. ಪೂರ್ವದಲ್ಲಿ ಅನಾಗತವಿಧಾತ, ಪ್ರತ್ಯುತ್ಪನ್ನ ಮತಿ, ಯಧ್ಯವಿ ಏನು, ಎಂಬ ಹೆಸರುಳ್ಳ ಮೂರು ಮತ್ತ್ವಗಳಿದ್ದುವು. ಅವುಗಳಲ್ಲಿ ಯದ್ಭವಿಪೈನು ಬುದ್ಧಿಹೀನನಾದವರಿಂದ ಉಪಾಯ ತಿಳಿಯದೆ ಸಿಕ್ಕಿ ಕೊಂಡು ಮೃತನಾದನು ಎಂದು ನುಡಿಯಲು, ಆ ಕಥೆಯನ್ನು ಹೇಳಂದು ಟಿಟ್ಟಿಭವು ಕೇಳಿತು. ಅದರ ಹೆಂಡತಿಯಾದ ಹೆಣ್ಣು ಹಕ್ಕಿ ಹೇಳುತ್ತದೆ. The three fishes. ನಾನೀಗ ಹೇಳಿದ ಮಗಳು ಮೂರೂ ಒಂದು ಕೆರೆಯಲ್ಲಿ ಬಹುಕಾಲ ಅನ್ನೋನ್ಯಸ್ನೇಹದಿಂದ ಸಂಚರಿಸುತ್ತಿದ್ದವು. ಒಂದು G