ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

50 ಪಂಚತಂತ್ರ ಕಥಗಳು. ದಿನ ಅವುಗಳಲ್ಲಿ ಅನಾಗತವಿಧಾತ – ಈ ಸಂವತ್ಸರ ಮಳಯಿಲ್ಲದುದರಿಂದ ಕೆರೆ ದಿನೇ ದಿನೇ ಬತ್ತಿಹೋಗುತ್ತಾ ಇದೆ. ನೀರು ಬತ್ತಿ ಹೋಗದ ಮತ್ತೊಂದು ತಟಾಕಕ್ಕೆ ನಾವು ಈಗಲೇ ಹೋಗಬೇಕು. ನಾವು ಆಲಸವನ್ನು ಮಾಡಿ ಹೋಗದೆ ನಿಂತರೆ ಬೆಸ್ತರಪಾಲಾಗುವೆವು. ಒಂದು ಗಳಿಗೆಗೆ ಮುಂಚೆ ಕೆಲವರು ಬೆಸ್ತರು ಬಂದ ಈ ಕೆರೆಯನ್ನು ನೋಡಿ-ನೀರು ಬಹಳ ಬತ್ತಿ ಹೋಯಿತು, ಎರಡು ಮರುದಿನ ವಲ್ಲಿ ಬಲೆಗಳನ್ನು ತೆಗೆದುಕೊಂಡು ಬರೋಣ-ಎಂದು ಒಬ್ಬರೊಂದಿ ಗೊಬ್ಬರು ಮಾತನಾಡಿಕೊಂಡರು. ಇನ್ನು ನಾವು ವಿಳಂಬ ಪಡಿಸಿದರೆ ಕೆಡು ಸಂಭವಿಸೀತು-ಎಂದು ಹೇಳಿತು. ಅದಕ್ಕೆ ಪ್ರತ್ಯುತ್ಪನ್ನ ಮತಿ-ನಾವು ಇಷ್ಟುದೂರ ಆಲೋಚಿಸಬೇಕಾದುದೇನು ? ಅಂಥ ಕೆಲ ಸಬಿದ್ದಾಗ ನೋಡಿಕೊಳ್ಳೋಣ. ಕೆಲಸಬಿದ್ದಾಗ ಯಾರಿಗೆ ಬುದ್ದಿ ಕಡ ಮೆಯಾಗದೆ ಪೂರ್ಣವಾಗಿ ಇರುವುದೋ ಅವನು, ತನ್ನ ಕೆಲಸಗಳನ್ನು ನೆರವೇರಿಸಿ ಕೊಳ್ಳುತ್ತಾನೆ ಎಂದು ನುಡಿಯಿತು. ಯುದ್ಭವಿಪ್ರನು ಇದನ್ನೆಲ್ಲಾ ಕೇಳುತ್ತಿದ್ದು ಏನೂ ಹೇಳದೆ ಸುಮ್ಮನಿದ್ದನು. ಬಳಿಕ ಅನಾಗತವಿಧಾತನು ಬಹಳ ನೀರುಳ್ಳ ಮಡುವಿಗೆ ಜಲಪ್ರವಾಹದ ಮೂಲವಾಗಿ ಪ್ರವೇಶಿಸಿತು. ಮಾರನೆಯ ದಿನ ಆ ಸರ ಸ್ಸಿನ ಬಳಿಗೆ ಬೆಸ್ತರು ಬಂದು ಬಲೆಗಳನ್ನು ಹಾಕಿ ಪ್ರತ್ಯುತ್ಪನ್ನ ಮತಿಯ ನ್ಯೂ ಯದ್ಧವಿಷ್ಯನನ್ನೂ ಇನ್ನೂ ಅನೇಕ ವಿಾನುಗಳನ್ನೂ ಹಿಡಿದರು. ಆಗ ಪ್ರತ್ಯುತ್ಪನ್ನಮತಿ ತಾನು ಸತ್ತಹಾಗೆ . ಅಂಗತ್ತನಾಗಿ ಕದಲದೆ ಬಿದ್ದಿದ್ದಿತು, ಅದು ಸತ್ಯ ಮಾನೆಂದು ಅದನ್ನು ಬೆಸ್ತರು ಬಿಟ್ಟುಬಿಟ್ಟರು, ಯದ್ಭವಿಪೈನು ಉಪಾಯವೇನೂ ಅರಿಯದೆ ಒದೆದುಕೊಳ್ಳುತ್ತಿರಲು ಇದು ಒಳ್ಳೆಯ ಕೊಬ್ಬಿದ ಮಿಾನೆಂದು ಅದನ್ನು ಬುಟ್ಟಿಗೆ ಹಾಕಿದರು. ಅವರು ಹೋದಮೇಲೆ ಪ್ರತ್ಯುತ್ಪನ್ನಮತಿ ಮೆಲ್ಲಗೆ ಜಾರಿಕೊಳಕ್ಕೆ ಪ್ರವೇಶಿಸಿತು. ಎಂದು ಟಿಟ್ಟಿಭ , ಹೇಳಲಾಗಿ ಟಿಟ್ಟ ಭವು ಅದನ್ನು ಅಸಡ್ಡೆ ಮಾಡಿತು. ತರುವಾಯ ಕೆಲವು ದಿನಕ್ಕೆ ಹೆಣ್ಣು ಹಕ್ಕಿ ಮೊಟ್ಟೆಯಿಟ್ಟಿತು.