ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



54

ಪಂಚತಂತ್ರ ಕಥೆಗಳು

ಅಹಿತವನ್ನು ಮಾಡುವ ಅಭಿಲಾಷೆಯಿಂದ ಪ್ರವರ್ತಿಸುತ್ತೀಯೆ. ಇದು
ಉಚಿತವಲ್ಲ. ಮನಸ್ಸಿನಲ್ಲಿ ವಾಕ್ಕಿನಲ್ಲೂ ಏಕ ರೀತಿಯಾಗಿ ಇರದೆ
ಒಂದು ಕಾರ್ಯವನ್ನುದ್ದೇಶಿಸಿ ಸ್ನೇಹಿತರನ್ನು ಸಂಪಾದಿಸಲಿಕ್ಕೆ ಪ್ರಯ
ತ್ನಿಸುವವನೂ, ನಿತ್ಯವೂ ಪ್ರಸಿದ್ಧವಾದ' ಪಾಪಗಳನ್ನು ಮಾಡುತ್ತಾ
ಧರ್ಮವನ್ನು ಮಾಡಬೇಕೆಂದು ನೆನಸುವವನೂ, ಯಾವಾಗಲೂ ಪರರಿಗೆ
ಉಪದ್ರವವನ್ನು ಮಾಡಿ ಧನವನ್ನು ಕಡಹಾಕಬೇಕೆಂಬ ಇಚ್ಛೆಯುಳ್ಳ
ವನೂ, ಕೇವಲ ಶರೀರಸಾಖ್ಯನ್ನಪೇಕ್ಷಿಸಿ ವಿದ್ಯೆಗಳನ್ನು ಅಭ್ಯಾಸಿಸಬೇ ಕೆಂಬ ಮನಸ್ಸುಳ್ಳವನೂ, ವಿವೇಕವಿಲ್ಲದವರೆಂದು ನೀತಿಶಾಸ್ತ್ರಜ್ಞರು ಹೇಳುತ್ತಾರೆ. ತನ್ನನ್ನು ಆಳುವವನಿಗೆ ಮೇಲುಕೋರಿ ಅವನ ಪ್ರಸಾದ ದಿಂದ ಹೊಂದಿದ ಸಂಪತ್ತು ಎಂದಿಗೂ ಕೆಡದು; ತನ್ನ ಯಜಮಾನನಿಗೆ ಕೇಡು ಕೋರಿ ಸಂಪಾದಿಸಿದ ಸಂಪತ್ತು ಅತಿ ತರೆಯಲ್ಲಿ ನಶಿಸುವುದು. ಅರ್ಥಶಾಸ್ತ್ರವನ್ನೋದದ ಕೆಲವರು ದುಷ್ಯರು ತಾವು ತಿಳಿದವರೆಂದು ಆಲೋಚನೆಗಳನ್ನು ಹೇಳಬರುವರು. ಶಾಸ್ತ್ರವನ್ನೂ ದದವನ ಮಗನು ತಾಳಯ ಗಿಡದಲ್ಲಿ ಹುಟ್ಟಿದ ಹಣ್ಣುಗಳು ಮುಳ್ಳುಂಟಾಗಿ ಇರುವಹಾಗೆ ತಂದೆಯ ಹಾಗೆ ಹುಟ್ಟುತ್ತಾನೆ. ನಿನಗೆ ಹೇಳಬೇಕಾದುದು ಏನಿದೆ ? ಯಾವನಾದರೂ ಬಗ್ಗಿ ಸಕೂಡದ ಮರವನ್ನು ಬಗ್ಗಿ ಸಹೋದರೂ, ಕತ್ತಿ ಯಿಂದ ಪರತಶಿಖರವನ್ನು ಕಡಿಯಹೋದರೂ, ಮೂರ್ಖನಿಗೆ ಬುದ್ದಿ ಹೇಳ ಹೋದರೂ, ಅವನು ವಾನರಕ್ಕೆ ಬುದ್ದಿ ಹೇಳಹೋದ ಸೂಚಿ ಮುಖವೆಂಬ ಪಕ್ಷಿಯ ಹಾಗೆ ಹಾನಿಪಡುವನು ಎನಲು, ದಮನಕನುಆ ಕಥೆಯನ್ನು ಕೇಳಬೇಕು ; ಹೇಳು-ಎನಲಾಗಿ, ಕರಟಕನಿಂತೆಂದನು. To give advice to a fool is bad-The Monkey and the Tailor Bird. ಹಿಮಾಲಯ ಪರತದ ಸಮಿಾಪದಲ್ಲಿ ಒಂದು ವನವುಂಟು. ಆ ವನದಲ್ಲಿ ಫಲಭರಿತವಾದ ಅನೇಕ ವೃಕ್ಷಗಳು ತುಂಬಿರುವುವು. ಅಲ್ಲಿ ಸಂಚರಿಸುತ್ತಿದ್ದ ವಾನರಸಮೂಹವು ಒಂದುದಿನ ಶೀತಬಾಧೆಯಿಂದ ಮಿಣ ಕುಹುಳುಗಳ ಗುಂಪನ್ನು ಕಂಡು ಅವು ಬೆಂಕಿಯೆಂದುಕೊಂಡು ಚಳ