ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

59 ಮಿತ್ರಭೇದತಂತ್ರ. ಇರು-ಎಂದು ಹೇಳಲಾಗಿ, ಆ ಕೊಕ್ಕರೆ ಅದೇಪ್ರಕಾರ ಮಾಡಿತು. ತರುವಾಯ ಆ ಮುಂಗಿ ತನ್ನ ಬಿಲದಿಂದ ಹೊರಟು ಸಾಲಾಗಿದ್ದ ಮಾನುಗಳನ್ನು ತಿನ್ನುತ, ಹುತ್ತಿನ ಹತ್ತಿರಕ್ಕೆ ಬಂದು ಅದರಲ್ಲಿದ್ದ ಹಾವನ್ನು ಕೊಂದು, ಮರಕ್ಕೆ ಹತ್ತಿ ಕೊಕ್ಕರೆಯ ಮರಿಗಳನ್ನು ಸಹ ಭಕ್ಷಿಸಿತು. ಆದಕಾರಣ ತನ್ನ ಕ್ಷೇಮಕ್ಕಾಗಿ ಎಷ್ಟು ಮಾತ್ರವೂ ಕನಿ ಕರವಿಲ್ಲದೆ ಹೆರರಿಗೆ ಕೇಡಮಾಡ ಕೋರುವವನಿಗೆ ಎಂದೆಂದಿಗೂ ಮೇಲು ಉಂಟಾಗದು ಎಂದು ತಂದೆ ಹೇಳಿದನು. ಆ ಮಾತುಗಳಿಗೆ ಕಿವಿಗೊಡದೆ ದುಷ್ಟಬುದ್ದಿ ಯು ಅರ್ಧರಾತ್ರಿ ವೇಳಯಲ್ಲಿ ತಂದೆಯನ್ನು ಬಲಾತ್ಕಾರವಾಗಿ ಕರೆದುಕೊಂಡು ಹೋಗಿ ಆ ಮರದ ಪೊಟ್ಟರೆಯಲ್ಲಿ ನಿಲ್ಲಿಸಿ, ಬೆಳಗಿನ ಜಾವದಲ್ಲಿದ್ದು ತನ್ನ ಜಾತಿಯ ಮನ್ನು ಸೇರಿಸಿಕೊಂಡು ಧರಾಧಿಕಾರಿಗಳನ್ನೂ ಕರೆದುಕೊಡು ಸುಬುದ್ದಿ ಯೊಂದಿಗೆ ಆ ಮರದ ಬಳಿಗೆ ಬಂದು, ಆ ಮರಕ್ಕೆ ಸಷ್ಟಾಂಗವೆರಗಿ* ಎಲೈ ವೃಕ್ಷರಾಜನೇ, ನಿನಗೆ ತಿಳಿದ ಸಂಗತಿಯನ್ನು ನಿಜವಾಗಿ ನುಡಿಯ ಬೇಕು ಎಂದು ಪ್ರಾರ್ಥಿಸಿದನು, ಧರಾಧಿಕೃತರು ವೃಕ್ಷವನ್ನು ನೋಡಿ-ಧನವನ್ನು ಯಾರು ಒಯ್ದರು ಎಂದು ಕೇಳಿದರು. ಈ ಧನವನ್ನು ಸುಬುದ್ದಿ ಅಪಹರಿಸಿದನೇ ಹೊರತು ದುಷ್ಕೃಬುದ್ದಿ ಅರಿ ಯನು ಎಂದು ವೃಕ್ಷದ ಪೊಟ್ಟರೆಯಿಂದ ಒಂದು ವಾಕ್ಕು ಕೇಳಿಸಿತು, ಆ ವಾಕ್ಕನ್ನು ಕೇಳಿ ಎಲ್ಲರೂ ಆಕ್ಷ ರಪಟ್ಟು ಏನೂ ತೋರದೆ ಬೆರ ಗಾಗಿ ನಿಂತರು. ಆಗ ಸುಬುದ್ದಿ ಬಹಳ ವ್ಯಸನದಿಂದ ಸ್ವಲ್ಪ ಹೊತ್ತು ಆಲೋಚಿಸಿ ಮರವನ್ನು ಹತ್ತಿ ನೋಡಲಾಗಿ, ಒಂದು ಪೊಟ್ಟರೆ ಕಣೆ ಸಿತು. ಅವಕ್ಕೆ ಒಣಹುಲ್ಲು ತುರುಕಿ ಬೆಂಕಿ ಹಚ್ಚಿ ತಾನು ಗಿಡದಿಂದ ಇಳಿದು ಬಂದನು. ಕೂಡಲೆ ಉರಿ ಹತ್ತಿ ದುಷ್ಟಬುದ್ದಿಯ ತಂದೆಗೆ ಉಸಿರಾಡದೆ, ತಿಟ್ಟು ಮೂಗಿಟ್ಟು ಮೈಸುಟ್ಟು ಅವನು' ತಲ್ಲಣಿಸುತ್ತಾ ಮೊರೆಯಿಟ್ಟುಕೊಂಡು ಗಿಡದ ಮೇಲಿಂದ ಕೆಳಗೆ ಬಿದ್ದನು. ಆಗ ಅವನ ಬಳಿಗೆ ಧರಾಧಿಕೃತರು ಬಂದು-ಇದೇನು ಎಂದು ಕೇಳಲಾಗಿ, ತನ್ನ ಮಗನಾದ ದುಷ್ಟಬುದ್ದಿ ತನಗೆ ಈ ಅವಸ್ಥೆಯನ್ನು ತಂದನೆಂದು ಉಂಟಾ