ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಸುಹೃಲಾಭವು. 67 ಹಾರಿ ಹೋದರೆ ಈಗ ಈ ಆಪತ್ತು ನಮಗೆ ತಪ್ಪುವುದು. ಆಚೆಗೆ ಹೋಗಿ ಬಲೆಯಿಂದ ಬಿಡಿಸಿಕೊಳ್ಳುವುದಕ್ಕೆ ಮತ್ತೊಂದು ಉಪಾಯ ವನ್ನು ಹುಡುಕಬಹುದು-ಎಂದು ಹೇಳಲು, ಪಾರಿವಾಳದ ಹಕ್ಕಿಗಳು ಹಾಗೇಯೆ ಆಗಲಿ ಎಂದು ಅದ್ಭುತವಾಗಿ ಆಕಾಶಕ್ಕೆ ಹಾರಿ ಬಲೆಯನ್ನೆತ್ತಿ ಕೊಂಡು ಹೋದುವು. ಆಗ ಬೆಸ್ತನು ವಿಸ್ಮಯವನ್ನೂ ವಿವಾದವನ ಹೊಂದಿ ತನ್ನಲ್ಲಿ ತಾನು ಹೀಗೆಂದು ವಿತರ್ಕಿಸಿದನು-ಈ ಲೋಕದಲ್ಲಿ ಪಕ್ಷಗಳಿಗೆ ಬಲೆಯೊಡ್ಡಿದರೆ ಅವು ಬಲೆಯಲ್ಲಾದರೂ ಸಿಕ್ಕಿಕೊಳ್ಳಬೇಕು; ಇಲ್ಲವೇ ಬಲೆಯನ್ನು ಹರಿದುಕೊಂಡಾದರೂ ಹೋಗಬೇಕು. ಈ ಪ್ರಕಾರ ಬಲೆಯನ್ನು ಎತ್ತಿಕೊಂಡು ಆಕಾಶಮಾರ್ಗವಾಗಿ ಹಾರಿಹೋಗು ವುದನ್ನು ಇದಕ್ಕೆ ಮುಂಚೆ ಎಲ್ಲಿಯೂ ನೋಡಲಿಲ್ಲ. ಇದು ಬಹಳ ಆಶ್ಚರ್ಯವಾಗಿದೆ. ಈ ಪಕ್ಷಿಗಳು ನೆಲಕ್ಕೆ ವಾಲುವುದನ್ನು ನೋಡಿ ಹೋಗಿ ಹಿಡಿದುಕೊಳ್ಳಬೇಕು ಎಂದು ನೋಡುತ್ತಿದ್ದನು. ಈ ಸಮಯ ದಲ್ಲಿ ಬೂರುಗದ ಮರದ ಮೇಲಿದ್ದ ಕಾಗೆ ಬಹಳ ಹಸಿವಿನಿಂದ ಬಳಲಿ ದರೂ ಈ ಅತಿಶಯವನ್ನು ನೋಡಬೇಕೆಂದು ಪಾರಿವಾಳಗಳ ಹಿಂದೆ ಹೋಗುತಿದ್ದಿತು. ಆ ಬೆಸ್ತನು ಕಪೋತಗಳಿಗೆ ಸಮಾಪವಾಗಿ ಭೂಮಿಯ ಮೇಲೆ ಅತಿತೂರೆಯಾಗಿ ಓಡಿಯೋಡಿ ಅಸುರುಸುರಾಗಿ, ಅವು ದೃಷ್ಟಿಗೆ ಬೀಳದೆ ದೂರವಾಗಿ ಹೋದವರಿಂದ, ಬುಸುಗುಟ್ಟುತ್ತಾ ತಿರುಗಿ ತನ್ನ ಮನೆಗೆ ಹೋವನು, ಚಿತ್ರಗ್ರೀವನು ಬಹುದೂರ ಸಾಗಿಹೋಗಿ ತನ್ನ ಅನುಚರರನ್ನು ನೋಡಿ ನನ್ನ ಸ್ನೇಹಿತನಾದ ಹಿರಣ್ಯಕನೆಂಬ ಮೂಷಿಕ ರಾಜನು ಈ ಕೆರೆಯ ಬಳಿಯಲ್ಲಿದ್ದಾನೆ. ಅವನು ನನ್ನನ್ನು ನೋಡಿದರೆ ಈಗ ನಮಗೆ ಬಂದಿರುವ ಆಪತ್ತನ್ನು ಹೋಗಲಾಡಿಸುವನು, ಆದುದ ರಿಂದ ನಾವಲ್ಲಿಗೆ ಹೋಗೋಣ ಎಂದು ಹೇಳಿದನು. ಕಪೋತಗಳು ಒಳ್ಳೆಯದೆಂದು ಹಿರಣ್ಯಕನ ಬಿಲದ ಮೇಲೆ ವಾಲಿದುವು. ಚಿತ್ರಗ್ರೀವನು ತನ್ನ ಮುಖವನ್ನು ಇಲಿಯ ಬಿಲದಲ್ಲಿಟ್ಟು --ಎಲೈ ಹಿರಣ್ಯಕನೇ, ನಾನು ನಿನ್ನ ಸ್ನೇಹಿತನಾದ ಚಿತ್ರಗ್ರೀವನು. ನನ್ನ ಯೋಗಕ್ಷೇಮವನ್ನು ನೀನೀಗ ವಿಚಾರಿಸಿಕೊಳ್ಳಬೇಕು ಎಂದು ನುಡಿದನು, ಟ .