ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಹೃಲಾಭವು. 69 ಎತ್ತರದಿಂದ ಭೂಮಿಯ ಮೇಲೆ ಇರುವ ಮಾಂಸವನ್ನು ಕಂಡುಕೊಳ್ಳು ವುವು; ಕಾಲವು ಸಮಿಾಪಿಸಿದರೆ ಹತ್ತಿರದಲ್ಲಿದ್ದರೂ ಬಲೆಯ ಹಗ್ಗ ಗಳನ್ನು ಕಂಡು ಹಿಡಿಯಲಾರವು. ಆನೆಗಳಿಗೂ ಸರ್ಪಗಳಿಗೂ ಪಕ್ಷಿ ಗಳಿಗೂ ಬಂಧನವನ್ನೂ ಬುದ್ದಿವಂತರಿಗೆ ಬಡತನವನ್ನೂ ಉಂಟುಮಾ ಡಿದ ವಿಧಿಯನ್ನು ಏನು ಹೇಳಬಹುದು ? ಆಕಾಶದಲ್ಲಿ ಸಂಚರಿಸುವ ಪಕ್ಷಿ ಗಳು ಆಪತ್ತನ್ನು ಹೊಂದುತ್ತವೆ; ಬಹಳ ಆಳವಾದ ಸಮುದ್ರದಲ್ಲಿರುವ ಮಿಾನುಗಳ ಬೆಸ್ತರಿಂದ ಹಿಡಿಯಲ್ಪಡುತ್ತವೆ. ಇದರಲ್ಲಿ ನ್ಯಾಯವಾ ವುದು, ಅನ್ಯಾಯವಾವುದು ? ಕಾಲನು ಆಸಕ್ತಿಯಿಂದ ದೂರದಿಂದ ಕೈಗ ಇನ್ನು ಚಾಚಿ ಪ್ರಾಣಿಗಳನ್ನು ಹಿಡಿದುಕೊಳ್ಳುತ್ತಿರುವಾಗ ಯಾವ ಸ್ಥಾನ ದಲ್ಲಿದ್ದರೇನು !-ಎಂದು ನುಡಿದು, ಹಿರಣ್ಯಕನು ಚಿತ್ರbವನ ಬಂಧನ ಗಳನ್ನು ಕಚ್ಚಿ ಬಿಡಿಸಬೇಕೆಂದು ಹತ್ತಿರಕ್ಕೆ ಬರುವುದನ್ನು ಚಿತ್ರಗೀ ವನು ನೋಡಿ-ಎಲೈ ಸ್ನೇಹಿತನೇ, ಮುಂಚಿತವಾಗಿ ನನ್ನ ಪರಿವಾರದ ಬಂಧಗಳನ್ನು ಕಚ್ಚಿ ಬಿಡಿಸಿ, ಆ ಮೇಲೆ ನನ್ನನ್ನು ಬಿಡಿಸು. ಇವರನ್ನು ನಾನು ಮಕ್ಕಳಂತೆ ಸಾಕಿದೆನು. ಪರಿವಾರದ ಕ್ಷೇಮವನ್ನು ವಿಚಾರಿಸದ ಅರಸನಿಗೆ ರಾಜವು ಹೇಗೆ ನಿಲ್ಲುವುದು ?-ಎಂದು ನುಡಿದನು. ಅದಕ್ಕೆ ಹಿರಣ್ಯಕನು ಬಹಳ ಸಂತೋಷಿಸಿ--ಎಲೈ ಸ್ನೇಹಿತನೇ, ನಿನ್ನ ಗುಣ ಗಳ ನಡವಳಿಕೆಯ ನಿನಗೇಸರಿ, ನಿನ್ನನ್ನು ಹೊಗಳುವುದಕ್ಕೆ ಯಾ ರಿಂದಾದೀತು ? ನಿನ್ನಂಥವರು ಬಹಳ ಅಪೂರ್ವ. ಈ ಲೋಕವ ನ್ನೆಲ್ಲಾ ಆಳುವಂಥ ಶಕ್ತಿ ನಿನಗುಂಟು-ಎಂದು ಚಿತ್ರಗ್ರೀವನನ್ನು ಹೊಗಳ” ಮೊದಲಲ್ಲಿ ಪರಿಜನರ ಬಂಧಗಳನ್ನು ಬಿಡಿಸಿ, ಆ ಮೇಲೆ ಅರಸನ ಬಂಧನವನ್ನು ಬಿಡಿಸಿ, ಅವರಿಗೆಲ್ಲರಿಗೂ ತಕ್ಕಂತೆ ಔತನವಾಡಿ, ಚಿತ್ರ ಗ್ರೀವನನ್ನು ತಬ್ಬಿಕೊಂಡು ಕಳುಹಿಸಿ ತಾನು ತನ್ನ ಸ್ಥಾನಕ್ಕೆ ಹೋದನು. On friendship –The conversation between a Crow and a Rat. ಇದನ್ನೆಲ್ಲಾ ಲಘುಪತನಕನೆಂಬ ಕಾಗೆ ನೋಡಿ ಆಶ ರ ಪಟ್ಟು ಹತ್ತಿರಕ್ಕೆ ಬಂದು-ಎಲೈ ಹಿರಣ್ಯಕನೇ, ನಿನ್ನ ಸ್ನೇಹಿತನಾದ ಚಿತ್ರ