ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

76 ಪಂಚತಂತ್ರ ಕಥೆಗಳ.. ನಾಳದು ದಿನ ಅಮಾವಾಸ್ಯೆ ; ಬ್ರಾಹ್ಮಣರಿಗೆ ಭೋಜನವಿಡಬೇಕು, ಯಾವಯಾವ ಪದರ್ಥಗಳನ್ನು ನಮ್ಮ ಮನೆಯಲ್ಲಿ ಕೂಡಹಾಕಿದ್ದೀಯ? ಹೇಳು - ಎಂದನು. ಆಗ ಹೆಂಡತಿ-ಗಂಡಸರು ತಮ್ಮ ಸಾಮ ರ್ಥೈದಿಂದ ಪದಾರ್ಥಗಳನ್ನು ಸಂಪಾದಿಸಿ ಮನೆಗೆ ತಂದರೆ ಹೆಂಗಸರು ಬೇಕಾದ ಕೆಲಸಕ್ಕೆ ಅವುಗಳನ್ನು ಬಳಸುವರು. ನೀವು ತಾರದಿದ್ದಿರೆ ಮನೆಯಲ್ಲಿ ಏನು ಇದ್ದೀತು ?-ಎಂದಳು. ಅದಕ್ಕೆ ಆತನು ಕೋಪ ದಿಂದ ಹೆಂಡತಿಯನ್ನು ನೋಡಿ-ಪದಾರ್ಥಸಂಗ್ರಹವನ್ನು ಮಾಡಬೇ ಕಾದುದು ಸರಿಯೇ. ಆದರೆ ವಿಸ್ತರಿಸಿ ಸಂಗ್ರಹಮಾಡಬೇಕೆಂಬ ಆಕೆ ಯಾರಿಗೂ ಕೂಡದು. ಪೂರ್ವದಲ್ಲಿ ಒಂದು ನರಿ ಅತಿಸಂಚಯದಲ್ಲಿ ಇಚ್ಛೆಗೊಂಡು ಬಿಲ್ಲಿನ ದೆಸೆಯಿಂದ ಸತ್ತಿತು ಎಂಬುದನ್ನು ಕೇಳಲಿ ಇವೇ ?-ಎಂದನು. " ಆ ಕಥೆಯನ್ನು ನನಗೆ ಹೇಳು' ಎಂದು ಹೆಂಡತಿ ಕೇಳಿದಳು. ಗಂಡನು ಹೇಳುತ್ತಾನೆ - A desire to accumulate too much is improper– The Fox and the Bow. ಅಧಿಷ್ಠಾನಪುರದಲ್ಲಿ ಮಾಂಸವನ್ನು ವಿಕ್ರಯಿಸುವ ಬೆಸ್ತನೊಬ್ಬ ನುಂಟು, "ಅವನು ಒಂದಡವಿಗೆ ಹೋಗಿ ಅಲ್ಲಿ ಒಂದು ಮೃಗವನ್ನು ಕೊಂದು ತೆಗೆದುಕೊಂಡು ಬರುತ್ತಾ, ಒಂದು ದೊಡ್ಡ ಹಂದಿಯನ್ನು ಕಂಡು ದೇವರು ನನಗೆ ಬಹಳ ಮಾಂಸವುಳ ಮತ್ತೊಂದು ಜಂತುವನ್ನು ತೋರಿಸಿದನೆಂದು ಹಿಗ್ಗಿ, ಮುಂಚೆ ತಾನು ಕೊಂದ ಮೃಗವನ್ನು ಕೆಳಗೆ ಇರಿಸಿ ಬಿಲ್ಲಿಗೆ ಅಂಬೇರಿಸಿ ಗುರಿನೋಡಿ ಎಸೆಯಲು, ಆ ಪೆಟ್ಟು ತಗುಲಿದ ಹಂದಿ ಕೋಪದಿಂದ ಅವನ ಮೇಲೆ ಹಾದು ಅವನನ್ನು ಕೊಂದು ತಾನೂ ಬಿದ್ದು ಸತ್ತಿತು. ಒಂದು ನರಿ ಹಸಿಗೊಂಡು ಆಹಾರಕ್ಕೋಸ್ಕರ ತಿರು ಗುತ್ತಾ ಅಲ್ಲಿಗೆ ಬಂದು, ಅಲ್ಲಿ ಸತ್ತು ಬಿದ್ದಿದ್ದ ಆ ಮೃಗ ವರಾಹ ಕಿರಾತ ಕರನ್ನು ನೋಡಿ ಬಹಳ ಸಂತೋಷಿಸಿ ತನ್ನೊಳಗೆ ತಾನಿಂತೆಂದಿತು - ನನ್ನ ಅದೃಷ್ಮದಿಂದಲೇ ಅಲ್ಲವೇ ನನಗೆ ಇಲ್ಲಿ ಆಹಾರವು ವಿಸ್ತಾರವಾಗಿ ಸಿಕ್ಕಿತು ? ಬೆಸ್ತನ್ನೂ ಮೃತನಾದನು; ಮೃಗ ಸೂಕರಗಳ ಸತ್ತುವು.