ಪುಟ:ಪಂಡಿತರಾಜ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ,

  1. # #Sh* * * * 14 }\\ \r # # # # #

ಳ್ಳಬೇಕು? ನಮ್ಮಿಂದ ಮಾಡತಕ್ಕ ಕಾರ್ಯವನ್ನು ನಾವು ಮಾಡಿದರಾಯಿತು, ಹೊಗ ಳುವ ಇಲ್ಲವೇ ನಿಂದಿಸುವ ಕೆಲಸವು ಜನರದು; ಅದು ನಮ್ಮದಲ್ಲ. ನಾವು ಎಷ್ಟೇ ಶ್ರೀಮಂತರಾಗಲಿ ಪಂಡಿತರಾಗಲಿ ನಮ್ಮನ್ನು ನಾವೇ ಹೊಗಳಿಕೊಂಡರೆ ಮೂರ್ಖತನವು ನಮ್ಮ ಪಾಲಿಗೆ ಬರುವದು; ಎಂದು ಉತ್ತರಕೊಡುವರು. ಈ ದೃಷ್ಟಿಯಿಂದ ನೋಡಿ ದರೆ ಆತ್ಮ ಸ್ತುತಿಯು ಯೋಗ್ಯವಾದುದಲ್ಲೊಂದು ಸರ್ವರೂ ಒಪ್ಪಿಕೊಳ್ಳಲೇ ಬೇಕಾಗು ವದು, ವೃಥಾವಲ್ಲ ನಾವೂರಿತ ವಾಣಿಯು ವ್ಯರ್ಥವಾದದ್ದೇ ಸರಿ. ಆದರೆ ಇನ್ನೂ ಸ್ವಲ್ಪ ವಿಚಾರಾಂಶವನ್ನು ಮುಂದಕ್ಕೆ ನೂಕಿದರೆ ಯಥಾರ್ಥವಾದ ಗರ್ವೋಕ್ತಿಯು ಅಯೋಗ್ಯವಾದದ್ದಲ್ಲವೆಂದು ಕೆಲವರ ಅಭಿಪ್ರಾಯವಿರುವದು ನಮಗೆ ಕಂಡುಬರುವದು. ಕೈಲಾಸವಾಸಿಗಳಾದ ವಿದ್ವದ್ವರ್ಯ ವಿಷ್ಣು ಶಾಸ್ತ್ರಿ ಚಿಪಟೂಣಕರವರು ನಿಭಂದಮಾಲೆಯಲ್ಲಿ ಯಥಾರ್ಥವಾದ ಅಭಿಮಾನೋಕ್ತಿಯು ಅಯೋಗ್ಯವಾದದ್ದಲ್ಲವೆಂದೇ ನಾಧನಮಾಡಿದ್ದಾರೆ. ಈ ಮಾತಿಗೆ ಪಂಡಿತರಾಜನ ಮತ್ತು ಭವಭೂತಿಕವಿಯ ವಚನಗ ಳನ್ನು ಉದಾಹರಿಸಿದ್ದಾರೆ. ಪ್ರಿಯಪಾಠಕರೇ! ಕಾಲಿದಾಸನು ಎಲ್ಲಿಯೂ ತನ್ನ ಆತ್ಮಶ್ಲಾಘಿಯನ್ನು ಮಾಡಿಕೊ ಳ್ಳಲಿಲ್ಲ. ಅವನ ಕಾವ್ಯಗಳ ಗುಣಗಳನ್ನು ತಿಳಿಯುವ ರಸಿಕ ಜನರು ಅವನ ಸುತ್ತಲಿದ್ದರು; ಕವಿಯ ಸುತ್ತಲು ಗುಣಜ್ಞರಾದ ಜನರಿದ್ದು ಕವಿಯನ್ನು ಕೊಂಡಾಡಹತ್ತಿದರೆ ಪ್ರಾಯಶಃ ಅವನ ಬಾಯಿಂದ ಗರ್ವೊದ್ದಾರವು ಹೊರಡುವದಿಲ್ಲ. ಸುತ್ತಲೂ ಅರಸಿಕ ಜನರಿದ್ದು ಅಗುಣಜ್ಞ ಸಮಾಜದಲ್ಲಿ ಒಬ್ಬ ಕವಿಯು ಹುಟ್ಟಿದ್ದಾದರೆ ಅವನನ್ನು ಆ ಜನರು ಕೊಂಡಾ ಡುವದೆಂತು? ಭವಭೂತಿಕವಿಗೆ ಮಾತ್ರ ಇಂತಹ ಸ್ಥಿತಿಯಿದ್ದಿತು. ಅವನ ಕಾವ್ಯವು ಆ ಗಣ ಸಮಾಜದಲ್ಲಿ ಮಾನವನ್ನು ಹೊಂದಲಿಲ್ಲ. I ಅರಸಿಕೇಷು ಕವಿತ್ವನಿವೇದನಂ ಸಿರಸಿ ಮಾಲಿ ಖ1 ಮಾಲಿಖ ಮಾಲಿಖ ” ಎಂದು ಅನಿಸಿಬಿಟ್ಟಿತು. ಆದುದರಿಂದಲೇ ಅವನ ಬಾಯಿಂದ • ನಮ್ಮ ಅಪಮರ್ಯಾದೆಯನ್ನು ಯಾರು ಮಾಡುವರು ? ಅವರು ಏನನ್ನಾದರೂ ತಿಳಿದು ಕೊಳ್ಳಲಿ. ಅವರನ್ನು ದ್ದಿಶ್ಯಸಮೀಯತ್ನವಿಲ್ಲ. ನನ್ನ ಸಮಾನ ಧರ್ಮಿಯು ಈ ಜಗತ್ತಿನಲ್ಲಿ ಈಗ ಇದ್ದರೆ; ಅಥವಾ ಮುಂದೆ ಹುಟ್ಟಿದರೆ ಅವನ ಸಲುವಾಗಿ ಈ ಪ್ರಯತ್ನವಿರುವದು. - ಕಾಲವು ನಿರವಧಿಯಾಗಿರುವದರಿಂದ ನನ್ನ ಸಮಾನ ಧರ್ಮಿಯಾದ ಮನುಷ್ಯನು ಮುಂದೆ ಹುಟ್ಟಬಹುದು. ಜಗತ್ತು ವಿಸ್ತ್ರತವಾಗಿರುವದರಿಂದ ಈಗಾದರು ಇರಬಹುದು. ” ( ಹ್ಯಾಗೆ ಸ್ತ್ರೀಯರ ಸಾಧುತ್ವದಲ್ಲಿ ಜನರು ದುರ್ಜನರಾಗಿರುವರೋ ಹಾಗೆ ವಾಣಿಯ ಸಾಧುತ್ವದ ವಿಷಯದಲ್ಲಿಯೂ ಜನರು ದುರ್ಜನರಾಗಿರುವರು.” ಇಂತಹ ಉದ್ಧಾರಗಳು ಹೊರಟಿದ್ದರ ನಾಶ ರ್ಯವು ? ಇದರಂತೆ ಜಗನ್ನಾಥಪಂಡಿತನಿಗಾದರೂ ಅರಸಿಕ ಸಮುದಾಯದಲ್ಲಿ