ಪುಟ:ಪಂಡಿತರಾಜ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. vvvvv vv vvvM/+Y//- +4+ # Pv44 /// معي و يسر يمي يمر میمن یاری می ಪಶ್ಯರಾದ ಯವನ ತರುಣಿಯರು ಪರಪುರುಷಪರಿವೃತವಾದ ಸಭೆಯಲ್ಲಿ ನೀರು ತರುವ ದೆಂದರೇನು ? ಭಗವತಿಯಾದ ಭಾಗೀರಥಿಯ ಅಂಗಗಳಲ್ಲಿ ಜಗನ್ನಾಥನು ವಿಲಯವನ್ನು ಹೊಂದಿ ದನು. ಯಾವ ಪಂಡಿತರಾಜನ ಸ್ತುತಿಯಿಂದ ದೇವನದಿಯು ಸಂತುಷ್ಟೆಯಾದಳೋ ಆ ಸ್ತುತಿಗ್ರಂಥವೀಗ ಗಂಗಾಲಹರಿ 'ಯೆಂದು ಪ್ರಸಿದ್ಧವಾಗಿದೆಯಷ್ಟೇ? ಒಂದುವೇಳೆ ಮೇಲೆ ನಿರ್ದಿಷ್ಟವಾದ ಲೋಕವಾರ್ತೆಯು ದಿಟವಾದರೆ ಗಂಗಾಲ ಹರಿಯ ಪ್ರಣಯನ ಕಾಲದಲ್ಲಿಯೇ ಜಗನ್ನಾಥನ ಆಯುಷ್ಯದ ಸಮಾಪ್ತಿಯಾಯಿತೆಂದು ಸ್ಪಷ್ಟವು. ಅಂದ ಮೇಲೆ ಗಂಗಾಲಹರಿಯನ್ನು ರಚಿಸಿದನಂತರ ಯಾವ ಗ್ರಂಥವನ್ನೂ ರಚಿಸಲಿಲ್ಲವೆಂಬಂತಾಯಿತು. ಅರ್ಧಾತ್ ಜಗನ್ನಾಥವಿರಚಿತವಾದ ಪ್ರಬಂಧಾಂತರಗಳಲ್ಲಿ ಗಂಗಾಲಹರೀಗತವಾದ ಪದ್ಯಗಳು ದೃಗ್ಗೋಚರಿಸಬಾರದು. ಆದರೆ ಗಂಗಾಲಹರಿಯ ಲ್ಲಿದ್ದ ಪದ್ಯಗಳು ಅವನ ಎರಡನೇ ಗ್ರಂಥಗಳಲ್ಲಿ ಕಂಡುಬರುವವು. ಆದುದರಿಂದ ಗಂಗಾ ಲಹರೀ ಪ್ರಣಯನದ ಅವಸಾನದಲ್ಲಿ ಜಗನ್ನಾಥರ ಆಯುಷ್ಯದ ಪರಿಸಮಾಪ್ತಿಯಾಯಿ ತೆಂಬ ವಚನವು ಸಟಿಯಾದದ್ದು. ಗಂಗಾಲಹರಿಭಿನ್ನವಾದ ಜಗನ್ನಾಥ ರಚಿತವಾದ ಮಂದಾಕಿನೀಸ್ತುತಿ ಗ್ರಂಧವಿದ್ದರೆ ಅದರ ಅವಸಾನ ಸಮಯದಲ್ಲಿ ಪಂಡಿತನ ನಿಧನಾವಸರ ವೆಂದು ತಿಳಿಯುವೆವ. ಹಾಗೂ ಇಲ್ಲ. ಅಂದ ಬಳಿಕ ಮೇಲಿನ ಲೋಕವಾರ್ತೆಯು ಸಡಿಯೋ ದಿಟವೋ ವಿದ್ವಾಂಸರು ವಿಮರ್ಶಿಸಬೇಕು. ಗಂಗಾಲಹರಿಯಲ್ಲಿದ್ದ ಪದ್ಯಗಳು ರಸಗಂಗಾಧರದಲ್ಲಿ ಕಂಡುಬರುವವು. विधत्ता निश्शकं निरवधि समाधिं विधिरहो । सुखं शेषे शतां हरिविरतं नृत्यतु हरः ।। कृतं प्रायश्चित्तैरलमथ तपादानविभवः ।। सवित्री कामानां यदि जगति जागर्ति भवती ।। ಓ ಮಾತಃ ಗಂಗೇ, ಬೊಮ್ಮನು ನಿರಂತರ ಸಮಾಧಿಯಲ್ಲಿ ನಿರ್ವಿಶಂಕವಾಗಿ ಕುಳಿ ತುಕೊಳ್ಳಲಿ; ವಿಷ್ಣು ಸುಖವಾಗಿ ಮಹಾಶೇಷನಲ್ಲಿ ಮಲಗಿಕೊಳ್ಳಲಿ; ಆ ಮಹಾರಾಯ ಮಹಾದೇವನು ಯಥೇಷ್ಟವಾಗಿ ತನ್ನ ತಾಂಡವವನ್ನು ಮಾಡುತ್ತಿರಲಿ. ಆ ಪ್ರಾಯಶ್ಚಿ ತ್ರಗಳು ಸಾಕು; ಆ ತಪಸ್ಸು ಆದಾನ ಇವುಗಳ ವೈಭವವು ನಾಕು. ಸಕಲ ಕಾಮನೆಗೆ ಳನ್ನು ಪೂರೈಸುವ ನೀನೊಬ್ಬಳು ಈ ಜಗತ್ತಿನಲ್ಲಿ ಜಾಗ್ರತೆಯಾಗಿದ್ದರೆ ಸಾಕು ! !! - ಗಂಗಾಲಹರಿಯಲ್ಲಿದ್ದ ಈ ಪದ್ಯವು ರಸಗಂಗಾಧರದಲ್ಲಿ ಮಾಧುರ್ಯದ ಉದಾ ಹರಣವಾಗಿರುವದು. ಶgardigid #qft #dAga: || ಇga #g agaana Alaagi: ||