ಪುಟ:ಪಂಡಿತರಾಜ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ, • • ••••••••••••• ವಾದವು ಪ್ರಾರಂಭವಾಯಿತು. ಕಡೆಗೆ ಬ್ರಾಹ್ಮಣರ ಪ್ರತಿನಿಧಿಯ ವಚನಚಾತುರ್ಯದಿಂದ ವಿಸ್ಮಿತನಾಗಿ ಅಶ್ರುತಪೂರ್ವವಾದ ಸಹಸ್ರಶಃ ಯುಕ್ತಿಗಳನ್ನು ಕೇಳಿ ಇತಿಕರ್ತವ್ಯತಾ ವಿಮೂಢನಾಗಿ ವಿವಾದಸಾಗರವನ್ನು ಕಾಜಿಯು ದಾಟದೆ ಅವನಿಂದ ಪರಾಜಯವನ್ನು ಹೊಂದಿದನು. “ ಜಿತಂಜಿತಂ' ಎಂದು ಬ್ರಾಹ್ಮಣರ ಸಮುದಾಯವು ಕರಾಸ್ಕಾಲನಪೂರ್ವ ಕವಾಗಿ ಪ್ರತಿನಿಧಿಯ ಜಯಘೋಷ ಮಾಡಿತು. ಆ ಮೇಲೆ ಊದುತ್ತ ಬಾರಿಸುತ್ತಒಳ್ಳೇ ಉತ್ಸವದಿಂದ ಅವನನ್ನು ಶ್ರೇಷ್ಠಿಯ ಮನೆಗೆ ಕರೆದುಕೊಂಡು ಬಂದರು. ಶ್ರೇಷ್ಠಿಗೆ ಸಕಲವೃತ್ತಾಂತವನ್ನು ತಿಳಿಸಿದರು. ಎಲ್ಲರೂ ಆಶ್ಚರ್ಯಚಕಿತರಾಗಿ ಕಾಜಿಯನ್ನು ಗೆದ್ದ ಆ ಮರ್ತಿಯ ಕುಲಗೋತ್ರಾದಿಗಳನ್ನು ವಿಚಾರಿಸಿದರು. ಅವನಿಂದ ಅಶೇಷವಾಗಿ ಹೇಳಲ್ಪಡಲು ಕಾಶಿಯ ವಿಬುಧರು ಇವನೇ ' ಜಗನ್ನಾಥಪಂಡಿತ ' ನೆಂದು ನಿಶ್ಚಯಿಸಿದರು. ಅನಂತರವೇ ಕಾಜಿಯು ಪಂಡಿತರಾಜನ ಮಿತ್ರನಾಗಿ ದಿಲ್ಲೀಬಾದಶಹನ ಪರಿಚಯವನ್ನು ಪಂಡಿತರಾಜನಿಗೆ ಮಾಡಿಸಿ ಕೊಟ್ಟನಂತೆ. ಈ ವಾರ್ತೆಯ ವಿಷಯವಾಗಿದ್ದ ಅಭಿಜ್ಞರ ಆಕ್ಷೇಪಗಳು:- ಜಗನ್ನಾಥನ ಸ್ವಭಾ ವವು ಅಹಂಕಾರಭೂಯಿಷ್ಠವಾದದ್ದು. ಅವನು ಎರಡನೆಯವರ ಅವಮಾನವನ್ನು ಎಳ್ಳ ಪ್ಲಾದರೂ ಸಹನವಾಡನು. ಇಂತಹ ಮನುಷ್ಯನು ನೀರಿನವನಾಗಿ ಎರಡಯದವರ ಸೇವಕತ್ವವನ್ನು ಅಂಗೀಕರಿಸುವದು ಎಂತಹ ಮಾತೋ !!! ಆಖ್ಯಾಯಿಕೆಗಳು ಸಟ ಯಾಗಿರಲು, ದಿಟವಾಗಿರಲಿ, ಅವುಗಳ ಪ್ರಸಾರವನ್ನು ಅಜ್ಞ ಸಮಾಜದಲ್ಲಿ ಮಾಡತಕ್ಕದ್ದೇ. ಸುಜ್ಞರು ಪಂಡಿತರ ವೈದುಷ್ಯದಿಂದ ಪ್ರೀತರಾದರೆ ಅಜ್ಞರು ಈ ತರದ ಆಖ್ಯಾಯಿಕೆಗೆ ಇನ್ನು ಕೇಳಿ ಪಂಡಿತರಲ್ಲಿ ಗೌರವವುಳ್ಳವರಾಗಿರುವದು ಕಂಡುಬರುವದು. ಅಜ್ಜನ ರಲ್ಲಿ ಕಾಲಿದಾಸನ ವಿಷಯವಾಗಿ ಪ್ರೀತಿ ಇರುವದು ಯಾತರಿಂದ ? ಅವನ ಅನೇಕ ಆಖ್ಯಾಯಿಕೆಗಳು ಪ್ರಚಾರದಲ್ಲಿರುವವು. ಪಂಡಿತರಾಜನ ಗ್ರಂಥಗಳು. ಪ್ರಾಣಾಭರಣಮ್-ನಿರ್ಣಯಸಾಗರ ಮುದ್ರಾಲಯದ ಕಾವ್ಯಮಾಲೆಯ ಪ್ರಥಮ ಗುಚ್ಚದಲ್ಲಿ ಈ ಕಾವ್ಯವು ಪ್ರಕಟಿತವಾಗಿರುವದು. ಈ ಕಾವ್ಯದಲ್ಲಿ ಕಾಮರೂಪ ದೇಶಾಧಿ ಪತಿಯಾದ - ಪ್ರಾಣನಾರಾಯಣ 'ನೆಂಬ ಅರಸನ ಸ್ತುತಿಯುಂಟು. ಇದಕ್ಕೆ ಪಂಡಿತರಾಜ ನಿಂದಲೇ ವಿರಚಿಸಲ್ಪಟ್ಟ ಅತೀವ ಸಂಕ್ಷಿಪ್ತವಾದ ಟಿಪ್ಪಣಿಯುಂಟು. ಅದರಿಂದ ಪದ್ಯಗಳ ಲ್ಲಿಯ ಅಲಂಕಾರ ಧ್ವನ್ಯಾದಿಗಳು ಸುಲಭವಾಗಿ ತಿಳಿಯುವವು. ಈ ಕಾವ್ಯದಲ್ಲಿ ಜಗ ನಾಥನ ಅದ್ವಿತೀಯ ಕವಿತ್ವವು ವ್ಯಕ್ತವಾಗುವದು. ಈ ಕಾವ್ಯದ ಮೊದಲನೇ ಪದ್ಯವು ja_141 48417 7::41ಇg 31 73AI: || {!: ಇನ[failafairHirAga: |