ಪುಟ:ಪಂಡಿತರಾಜ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು.

  • V v tv \/

4 4 / \ + # # # # # # # # # # # # * ರವು ಕಂಗೊಳಿಸುವದೆಂದೂ ಹೇಳುವರು ಎಂದು ಜಗನ್ನಾಥನು ಈ ಶ್ಲೋಕದ ಟಿಪ್ಪಣೆ ಯಲ್ಲಿ ಹೇಳಿರುವನು. ಈ ಕಾವ್ಯದ ೧೦ನೇ ಶ್ಲೋಕವು:- क्षोणी शासति भय्युपद्रवल: कस्यापि न स्यादिति । प्रौढ व्याहरतो वचस्तव कथं देव , प्रतीमा वयम् प्रत्यक्षं भवतो विपक्षनेत्र हैद्य मुत्पतद्भिः क्रुधा ।। यद्युष्मत्कुलकोटि मूलपुरुषा निर्भद्यते भास्करः ।। ಓ ಕಾಮರೂಪಾಧಿಪತೇ! ನಾನು ಭೂಮಂಡಲವನ್ನು ಆಳುತ್ತಿರಲು ಯಾವನಿಗೂ ತ್ರಾಸಲೇಶವಾದರೂ ಆಗಲಾರದೆಂಬ ನಿನ್ನ ಪ್ರೌಢವಚನದಲ್ಲಿ ನಾವು ಹೇಗೆ ವಿಶ್ವಾಸವನ್ನಿ ಡುವಾ ? ನಿನ್ನ ಪ್ರತ್ಯಕ್ಷದಲ್ಲಿಯೇ ಸ್ವರ್ಗಕ್ಕೆ ಹೋಗುವ ನಿನ್ನ ವೈರಿಗಳು ನಿಮ್ಮ ಕುಲದ ಮೂಲಪುರುಷನಾದ ಸೂರ್ಯನ ಮಂಡಲವನ್ನು ಭೇದಿಸುವರಲ್ಲ ? ರಣಾಂಗಣದಲ್ಲಿ ಮಡಿದು ಸ್ವರ್ಗಕ್ಕೆ ಹೋಗುವವರು ಮೊದಲು ಸೂರ್ಯಮಂಡಲ ವನ್ನು ಭೇದಮಾಡಿ ಹೋಗುವರೆಂದು ಶ್ರುತಿಯುಂಟು. ಕಾಮರೂಪಾಧಿಪತಿಯಿಂದ ಹತ ರಾದ ವೈರಿಗಳು ಅವನ ಸಮಕ್ಷದಲ್ಲಿಯೇ ಸೂರ್ಯಮಂಡಲವನ್ನು ಭೇದಮಾಡಿ ಹೋಗು ವದು ಸ್ವಾಭಾವಿಕವು. ಅದನ್ನೇ ಕವಿಯು ವ್ಯಾಜಸ್ತುತ್ಯಲಂಕಾರದಿಂದ ಮನೋಹರ ವಾಗಿ ವರ್ಣಿಸಿದ್ದಾನೆ. ಈ ಶ್ಲೋಕದಿಂದ ಅರಸನು ಸೂರ್ಯವಂಶದವನಿದ್ದನೆಂದು ಊಹಿಸಲು ಬರು ವಂತಿದೆ. ಈ ಕಾವ್ಯದ ೧೨ನೇ ಶ್ಲೋಕದಲ್ಲಿ ಕವಿಯು ಅರಸನ ಪ್ರತಾಪಸೂರ್ಯನು ಪ್ರಭಾತೋನ್ಮುಖನಾಗಿದ್ದನೆಂದು ಬಣ್ಣಿಸಿರುವನು. ೧೪ನೇ ಶ್ಲೋಕದಲ್ಲಿ ಸಸ್ಯಗ್ರಹಗಳ ಹೆಸರುಗಳನ್ನು ತೆಗೆದುಕೊಂಡು ಅಂರ್ಥಾ೦ತರದಿಂದ ಅರಸನನ್ನು ಸರ್ವಗ್ರಹಾಶ್ರಯನ ನ್ನಾಗಿ ಮಾಡಿರುವನು. ಹದಿನಾರನೆಯ ಶ್ಲೋಕದಲ್ಲಿ ಬೊಮ್ಮನ ಮನೆಯಿಂದ ಮೂಲೋ ಕವನ್ನು ನೋಡುವದಕ್ಕಾಗಿ ಹೊರಟು ಸರಸ್ವತಿಯು ದೇವತೆಗಳಲ್ಲಿ ಕೆಲವು ದಿವಸಗಳ ವರೆಗೆ ಇದ್ದು ಪುನಃ ಕೌತುಕದಿಂದ ಭೂಮಂಡಲದಲ್ಲಿ ಭ್ರಮಿಸಿ ರಾಜನೇ ಸತ್ಯಕ್ಕೆ ಆಗರ ವಾದ ನಿನ್ನ ಮುಖಾಂಬುಜದಲ್ಲಿ ಸಾಂಪ್ರತ ಸುಖವಾಗಿರುವಳೆಂದು ವರ್ಣಿಸಿರುವೆನು. ಈ ಕಾವ್ಯದ ೨೦ನೇ ಶ್ಲೋಕದಿಂದ ಪಟ್ಟಿ ಶಯುದ್ಧವು ಆಗಣ ಕಾಲದಲ್ಲಿ ಪ್ರಚಾರದಲ್ಲಿ ಇದ್ದಿತೆಂದು ಗೊತ್ತಾಗುವದು. ಈ ಕಾವ್ಯದ ಇಪ್ಪತ್ತಾರನೇ ಪದ್ಯವು ಕಮನೀಯವಾಗಿರುವದು,