ಪುಟ:ಪಂಡಿತರಾಜ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ವಂಡಿತನು. ೨೩ s/

  • # # # # # # # # # # # # 4ft 2 #stha

ಗಿರುವದು. ಅಡಿಗಡಿಗೆ ಈ ಕಾವ್ಯದಲ್ಲಿ ಅನುಪ್ರಾನಾಲಂಕಾರವು ಚಮಕಿಸುತ್ತಿದ್ದರೂ ಪಂಡಿತರಾಜನು ಹಠಾತ್ಕಾರದಿಂದ ಸದಾಕರ್ಷಣವನ್ನು ಮಾಡಿರುವದು ತೋರುವದಿಲ್ಲ. ಮಾದರಿಗಾಗಿ ಈ ಕಾವ್ಯಗಳೊಳಗಿನ ಕೆಲವು ಸುಂದರ ಪದ್ಯಗಳನ್ನು ಪ್ರಿಯಪಾಠಕರ ಮುಂದೆ ಉದಾಹರಿಸುವೆವು. ಮೊದಲನೆಯ ಶ್ಲೋಕದಲ್ಲಿ ಮಾಲೆಯಿಂದ ಹೇತ್ವಲಂಕಾ ರವು ಉಪನಿಬದ್ಧವಾಗಿ ಶ್ಲೋಕಕ್ಕೆ ಅಂತ್ಯಂತ ಸೌಭಾಗ್ಯವನ್ನುಂಟು ಮಾಡಿರುವದು.:- ಉಲ್ಲಾಸಃ ಸುಲ್ಲವಂಕೇರುಹ ಪಟಲವತನ್ಮತ್ತ ಪುಷ್ಪಂಧಯಾನಾಂ || ನಿಸ್ತಾರಃ ಶೋಕದಾವಾನಲವಿಕಲಹೃದಾಂ ಕೋಕಸೀಮಂತಿನೀನಾಂ || ಉತ್ಪಾತನಾಮನಾನಾಮುಸಹತತಮನಾಂ ಚಕ್ಷುಷಾ೦ಪಕ್ಷಪಾತಃ | ಸಂಘಾತಃ ಕೋಪಿ ಧಾಮ್ರಾ ಮಯಮುದಯಗಿರಿ ಪ್ರಾಂತತಃಪ್ರಾದುರಾಸಿಕ್ ಅಗೋ ಅಲ್ಲಿ ನೋಡಿರಿ : ಉದಯಾಚಲದಿಂದ ಒಂದು ವಿಲಕ್ಷಣವಾದ ತೇಜಸ್ಸಿನ ರಾಶಿಯು ಹುಟ್ಟುತ್ತಿರುವದು. ಅದರಿಂದಲೆ ಅರಳಿದ ಕಮಲಗಳ ಕದಂಬದ ಮದ್ಯದಿಂದ ಹೊರಡುವ ಮಕರಂದದ ಪಾನದಿಂದ ಉನ್ಮಾದವನ್ನು ಹೊಂದಿದ ಭ್ರಮರಗಳ ಉಲ್ಲಾ ಸವು ಉಂಟಾಗುತ್ತಿರುವದು. ಅದರಿಂದಲೇ ಶೋಕಾಗ್ನಿಯಿಂದ ದಗ್ಧಹೃದಯಗಳುಳ್ಳ ಕೊಕಸೀಮಂತಿನಿಯರ ದುಃಖದ ಉದ್ದಾರವಾಗುತ್ತಿರುವದು. ಅದರಿಂದಲೇ ತಮ್ಮ ಪರಾಕ್ರಮವನ್ನೆಲ್ಲ ಕಳೆದುಕೊಂಡ ಕತ್ತಲೆಗಳ ನಾಶವಾಗುತ್ತಿರುವದು. ಅದರಿಂದಲೇ ನೇತೇಂದ್ರಿಯಕ್ಕೆ ಸಹಾಯವಾಗುತ್ತಿರುವದು. ಅಹೋ ! ಎಂತಹ ತೇಜೋರಾಶಿಯಿದು !!! ವಾಚಕರೇ ಪದ್ಯ ರಾಗಮಣಿಯಂತೆ ರಕ್ತವರ್ಣದಿಂದ ಶೋಭಿಸುವ ಭಾಸ್ಕರನ ಕಿರಣಗಳ ವರ್ಣನವನ್ನು ನೋಡಿರಿ ! ಆಲೇಪಾ ಹಿಂಗುಲಾನಾಮಿವ ಧರಣಿಭುಜಾಮಚ್ಚನೌಥಾಗ್ರ ಮೌಲಿ | ಸ್ವಿಮುಕ್ಷಾರುಹಾಣಾಮಭಿನವ ವಿಲಸತ್ಪಲ್ಲವೋಲ್ಲಾಸಲೀಲಾಃ | ಪ್ರೌಢಪ್ರಾಲೇಯಮುಂಜೋಪರಿಚಿತಖದಿರಾಂಗಾರಭಾರಾ ಆವಾರಾತ್ | ಪಾರಾವಾರಾತ್ಪಯಾಂತೋ ದಿನಕರಕಿರಣಾಮಂಗಲಂ ನಃ ಕೃಪೀರನ್ | ಅರಮನೆಗಳ ಮೇಲೆ ಬಿದ್ದ ಸೂರ್ಯಕಿರಣಗಳು ಹಿಂಗುಲವೆಂಬ ಧಾತುವಿನ ಲೇಪ ದಂತೆ ಕಾಣಿಸುತ್ತಿದ್ದವು. ವೃಕಾಗ್ರಭಾಗದಲ್ಲಿ ಬಿದ್ದ ಕಿರಣಗಳು ಚಿಗುರೆಲೆಗಳ ಶೋಭೆ ಯನ್ನು ಹೊಂದಿದ್ದವು. ಹಿಮಮುಂಜದ ಮೇಲೆ ಪತಿತವಾದ ಕಿರಣಗಳು ತರೇದ ಕಟ್ಟಿ ಗೆಯ ಕೆಂಡದಂತೆ ತೋರುತ್ತಿದ್ದವು. ಇಂತಹ ಕಿರಣಗಳು ನಮಗೆ ಮಂಗಲವ ನ್ನುಂಟುಮಾಡಲಿ. ಕೆಳಗಣ ಪದ್ಯದಲ್ಲಿ ಕವಿಯು ಪ್ರಾಚೀದಿಗಂಗನೆಗೆ ಪುತ್ರರತ್ನವು ಹುಟ್ಟಿದ್ದರಿಂದ ಉತ್ಸವ ಉಂಟಾಯಿತೆಂದು ವರ್ಣಿಸಿರುವನು:-