ಪುಟ:ಪಂಡಿತರಾಜ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ. ಪಂಡಿತರಾಜನ ವರ್ಣನಶೈಲಿಯನ್ನು ನೋಡಿರಿ:-- ಪ್ರಭಾತೇ ಸ್ನಾ ತೀನಾಂ ನೃಪತಿರಮಣೀನಾಂ ಕುಚಿತ ! ಗತೋ ಯಾವನಾ ತರ್ಮಿಲತಿ ತವತೋಯ್ಕೆ ರ್ಮೃಗಮದಃ | ಮೃಗಾನ್ಯಾವತ್ತೈಮಾನಿಕ ಶತಸಹಸ್ಯ: ಪರಿವೃತಾ | ವಿಶಂತಿ ಸ್ವಚ್ಛಂದಂ ವಿಮಲವಪುಷೇ ನಂದನವನಂ || ಓ ಭಾಗೀರಥೀ, ಪ್ರಭಾತಕಾಲದಲ್ಲಿ ನಿನ್ನ ಜಲದಲ್ಲಿ ಸ್ನಾನಮಾಡತಕ್ಕ ನೃಪರಮ ಏಣಿಯರ ಕುಚಗಳಿಗೆ ಲೇಪಿಸಿದ ಕಸ್ತೂರಿಯು ನಿನ್ನ ಜಲದೊಡನೆ ಕೂಡಿಕೊಳ್ಳಲು ಅಂತ ಹ ಕಸ್ತೂರಿಯನ್ನಿತ್ತ ಕಸ್ತೂರಿಮೃಗಗಳು ವಿಮಾನದಲ್ಲಿ ಕುಳಿತು ಸ್ವಚ್ಛಂದವಾಗಿ ನಂದನ ವನಕ್ಕೆ ತೆರಳುವವು. ಇಲ್ಲಿದ್ದ ಹೃದಯಂಗಮವಾದ ಅತಿಶಯೋಕ್ತಿಯು ಯಾರ ಮನ ಸನ್ನು ಆನಂದಪಡಿಸಲಿಕ್ಕಿಲ್ಲ? ಇನ್ನೊಂದು ಶ್ಲೋಕವನ್ನು ನೋಡಿರಿ:--ಇದರಲ್ಲಿ ಉಪಸರ್ಗದಿಂದ ಧಾತ್ವರ್ಥವು ಬದಲಾಗುವದನ್ನು ಉದಾಹರಿಸಿದ್ದಾನೆ... ನಿಧಾನಂ ಧರ್ಮಾಣಾಂ ಕಿಮಸಿಕ ವಿಧಾನಂ ನವಮುದಾಂ | ಪ್ರಧಾನಂ ತೀರ್ಧಾನಾಮಮಲ ಪರಿಧಾನಂ ಜಗತಃ || ಸಮಾಧಾನಂ ಬುದ್ಧರಥ ಖಲು ತಿರೋಧಾನಮಧಿಯಾಂ | - ಯಾಮಾಧಾನಂ ನಃ ಪರಿಹರತು ತಾಪಂ ತವವಪುಃ | ಪಂಡಿತರಾಜನು ಅರಸರ ಸೇವೆಯಿಂದ ನಿರ್ವಿಣ್ಣನಾಗಿದ್ದಾನೆಂದು ಕೆಳಗಣ ಶ್ಲೋ ಕದಿಂದ ತಿಳಿಯುವದು:- ಪುರೋಧಾವಂ ಧಾವಂ ಪ್ರವಿಣಮದಿರಾ ಪೂರ್ಣಿತದೃಶಾಂ | ಮಹೀಪಾನಾಂ ನಾನಾತರುಣತರಖೇದಾತಿ ನಿಯತಂ || ಮಮೈ ವಾಯಂ ಮಂರ್ತು ಸ್ವಹಿತಶತ ಹಂತುರ್ಜಡಧಿಯೋ | ವಿಯೋಗಕ್ಕೇ ಮಾತರ್ಯದಿಹ ಕರುಣಾತಃ ಕ್ಷಣಮಪಿ | ಐಶ್ವರ್ಯದಿಂದ ಮದೋನ್ಮತ್ತರಾದ ಅರಸರ ಮುಂದೆ ಗಂಗೇ! ಓಡಾಡಿ ಬೇಸ ತೆನು. ಅದರಿಂದ ನನಗೆ ಪ್ರಬಲವಾದ ದುಃಖವೇ ಆಯಿತಲ್ಲದೆ ಸುಖವೇನು ಸಿಗಲಿಲ್ಲ. ನಿನ್ನ ಸ್ತೋತ್ರವನ್ನು ಮಾಡದೆ ನಿನ್ನ ಕಾರುಣ್ಯದಿಂದ ವಿಯೋಗವನ್ನು ಹೊಂದಿದೆನು ಇದು ಯಾರ ಅಪರಾಧವು ? ಮಂದಬುದ್ದಿಯಾದ ಆತ್ಮಹಿತಘಾತುಕನಾದ ನನ್ನ ಅಪ ರಾಧವಲ್ಲದೆ ಮತ್ತಾರದು ? ಈ ಮೇರೆಗೆ ಸುಧೆಯ ಮಾಧುರ್ಯವನ್ನು ಧಿಕ್ಕರಿಸಿದ ವಚನಪರಂಪರೆಯಿಂದ ಗಂಗೆ ಯನ್ನು ಸ್ತುತಿಸಿ ಕಡೆಗೆ;