ಪುಟ:ಪಂಡಿತರಾಜ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. f\\ \\/ ಬಧಾನ ಪ್ರಾದೇವ ದೃಢಮರಮಣೀಯಂ ಪರಿಕರಂ || ಕೀರೀಟೇ ಚಾಲೇಂದುಂ ನಿಯಮಯ ಪುನಃ ಪನ್ನಗಗಣೈಃ || ನ ಕುರ್ಯಾಸ್ತ್ರಂ ಹೇಲಾಮಿತರಜನ ಸಾಧಾರಣತಯಾ | ಜಗನ್ನಾಥಸ್ಥಾಯಂ ಸುರುಧುನಿ! ಸಮುದ್ಧಾರ ಸಮಯಃ | ಮಾತೇ ಏಳು; ತೀವ್ರವಾಗಿ ಟೊಂಕಕಟ್ಟಿಕೊಂಡು ನಿಲ್ಲು. ಕಿರೀಟದಲ್ಲಿ ಬಾಲ ಚಂದ್ರನನ್ನು ಇಟ್ಟು ಕೊಂಡು ಪನ್ನಗಗಣದಿಂದೊಡಗೂಡಿ ಉತ್ತಿ ತಳಾಗು. ಸಾಧಾರಣ ರಾದ ಇತರ ಜನರಂತೆ ತಿರಸ್ಕಾರವನ್ನು ಮಾಡಬೇಡ, ಜಗನ್ನಾಥನ ಉದ್ಧಾರಸಮಯವು ಈಗುಂಟು. ಲಕ್ರಿಲಹರಿ, ಸರಸವಾದ ಶಿಖರಿಸೀವೃತ್ತದ ಪದ್ಯಗಳಿಂದ ಒಡಗೂಡಿದ ರಮೆಯ ಸ್ತುತಿಪರ ವಾದ ಈ ಕಾವ್ಯವೂ ಜಗನ್ನಾಥನ ಅತುಲ ಕಲ್ಪನಾಶಕ್ತಿಯನ್ನೂ, ಅಲೌಕಿಕ ಪ್ರತಿಭೆ ಯನ್ನೂ, ಅಚುಂಬಿತ ವರ್ಣನಾಸಾಮರ್ಥ್ಯವನ್ನೂ ವ್ಯಕ್ತಗೊಳಿಸುವದು. ಈ ಕಾವ್ಯದ ಮೊದಲನೆಯ ಪದ್ಯವು समुन्मीलनीलांबुजनिकरनीराजितरुचामपांगानां भगैरमृतमसृणीश्रेणिमसृणैः ।। ह्रियाहीनं दीनं भृशमुदरलीनं करुणया । हरिश्यामा सामामवतु जडसामाजिकमपि । ಜಗನ್ನಾಥನ ಪದ್ಯಗಳು ಸರಲವಾದವುಗಳೂ, ಪ್ರಾಸಬದ್ಧವಾದವುಗಳೂ ಇರುತ್ತ ವೆಂಬದಕ್ಕೆ ಇದೊಂದೇ ಶ್ಲೋಕದ ಉದಾಹರಣವು ಸಾಕು. ಅರಳಿದ ನೀಲಕಮಲಗಳ ಕಾಂತಿಯನ್ನು ಹರಣಮಾಡುವ ( ಕಟಾಕ್ಷದ ಕಾಂತಿಯು ನೀಲವಾಗಿರುತ್ತದೆಂಬದು ಕವಿ ಸಮಯ) ಅಮೃತವನ್ನು ಸಿಂಪಡಿಸುವ ಕಟಾಕ್ಷಗಳಿಂದ, ನಾಚಿಕೆಯಿಂದ ಹೀನನೂ, ದೀನನೂ, ಜಡನೂ ಆದ ನನ್ನನ್ನು ರಮೆಯು ಕರುಣೆಯಿಂದ ಕಾಪಾಡುವಳೇ? ನೋಡಿರಿ. ಪಂಡಿತರಾಜನು ಎಷ್ಟು ಮೆತ್ತಗೆ ಆಗಿದ್ದಾನೆ. ಸರಸ್ವತಿಯು ತನ್ನ ವೀಣೆಯನ್ನು ಬಾರಿಸುವ ದನ್ನು ಬಿಟ್ಟು ಪಂಡಿತರಾಜನ ಕವಿತೆಯನ್ನು ಕೇಳಿದಳು. ಲಕ್ಷ್ಮಿಯು ವಶವಾಗಲಿಲ್ಲೇ? ಆಕೆಯ ಮುಂದೆ ಇಷ್ಟು ದೀನತೆ ಯಾಕೆ? ಭವಭೂತಿಯ ಶಿಖರಿಣಿಯು ಮನೋಹರವಾಗಿರುವದೆಂದು ಹೇಳುವರಲ್ಲವೇ ? ಜಗನ್ನಾಥನ ಶಿಖರಣೆಯಲ್ಲಿ ಮನೋಹರತೆ ಏನು ಕಡಿಮೆ ? ಇಲ್ಲಿಯೂ ಅರ್ಥಗೌರವ ವಿದೆ; ಅಲಂಕಾರಸೌಭಾಗ್ಯವ ತುಂಬಿ ತುಳುಕುವದು; ಲಕ್ಷ್ಮೀಲಹರಿಯಲ್ಲಿಗಿಂತ ಗಂಗಾ